ಹಿರಿಯ ಪತ್ರಕತ೯, ಸಂಪಾದಕ ಎಂ.ಬಿ.ದೇಸಾಯಿ ನಿಧನ:ಕೂಡ್ಲಿಗಿ ಪತ್ರಕತ೯ರಿಂದ ಸಂತಾಪ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮೊಟ್ಟ ಮೊದಲಬಾರಿಗೆ ಕನ್ನಡ ಪತ್ರಿಕೆಯೊಂದನ್ನ ಪ್ರಾರಂಭಿಸಿ,ಕನ್ನಡ ಜ್ಯೋತಿಯನ್ನು ಬೆಳಗಿಸಿದ ಹಿರಿಯ ಪತ್ರಕತ೯ ಹಾಗು ಹಿರಿಯ ಸಂಪಾದಕರಾದ ಎಂ.ಬಿ.ದೇಸಾಯಿ ರವರು ನಿಧನರಾಗಿದ್ದಾರೆ.ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.ಅವರ ಅಗಲಿಕೆಗೆ ಕೂಡ್ಲಿಗಿ ಪತ್ರಕರ್ತರು ಸಂತಾಪ ವ್ಯೆಕ್ತಪಡಿಸಿದ್ದಾರೆ. ಪತ್ರಕತ೯ರ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರಾದ ಬೆಳ್ಳಗಟ್ಟೆ ಕೃಷ್ಣಪ್ಪರವರು ನುಡಿನಮನ ಸಲ್ಲಿಸಿದರು. ಎಂ.ಬಿ.ದೇಸಾಯಿರವರು ಲೋಕದಶ೯ನ ವಾರಪತ್ರಿಕೆ ಪ್ರಾರಂಭಿಸಿ ಕೆಲವೇ ವಷ೯ಗಳಲ್ಲಿ ಅದನ್ನು ದಿನಪತ್ರಿಕೆಯನ್ನಾಗಿಸಿ,ಪ್ರಸ್ಥುತ ನಂ1ಪ್ರಾದೇಶಿಕ ಪತ್ರಿಕೆಯನ್ನಾಗಿ ಅಭಿವೃದ್ಧಿಪಡಿಸಿದ ಹಿರಿಯ ಸಂಸ್ಥಾಪಕ ಸಂಪಾದಕರಾಗಿದ್ದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿ ರಾಜ್ಯದ ಪ್ರಮುಖ ಹೋರಾಟಗಾರರ ಸಾಲಿನಲ್ಲಿದ್ದವರು.ಕನ್ನಡ ಪರ ಹೋರಾಟಗಳಲ್ಲಿ ನಿರಂತರವಾಗಿ ಗುರುತಿಸಿಕೊಂಡವರು.ಇವರ ಸಮಾಜ ಸೇವೆ ಹಾಗೂ ಹೋರ‍ಟದ ಎದೆಗಾರಿಕೆತನಕ್ಕೆ. ಕನಾ೯ಟಕ ರಾಜ್ಯೋತ್ಸವ ಪ್ರಶಸ್ಥಿ ಸೇರಿದಂತೆ ಹತ್ತು ಹಲವು ರಾಜ್ಯ,ರಾಷ್ಟ್ರಪ್ರಶಸ್ಥಿಗಳು ಇವರ ಮುಡಿಯನ್ನಲಂಕರಿಸಿವೆ.ಇವರ ಅಗಲಿಕೆಯಿಂದಾಗಿ ಪತ್ರಿಕಾರಂಗಕ್ಕೆ ಗ್ರಹಣ ಪ್ರಭಾವ ಬೀರಿದಂತಾಗಿದೆ ಎಂದು ಕೃಷ್ಣಪ್ಪ ನುಡಿದರು.ಸಂತಾಪ- ಎ.ಬಿ.ದೇಸಾಯಿ ಅವರ ಅಗಲಿಕೆಗೆ ಕೂಡ್ಲಿಗಿ ಪತ್ರಕತ೯ರ ಸಂಘದ ಪದಾಧಿಕಾರಿಗಳು ಸಂತಾಪ ವ್ಯೆಕ್ತಪಡಿಸಿದ್ದಾರೆ. ದೆಸಾಯಿರವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬವಗ೯ಕ್ಕೆ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ದಯಪಾಲಿಸಲೆಂದು ಕೂಡ್ಲಿಗಿ ಪತ್ರಕತ೯ರು ಪ್ರಾಥಿ೯ಸಿದ್ದಾರೆ.ಅವರು ಈ ಮೂಲಕ ಎಂ.ಬಿ.ದೇಸಾಯಿ ಅವರ ನಿಧನಕ್ಕೆ ತೀವ್ರಸಂತಾಪ ವ್ಯೆಕ್ತಪಡಿಸಿದ್ದಾರೆ.ಹಿರಿಯ ಹಾಗೂ ಯುವ ಪತ್ರಕರ್ತರಿದ್ದರು.

Be the first to comment

Leave a Reply

Your email address will not be published.


*