ರೈತ- ಧ್ವನಿ
ಬೆಳೆದ ಮೆಣಸಿನಕಾಯಿ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ಭೂಮಿಗೆ ಚೆಲ್ಲಿದ ವೀರಾಪುರದ ರೈತ”
ಸಾಲ ಮಾಡಿ ಮೆಣಸಿನಕಾಯಿ ಬೆಳೆದ ಬಡ ರೈತನ ಬದುಕಿನಲ್ಲಿ ಆಟವಾಡುತ್ತಿರುವ ಕರೋನಾ ವೈರಸ್
ಬೆಳಗಾವಿ:-ಈ ಕರೋನಾ ವೈರಸ್ ಎಂಬ ಮಾರಿಯಿಂದ ಮೆಣಸಿನಕಾಯಿ ಬೆಳೆಯುವ ರೈತನಿಗೂ ಸಾಕಷ್ಟು ನಷ್ಟವಾಗಿದ್ದು, ಜೀವನ ನಡೆಸುವುದು ಹೇಗೆ ಎಂಬುದಕ್ಕೆ ಕಣ್ಣೀರು ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹದ್ದೇ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದ ಚಂದ್ರಗೌಡ ಹಿತ್ತಲಮನಿ ಎಂಬ ಬಡ ರೈತನ ಬದುಕಿನಲ್ಲಿ ಕರೋನಾ ವೈರಸ್ ಮಹಾ ಮಾರಿಯೂ ತುಂಬಾನೇ ಕಂಟಕವಾಗಿದೆ.
ವೀರಾಪುರ ಗ್ರಾಮದ ಮಲಪ್ರಭಾ ನದಿ ದಂಡೆಯ ಸರಹದ್ದುವಿನಲ್ಲಿರುವ 2 ಎಕರೆ ಜಮೀನಿನಲ್ಲಿ ಸಾಲ ಮಾಡಿ ಬೆಳೆದ ಮೆಣಸಿನಕಾಯಿಯೂ ಸೂಕ್ತ ಬೆಲೆ, ಮಾರುಕಟ್ಟೆ ಹಾಗೂ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಕಾರಣ ಮಾರಾಟಕ್ಕೆ ಕಿತ್ತ ಮೆಣಸಿನಕಾಯಿಯನ್ನು 5 ದಿನಗಳಿಂದ ಮೆಣಸಿನಕಾಯಿ ಕಿತ್ತು ಭೂಮಿಗೆ ಚೆಲ್ಲುತ್ತಿದ್ದಾರೆ, ಬೆಳೆದ ಮೆಣಸಿನಕಾಯಿ ಮಾರಾಟ ಮಾಡಿ ಜೀವನ ನಿರ್ವಹಣೆಗೆ, ಸಾಲ ತೀರಿಸಬೇಕೆಂಬ ಹಂಬಲಿಕೆಯಲ್ಲಿದ್ದ ಈ ರೈತನಿಗೆ ಈ ಕರೋನಾ ಮಾರಿ ತುಂಬಾನೇ ಕಂಟಕವಾಗಿದೆ. ಆದ್ದರಿಂದ ಇಂದು ರೈತನ ಹೊಲಕ್ಕೆ ನಮ್ಮ
ಅಂಬಿಗ ನ್ಯೂಸ್ ತಂಡ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿತು. ಆದ್ದರಿಂದ ಇನ್ನಾದರೂ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮೆಣಸಿನಕಾಯಿ ರೈತರ ಜೀವನದಲ್ಲಿ ಬೆಳಕಾಗುವರೇ ಎಂಬುದನ್ನ ಕಾದುನೋಡಬೇಕಿದೆ.
Be the first to comment