ಜೀಲ್ಲಾ ಸುದ್ದಿಗಳು
ಹರಿಹರ:-ಕರೋನಾ ವೈರಸ್ ನಿಯಂತ್ರಣಕ್ಕಾಗಿ ಜನರು ಮನೆಯಿಂದ ಹೊರಗೆ ಬಾರದಂತೆ ಇಡೀ ದೇಶವನ್ನು ಬ್ಲಾಕ್ ಡೌನ್ ಮಾಡಲಾಗಿದೆ .
ಈ ಲಾಕ್ ಡೌನ್ ನಿಂದ ನೇರವಾಗಿ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರಿದೆ .
ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಜನರಿಗೆ ಎರಡು ತಿಂಗಳ ಮುಂಗಡವಾಗಿ ನ್ಯಾಯಬೆಲೆ ಅಂಗಡಿಯ ಮೂಲಕ ಉಚಿತವಾಗಿ ಅಕ್ಕಿ ಮತ್ತು ಗೋಧಿಯನ್ನು ನೀಡುತ್ತಿದೆ.
ಪ್ರತಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಒಬ್ಬ ಸದಸ್ಯನಿಗೆ ಎರಡು ತಿಂಗಳಿಗೆ 10ಕೆಜಿ ಅಕ್ಕಿ ಒಂದು ಕಾರ್ಡಿಗೆ 4 ಕೆಜಿ ಗೋಧಿಯಂತೆ ಹಾಗೂ ಅಂತ್ಯೋದಯ ಕಾರ್ಡಿಗೆ ಎರಡು ತಿಂಗಳಿಗೆ 70 ಕೆಜಿ ಅಕ್ಕಿಯನ್ನು ಉಚಿತವಾಗಿ ಸಮೀಪದ ನ್ಯಾಯಬೆಲೆ ಅಂಗಡಿಯ ಮೂಲಕ ನೀಡಲಾಗುತ್ತಿದೆ .
ಈಗಾಗಲೇ ಬಡವರಿಗೆ ನೀಡುತ್ತಿರುವ ಉಚಿತ ಅಕ್ಕಿ ವಿತರಣೆಯಲ್ಲಿ ನ್ಯಾಯಬೆಲೆ ಅಂಗಡಿಯವರು ಅನೇಕ ಲೋಪಗಳನ್ನು ಎಸಗುತ್ತಿದ್ದು ಬಡವರ ಅನ್ನವನ್ನು ಕದಿಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರತೊಡಗಿದೆ .
ಸಾರ್ವಜನಿಕರಿಂದ ಬರುತ್ತಿರುವ ದೂರುಗಳಲ್ಲಿ ಪ್ರಮುಖವಾಗಿ ನ್ಯಾಯಬೆಲೆ ಅಂಗಡಿಯವರು ಒಂದು ಕಾಡಿಗೆ 20 ರೂಪಾಯಿಯಂತೆ ವಸೂಲಿ ಮಾಡುತ್ತಿದ್ದಾರೆ .ಅಕ್ಕಿಯ ತೂಕದಲ್ಲಿ ಸಾರ್ವಜನಿಕರಿಗೆ ಗೊತ್ತಾಗದಂತೆ ಮೋಸ ಮಾಡುತ್ತಿದ್ದಾರೆ ,ನಾಲ್ಕು ಕೆಜಿ ಗೋಧಿ ಕೊಡುವ ಜಾಗದಲ್ಲಿ ಕೇವಲ ಎರಡು ಕೆಜಿ ಗೋಧಿಗಳನ್ನು ವಿತರಣೆ ಮಾಡುತ್ತಿದ್ದಾರೆ .ಹೀಗೆ ರಾಜ್ಯದ ಜನತೆಯಿಂದ ನ್ಯಾಯಬೆಲೆ ಅಂಗಡಿಗಳ ಮೇಲೆ ಸಾರ್ವಜನಿಕರು ನೇರವಾಗಿ ಆರೋಪ ಮಾಡುತ್ತಿದ್ದಾರೆ .ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದಾರೆ.
