ಕಿತ್ತೂರು ಪಿ ಎಸ ಆಯ್ ಯವರಿಂದ ಕರೋನ ಜಾಗೃತಿ

ವರದಿ:- ಬಸವರಾಜು ಎಂ ಕೆ ಹುಬ್ಬಳ್ಳಿ

ಜೀಲ್ಲಾ ಸುದ್ದಿಗಳು

ರಾತ್ರಿ ವೇಳೆಯಲ್ಲೂ ಹಳ್ಳಿಗಳಿಗೆ ಭೇಟಿಕೊಟ್ಟು ಧ್ವನಿ ವರ್ಧಕದ ಮೂಲಕ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಅರಿವು ಮೂಡಿಸುತ್ತಿರುವ ಕಿತ್ತೂರು psi ಕುಮಾರ ಹಿತ್ತಲಮನಿಯವರು.

ಕಿತ್ತೂರು ಪೊಲೀಸ್ ಠಾಣೆಯ ವತಿಯಿಂದ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದು, ಕಿತ್ತೂರು cpi ಶ್ರೀಕಾಂತ್ ತೋಟಗಿ ಯವರ ನಿರ್ದೇಶನದಲ್ಲಿ psi ಅವರಾದ ಕುಮಾರ ಹಿತ್ತಲಮನಿ, ಎಲ್ಲಾ asi ಗಳು, ಪೊಲೀಸ್ ಠಾಣಾ ಸಿಬ್ಬಂದಿಗಳು ತುಂಬಾನೇ ಜಾಗೃತಿ ಕ್ರಮಗಳನ್ನು ತೆಗೆದುಕೊಂಡು ಪ್ರತಿ ಹಳ್ಳಿಗೂ ಹೋಗಿ ಕರೋನಾ ವೈರಸ್ ಬಗ್ಗೆ ತುಂಬಾನೇ ಜಾಗೃತಿ ಮೂಡಿಸುತ್ತಿದ್ದಾರೆ. ಕಿತ್ತೂರು psi ರವರಾದ ಕುಮಾರ ಹಿತ್ತಲಮನಿಯವರಂತೂ ಕರೋನಾ ವೈರಸ್ ತಡೆಗಟ್ಟುವ ಬಗ್ಗೆ ತುಂಬಾನೇ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿ ಪ್ರತಿ ಹಳ್ಳಿಗೂ ಭೇಟಿಕೊಟ್ಟು ಧ್ವನಿ ವರ್ಧಕದ ಮೂಲಕ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಾಕಷ್ಟು ಸಲಹೆಗಳನ್ನು ಕೊಡುತ್ತಿದ್ದಾರೆ.

Be the first to comment

Leave a Reply

Your email address will not be published.


*