ಪಡಿತರ ಅಕ್ರಮ ತಡೆಯಲು ಮುಂದಾದ ಸುರಪುರ ತಹಶಿಲ್ದಾರ ನಿಂಗಣ್ಣ ಬಿರಾದಾರ್ ಮೇಲೆ ಹಂಚಿಕೆದಾರಿಂದ ಬೆದರಿಕೆ

ವರದಿ:- ರಾಘವೇಂದ್ರ ಮಾಸ್ತರ ಸುರಪುರ

ರಾಜ್ಯ ಸುದ್ದಿಗಳು

*Big breaking news*

ಅಂಬಿಗ ನ್ಯೂಸ್ ಯಾದಗಿರಿ

  ಪಡಿತರ ಅಂಗಡಿಗಳ ಅಕ್ರಮ ತಡೆಯಲು ಮುಂದಾದ ಸುರಪುರ ತಹಶಿಲ್ದಾರ ನಿಂಗಣ್ಣ ಬಿರಾದಾರ ಮತ್ತು ಸಿಬ್ಬಂದಿಗಳೊಂದಿಗೆ ಹಂಚಿಕೆ ದಾರರು ಮತ್ತು ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ.

ಸುರಪುರ ತಹಶಿಲ್ದಾರ ನಿಂಗಣ್ಣ ಬಿರಾದಾರ ಹಾಗೂ ‌ಕೆಲ ಸಿಬ್ಬಂದಿಗಳ ರಿಜಿಸ್ಟರ್ ಮತ್ತು ತಕ್ಕಡಿ ಪರಿಸಿಲಿಸುವಾಗ 
ಕೆಂಚಪ್ಪ ಮತ್ತು ಶಿವಪ್ಪ ಎಂಬುವರು ತಹಶಿಲ್ದಾರರಿಗೆ ಏರು ಧ್ವನಿಯಲ್ಲಿ ಮಾತನಾಡಿದಲ್ಲದೇ ಮನ ಬಂದಂತೆ ನಿಂದಿಸಿದ್ದಾರೆ ಎನ್ನಲಾಗಿದೆ.

ಕೆಂಚಪ್ಪ,ಶಿವಪ್ಪರವರ ಮೇಲೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಮತ್ತು ಅಧಿಕಾರಿಗಳಿಗೆ ನಿಂದನೆ ಕೇಸ ದಾಖಲಿಸಲು ತಹಶಿಲ್ದಾರರು ಕೆಂಭಾವಿ ಪೊಲೀಸ್ ಠಾಣೆಗೆ ದೌಡಾಯಿಸಿದರು.

ಗ್ರಾಮದ ಪಡಿತರ ಅಂಗಡಿಗಳಲ್ಲಿ ಜನರಿಗೆ ಮೋಸ ಮಾಡಿ ಪಡಿತರ ಹಂಚಿಕೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ  ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ಮಾಡಿದರು.

ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಈ ಘಟನೆ  ನಡೆದಿದ್ದು ತಾಲ್ಲೂಕ ದಂಡಾಧಿಕಾರಯವರು ಇಂತ ಪರಿಸ್ಥಿತಿ ಎದುರಿಸಬೇಕಾದರೆ ಜನಸಾಮಾನ್ಯರ ಸ್ಥಿತಿ ಎಂತಹದು ಎಂಬುದು ಊಹಿಸಲು ಸಾಧ್ಯವಿಲ್ಲ ತಾಲ್ಲೂಕಿನಾದ್ಯಂತ ಇಂಥ ಕೆಲ ಭ್ರಷ್ಟ ಪಡಿತರ ಹಂಚಿಕೆದಾರರಗೆ ರಾಜಕೀಯ ಕೃಪೆ ಇರುವುದು ಗುಟ್ಟಾಗಿ ಉಳಿದಿಲ್ಲ

ಧಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ತಮ್ಮ ಬೆಂಬಲಿಗರಿಂದ ಬೆದರಿಕೆ ಹಾಕುತ್ತಿರುವುದು ಇದೆ ಮೊದಲೇನಲ್ಲ ಇಂಥವರ ಹೆಡೆಮುರಿ ಕಟ್ಟಲು ಅಧಿಕಾರಿಗಳಿಗೆ ಜನಸಾಮಾನ್ಯರು ಮತ್ತು ಸಂಘ ಸಂಸ್ಥೆಗಳು ಮತ್ತು ಸುರಪುರ ಶಾಸಕರಾದ ರಾಜುಗೌಡರು ಬೆಂಬಲವಾಗಿ ನಿಲ್ಲಬೇಕಿದೆ.ಅಂದಾಗ ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ತಕ್ಕ ಮಟ್ಟಿಗಾದರು ತಲುಪಿಸಬಹುದು

ಈ ಕುರಿತು
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Be the first to comment

Leave a Reply

Your email address will not be published.


*