ಈಗಾಗಲೇ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ನ್ಯಾಯಬೆಲೆ ಅಂಗಡಿಯವರ ಮೇಲೆ ರಾಜ್ಯ ಸರಕಾರ ಕೈಗೊಂಡ ಕ್ರಮ ಕೇವಲ ಬೆರಳೆಣಿಕೆಯಷ್ಟು ಮಾತ್ರ .
ನೆಪ ಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ನ್ಯಾಯಬೆಲೆ ಅಂಗಡಿಯವರ ಮೇಲೆ ಕ್ರಮವನ್ನು ತೆಗೆದುಕೊಂಡು ಅವರ ಅನುಮತಿಯನ್ನು ಅಮಾನತು ಮಾಡಲಾಗಿದೆ ಎಂದು ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ನಾವು ನೋಡುತ್ತಿದ್ದೇವೆ .
ಊರು ಕೊಳ್ಳೆ ಹೊಡೆದ ಮೇಲೆ ,ಕೋಟೆ ಬಾಗಿಲು ಹಾಕಿದರು .
ನಾವು ಈಗ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮೇಲೆ ಸಾರ್ವಜನಿಕರಿಂದ ಬಂದ ದೂರುಗಳ ಒಂದು ಚಿಕ್ಕ ವರದಿಯನ್ನು ನೋಡೋಣ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 125 ನ್ಯಾಯಬೆಲೆ ಅಂಗಡಿಗಳು ಇವೆ .ಒಟ್ಟು ಕಾರ್ಡುದಾರರ ಸಂಖ್ಯೆ 59,350.ಈಗಾಗಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ವಿತರಣೆ ಮಾಡಿದ್ದ ಕಾರ್ಡುಗಳ ಸಂಖ್ಯೆ 55,261.ಇನ್ನು ವಿತರಣೆ ಮಾಡಬೇಕಾದ ಕಾರ್ಡ್ಗಳ ಸಂಖ್ಯೆ 4089.ಅಂದರೆ ಈವರೆಗೆ ತಾಲ್ಲೂಕಿನಲ್ಲಿ ಒಟ್ಟು ರೇಷನ್ ಕಾರ್ಡ್ಗಳಿಗೆ ವಿತರಣೆ ಮಾಡಿದ್ದ ಪರ್ಸೆಂಟೇಜ್ 92%.ಅಂದರೆ ತಾಲ್ಲೂಕಿನಲ್ಲಿ ತೊಂಬತ್ತು ಎರಡು ಪರ್ಸೆಂಟೇಜ್ ಅಕ್ಕಿ ವಿತರಣೆ ಮಾಡಿದ ನಂತರ ಸಂಬಂಧಿಸಿದ ಅಧಿಕಾರಿಗಳು ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ಸಂಬಂಧಿಸಿದ ಮೀಟಿಂಗು ಕರೆಯುತ್ತಾರೆ ಎಂದರೆ ಅಲ್ಲಿಗೆ ನೀವೇ ಅರ್ಥ ಮಾಡಿಕೊಳ್ಳಿ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಯವರ ಪರವಾಗಿ ಇದ್ದಾರೆ.? ಅಥವಾ ಸಾರ್ವಜನಿಕರ ಪರವಾಗಿ ಇದ್ದಾರೆ .?
ಅದಕ್ಕೆ ಹೇಳುವುದು ಸ್ವಾಮಿ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೇನು, ಬಿಟ್ಟರೇನು ,ಈಗಾಗಲೇ ಬಡವರ ಅನ್ನವನ್ನು ಕಸಿದುಕೊಂಡು ಆಗಿದೆ.ಅವರಿಂದ ಹಣವನ್ನು ದೋಚಿ ಕೊಂಡಿದ್ದು ಆಗಿದೆ .
