ಕ್ರೈಮ್-ಪೋಕಸ್
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದ ಬಸಪ್ಪ ಎಂಬ ದೂರುದಾರ,ತಾನು ದೂರು ನೀಡಿದ್ದಕ್ಕೆ ಆರೋಪಿಗಳು ತನ್ನ ಹಾಗೂ ತನ್ನ ಕುಟುಂಬ ಸದಸ್ಯರನ್ನು ತೆಗಿತೀವಿ ಅಂತಾರೇ ನಮ್ಮನ್ನು ರಕ್ಷಿಸಿ..ಅಂತ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಈ ಮೂಲ ವಿನಂತಿಸಿದ್ದಾನೆ,ಈ ಸಂಬಂದ ಬಸಪ್ಪ ಸ್ವತಃ ವೀಡಿಯೋ ಹೇಳಿಕೆ ನೀಡಿದ್ದಾನೆ.
*ಘಟನೆ-* ತನ್ನ ಮೇಲೆ ಹಾಗೂ ತನ್ನ ಕುಟುಂಭ ಸದಸ್ಯರ ಮೇಲೆ ಮನೆಯ ಹತ್ತಿರದಲ್ಲಿರುವ ಸಹೋದರ ಸಂಬಂದಿಗಳು, ಎಪ್ರೆಲ್ 9ರಂದು ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು. ಸಿದ್ದಾಪುರ ಗ್ರಾಮದ ಬಸಪ್ಪ ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುನೀಡಿದ್ದಾನೆ. ತನ್ನ ತಾಯಿ ವೃದ್ಧೆಯಿದ್ದು ಅವಳ ಮೇಲೆ ಕಬ್ಬಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೈ ಮುರಿದಿದ್ದಾರೆ.ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿ,ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.ತೀರಾ ಗಾಯಗೊಂಡಿದ್ದ ತನ್ನಿಂದ ಪೊಲೀಸರಿಗೆ ಸ್ಪಷ್ಟ ಮಾಹಿತಿ ಕೊಡಲಾಗದ ಕಾರಣ.ಮಾಹಿತಿ ಕೊರತೆಯಾಗಿದ್ದು,ಪ್ರಕರಣದಲ್ಲಿ ಪ್ರಮುಖ ಅಂಶಗಳಿಲ್ಲವಾಗಿದೆ.ನಿಜಘಟನೆಗಳಿಗು ಅದರಲ್ಲಿರುವುದಕ್ಕೂ ಬಹಳ ವ್ಯೆತ್ಯಾಸವಿದೆ ಎಂದು ಬಸಪ್ಪ ಎಫ್ಐಆರ್ ನ್ನು ಆಕ್ಷೇಪಿಸಿದ್ದಾನೆ.ತಾವ್ಯಾರೂ ಮನೆಯಲ್ಲಿಲ್ಲದ ವೇಳೆ ಅವರೇ ನಮ್ಮಮನೆಯ ಬಾಗಿಲು ಮುರಿದು,ಸಾಕಷ್ಟು ದಾಂಧಲೆ ಮಾಡಿದ್ದಾರೆ.ದುಬಾರಿ ಸಾಮಾನು ಸಲಕರಣೆಗಳನ್ನು ನಜ್ಜುಗುಜ್ಜು ಮಾಡಿದ್ದಾರೆ. ನಗದು ಹಣ ಕೆಲಬಂಗಾರದ ಆಭರಣಗಳನ್ನು ಕದ್ದೊಯ್ಯುದಿದ್ದಾರೆ ಎಂದು ಆರೋಪಿಸಿದ್ದಾನೆ. *ಮಾರಣಾಂತಿಕ ಹಲ್ಲೆ-* ಹಲ್ಲೆ ಮಾಡಿದವರೇ ನಮ್ಮನ್ನು ತಗಿತೀವಿ(ಹತ್ಯೆ ಮಾಡೋದು)ಎಂದು ಬೊಬ್ಬೆಹೊಡಿತಿದ್ದಾರೆ.ಕಾರಣ ತನ್ನ ತಾಯಿಯನ್ನು ಕೊಲ್ಲುವ ಯತ್ನದಲ್ಲಿ ಅವಳ ಕೈ ಮುರಿದಿದೆ,ತಮ್ಮ ಮೇಲೆ ಹತ್ಯೆಯ ಯತ್ನಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಾರಣಾಂತಿ ಹಲ್ಲೆ ಮಾಡಿದ್ದಾರೆ ಎಂದು ಬಸಪ್ಪ ದೂರಿದ್ದಾನೆ.
