ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಾಗೂ ಹಗಲುವೇಷ ಕಲಾವಿದರಿಂದ ಕೊರೋನಾ ಜಾಗೃತಿ ಜಾಥ ಜರುಗಿತು.ಡಿವೈಎಸ್ಪಿ ಶಿವಕುಮಾರ ರವರ ನಿಧೆ೯ಶನದಲ್ಲಿ ಸಿಪಿಐ ಹಾಗೂ ಪಿಎಸ್ಐರವರ ನೇತೃತ್ವದಲ್ಲಿ ಜಾಗೃತಿ ಜಾಥ ಪಟ್ಟಣದ ಪ್ರಮುಖ ಬೀದಿಗಳಲ್ಲಿ,ವೃತ್ತಗಳಲ್ಲಿ ಸಂಚರಿಸಿತು.ಈ ಸಂದಭ೯ದಲ್ಲಿ ಸಿಪಿಐ ಪಂಪನಗೌಡ ಮಾತನಾಡಿ ಕೊರೋನಾ ವಿರುದ್ಧದ ಸಕಾ೯ರ ಸಾರಿರುವ ಸಮರಕ್ಕೆ ಸವ೯ರೂ ಸಹಕಾರ ನೀಡಬೇಕು.ಮನೆಯಲ್ಲಿರುವವರೇ ಶೂರರು,ಲಾಕ್ ಡೌನ್ ಮತ್ತು 144ಸೆಕ್ಷನ್ ಪರಿಪಾಲಿಸುವವರೇ ನಿಜವಾದ ಧೀರರು ಎಂದರು.ಭಯ ಭೀತಿ ಪಡಬಾರದು ಆರೋಗ್ಯ ಇಲಾಖೆಯ ನಿಧೇ೯ಶನಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಾವ೯ಜನಿಕರಿಗೆ ಕರೆ ನೀಡಿದರು.ಹಗಲುವೇಷ ಕಲಾವಿದರು ವಿವಿದ ವೇಶಗಳಲ್ಲಿ ಸಾವ೯ಜನಿಕರನ್ನು ಆಕಷಿ೯ಸಿ ಕೊರೋನಾ ಕುರಿತು ಜಾಗೃತಿ ಮೂಡಿಸಿದರು.
ಕೊರೋನಾ ಭೀಕರತೆ ಹಾಗೂ ನಿಯಮಗಳನ್ನು ಉಲ್ಲಂಘಿಸಿದರೆ ಎದುರಿಸಬೇಕಾಗಿರೋ ಅಪಾಯ ಕುರಿತು ತಮ್ಮ ವಿಶಿಷ್ಟವಾದ ಕಲೆಯ ಮೂಲಕ ಜಾಗೃತಿ ಮೂಡಿಸಿದರು. ಪಿಎಸ್ಐ ತಿಮ್ಮಪ್ಪ ಹಾಗೂ ಪೊಲೀಸ್ ಸಿಬ್ಬಂದಿ, ಹಗಲುವೇಷ ಕಲಾವಿದರಾದ ವೀರೇಶ,ಬಸವರಾಜ,ಮಂಜುನಾಥ,ಕುಂಟ ಈರಣ್ಣ,ಮಹೇಶ,ಕೃಷ್ಣಪ್ಪ,ರಮೇಶ ಮುಂತಾದವರು ಭಾಗವಹಿಸಿದ್ದರು.
Be the first to comment