ಒಂದು ಕಾರ್ಡಿಗೆ ಇಪ್ಪತ್ತು ರೂಪಾಯಿಯಂತೆ ನ್ಯಾಯಬೆಲೆ ಅಂಗಡಿಯವರು ವಸೂಲಿ ಮಾಡಿದ್ದೇ ಆಗಿದ್ದರೆ .ಅಲ್ಲಿಗೆ 55,261ಕಾಡಿ೯ನಿಂದ ಒಟ್ಟು ವಸೂಲಾದ ಹಣ 11,0,5220 ಆಗುತ್ತದೆ ಇದು ಸಾರ್ವಜನಿಕರಿಂದ ವಸೂಲಿ ಮಾಡಲಾದ ಹಣದ ಮೊತ್ತ .
ಇನ್ನು ತೂಕದಲ್ಲಿ ಅಕ್ಕಿಯನ್ನು ಲಪಟಾಯಿಸಿದ್ದು ಎಷ್ಟಿರಬಹುದು .ಗೋಧಿಯನ್ನು ಕೆಲವೊಂದು ಕಡೆ ಎರಡು ಕೆಜಿ ನೀಡಿದ್ದಾರೆ ಕೆಲವೊಂದು ಕಾಡಿಗೆ ಗೋಧಿಯನ್ನು ನೀಡಿಲ್ಲ .ಇನ್ನು ಕೆಲವು ಕಡೆ ಮೂರು ಕೆಜಿ ಅಲ್ಲೊಂದು ಇಲ್ಲೊಂದು ಕಾಡಿಗೆ ನಾಲ್ಕು ಕೆಜಿಯಂತೆ ನೀಡಿದ್ದಾರೆ .ಇದರ ಮೊತ್ತ ಎಷ್ಟಾಗಬಹುದು ನೀವೇ ಊಹಿಸಿಕೊಳ್ಳಿ .ಇದು ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದ ಕಾರ್ಡ್ ಸಂಖ್ಯೆ ವಿವರದ ಮೊತ್ತ .
ನಮಗೆ ಒಂದು ಅನುಮಾನ ಕಾಡುತ್ತದೆ ಇಷ್ಟೊಂದು ಮೊತ್ತದ ಹಣವನ್ನು ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಯವರು ಎಲ್ಲ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ.? ಅಥವಾ ತಮ್ಮ ಮೇಲಿನ ….ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಕಪ್ಪ ಕಾಣಿಕೆ ನೀಡುತ್ತಾರೆ .?
ನಿಜವಾಗಿಯೂ ಸಾರ್ವಜನಿಕರ ದೂರಿಗೆ ಸ್ಪಂದನೆ ಮಾಡಬೇಕೆಂಬ ಆಸೆ ಸಂಬಂಧಿಸಿದ ಅಧಿಕಾರಿಗಳಿಗೆ ಇದ್ದಿದ್ದರೆ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ವಿತರಣೆ ಮಾಡುವ ಮೊದಲೇ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದರು .ಹೀಗೆ ಸುಮ್ಮನೆ ನೆಪ ಮಾತ್ರಕ್ಕೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುವ ಉದ್ದೇಶದಿಂದ ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕರ ದೂರಿಗೆ ಸ್ಪಂದನೆ ಮಾಡಿದ್ದೇವೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಿರಲಿಲ್ಲ ನಿಜವಾಗಿಯೂ ನಿಮಗೆ ಬಡವರ ಮೇಲೆ ಕಾಳಜಿ ಇದ್ದಿದ್ದರೆ ಬಡವರಿಗೆ ರೇಷನ್ ವಿತರಣೆ ಮಾಡುವ ಮೊದಲೇ ಕ್ರಮಕ್ಕೆ ಮುಂದಾಗುತ್ತಿದ್ದಿರೀ ಅದು ನಿಮಗೆ ಬೇಡವಾಯಿತು ಅಲ್ಲವೇ ?
ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರವು ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಯನ್ನು ನಡೆಸಿ ತಪ್ಪಿತಸ್ಥ ನ್ಯಾಯಬೆಲೆ ಅಂಗಡಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂಬುದು ನಮ್ಮ ವಾಹಿನಿಯ ಕಳಕಳಿಯಾಗಿದೆ.
Be the first to comment