ಕ್ರೈಮ್-ಪೋಕಸ್
ಹುಣಸಗಿ ತಾಲ್ಲೂಕಿನ ಹೆಬ್ಬಾಳ (ಬಿ) ಗ್ರಾಮ ಪಂಚಾಯಿತಿ ಗೆ ಬರುವ ಬೈಲಾಪುರ ತಾಂಡಾದಲ್ಲಿ ಪರಶುರಾಮ ರಾಠೋಡ ಹಾಗೂ ಪಾಮಾನಾಯ್ಕ ಎಂಬುವವರ ಮನೆ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿ 50 ಲೀಟರ್ ಬೆಲ್ಲದ ಕೊಳೆ ಯನ್ನು ಹಾಗೂ 4 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಜಪ್ತಿ ಮಾಡಿರುವ ಘಟನೆ ಬುಧವಾರ ನಡೆದಿದೆ.
ಈ ಸಾರಾಯಿಯನ್ನು 300 ರೂಪಾಯಿಗಳಿಗೆ 1 ಲೀಟರ್ ತುಬಿ ಕೊಡಲಾಗುತ್ತದೆ ಎಂದು ತಾಂಡಾದ ನಿವಾಸಿಗಳಿಂದ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಬೈಲಾಪುರ ತಾಂಡಾದ ನಿವಾಸಿಗಳಾದ ಪರಶುರಾಮ ರಾಠೋಡ ಅವರ ಮನೆಯಲ್ಲಿ 2 ಲೀಟರ್ ಸಾರಾಯಿ 20 ಲೀಟರ್ ಬೆಲ್ಲದ ಕೊಳೆ ಹಾಗೂ ಪಾಮಾನಾಯ್ಕ ಎಂಬುವವರ ಮನೆಯಲ್ಲಿ 2 ಲೀಟರ್ ಸಾರಾಯಿ 30 ಲೀಟರ್ ಬೆಲ್ಲದ ಕೊಳೆ ಯನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಪರಾರಿಯಾಗಿದ್ದು ಪತ್ತೆ ಹಚ್ಚಿ ಬಂಧಿಸಲಾಗುವುದು ಈ ಕುರಿತು ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ನಿರೀಕ್ಷಕ ಶ್ರೀಶೈಲ ಒಡೆಯರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪ ನಿರೀಕ್ಷಕರಾದ ಸೋಮಪ್ಪನಾಯಕ,
ಕು. ಪೂಜಾ ಕೆ ಖರ್ಗೆ, ಲಕ್ಷ್ಮಣ, ಜಂಬುನಾಥ, ಮಹೇಂದ್ರ ಕುಮಾರ್, ಸಂದೀಪ್ ನಾಯಕ, ಸಂಪತ್ ಕುಮಾರ್, ಯಮನಪ್ಪ, ಲಾಲಸಾಬ್, ಮರೆಪ್ಪ ತೇಲ್ಕರ್ ಸೇರಿದಂತೆ ಇತರರು ಹಾಜರಿದ್ದರು.
Be the first to comment