*ಪ್ರಾಣ ಬೆದರಿಕೆ-* ತಮ್ಮ ದಾಯಾಧಿಗಳಿಂದಲೇ ಕುಟುಂಬವು ಪ್ರಾಣಬೆದರಿಕೆಗೆ ಗುರಿಯಾಗಿದೆ.ತಾಯಿ ಅವರಿಂದ ಹಲ್ಲೆಗೊಳಗಾಗಿ ಬಳ್ಳಾರಿಯ ಓಪಿಡಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ.ತನ್ನ ತಾಯಿಯಲ್ಲಿಗೇ ಪೊಲೀಸರು ತೆರಳಿ ಅವಳ ಹೇಳಿಕೆಯನ್ನು ಪಡೆಯಬೇಕಿದೆ ಹಾಗೂ ತನ್ನಿಂದ ಮರುಹೇಳಿಕೆಯನ್ನು ಪೊಲೀಸರು ಪಡೆಯಬೇಕಿದೆ. ತನಗೂ ಹಾಗೂ ತನ್ನ ಕುಟುಂಬದವರಿಗೆ ಅವರು ಪ್ರಾಣ ಬೆದರಿಕೆ ಒಡ್ಡಿದ್ದಾರೆ. ತನ್ನೊಂದಿಗೆ ನಾಗಭೂಷಣ.ಗಂಗಮ್ಮ, ದುರುಗಮ್ಮ,ಪರಶುರಾಮರನ್ನು ಕೊಲ್ಲಲು ಯತ್ನಿಸಿದ್ದು. ಆರೋಪಿಗಳಾದ ತಿಪ್ಪೇಶ.ರುದ್ರೇಶ.ಮಲ್ಲೇಶ. ಲಕ್ಷ್ಮೀ ಇವರನ್ನು ಕೊಲೆಯತ್ನ ಆರೋಪದಡಿ ಶಿಕ್ಷೆಗೆ ಗುರಿಮಾಡಬೇಕು ಎಂದು ಬಸಪ್ಪ ಒತ್ತಾಯಿಸಿದ್ದಾನೆ.
*ಎಸ್ಪೀ ಸಾಹೇಬ್ರೇ ಕಾಪಾಡಬೇಕು-*
ತನಗೆ ಹಾಗು ತನ್ನ ಕುಟುಂಬದ ಸದಸ್ಯರಿಗೆ ಅವರು ಪ್ರಾಣ ಭಯ ಒಡ್ಡಿದ್ದಾರೆ.ಕಾರಣ ಅವರಿಂದ ಬಳ್ಳಾರಿ ಎಸ್ಪಿ ಸಾಹೇಬರೇ ನಮ್ಮನ್ನು ಕಾಪಾಡಬೇಕಾಗಿದೆ ಎಂದು ಬಸಪ್ಪ ಕಣ್ಣೀರಿಟ್ಟಿದ್ದಾನೆ.ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್ಪಿಯವರ ಹತ್ತಿರ ತಾಯಿ ಹಾಗೂ ಎಲ್ಲರೂ ತೆರಳಿ,ದೂರು ನೀಡಿ ತಮಗೆ ರಕ್ಷಣೆ ಕೊಡಿ ಎಂದು ಕೋರುವುದಾಗಿ ಬಸಪ್ಪ ತಿಳಿಸಿದ್ದಾನೆ.ಈ ಕುರಿತು ಬಸಪ್ಪ ವೀಡಿಯೋ ಹೇಳಿಕೆ ನೀಡಿದ್ದಾನೆ.
Be the first to comment