ಅಂಗನವಾಡಿ,ಆಶಾ, ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ :ಡಾ:ರಾಜಾವೆಂಕಪ್ಪನಾಯಕ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ಎ.11 ಕೊವೀಡ್-19 ಕೊರಾನಾ ವೈರಸ್ ಗೆ ಸಂಬಂಧಿಸಿದ ಮಾಹಿತಿಗಾಗಿ ಅಂಗನವಾಡಿ,ಆಶಾ ಕಾರ್ಯಕರ್ತೆಯರು ಮನೆ,ಮನೆಗೆ ಭೇಟಿ ನೀಡಿದಾಗ ಅವರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ತಾಲೂಕಾ ಆರೋಗ್ಯಾಧಿಕಾರಿ ರಾಜಾ ವೆಂಕಪ್ಪ ನಾಯಕ ಅವರು ಮನವಿ ಮಾಡಿದರು.ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಡೆದ ಸಭೆಯಲ್ಲಿ ಮಾತನಾಡಿ,ಈಗಾಗಲೇ ಪ್ರಪಂಚವೇ ಕೊರಾನಾ ವೈರಸ್ ನಿಂದಾಗಿ ನಲುಗಿ ಹೋಗಿದ್ದು ಇಡೀ ದೇಶವೇ ಲಾಕ್ ಡೌನ್ ಆಗಿದೆ.ರಾಜ್ಯ ಸರ್ಕಾರ ಇದೇ ಎಪ್ರಿಲ್ 30 ರವರೆಗೆ ಲಾಕ್ ಡೌನ್ ಮಾಡಲಾಗಿದೆ. ವಿವಿಧ ದೇಶಗಳಿಂದ ಹಾಗೂ ಉಪಜೀವನಕ್ಕಾಗಿ ಬೆಂಗಳೂರ,ಮುಂಬಯಿ ಸೇರಿದಂತೆ ವಿವಿಧ ನಗರಗಳಿಗೆ ಗುಳೆ ಹೋಗಿ ಈಗ ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸಿದ್ದಾರೆ ಅವರೆಲ್ಲರಿಗೂ ತಪಾಸಣೆಗೊಳಪಡಿಸಲಾಗಿದೆ. ಆದರೆ ನಮ್ಮ ತಾಲೂಕಿನಲ್ಲಿ ಯಾರಿಗೂ ಕೊರಾನಾ ವೈರಸ್ ಪಾಸಿಟಿವ್ ಬಂದಿಲ್ಲ. ಆದರೂ ಮುಜಾಂಗ್ರತವಾಗಿ ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತರು ಹಾಗೂ ನಗರದ ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಮಾಡುತ್ತಾರೆ. ಮತ್ತೆ ಯಾರಾದರೂ ಬೇರೆ ಊರುಗಳಿಂದ ಬಂದಿದ್ದರೆ ಅಕ್ಕ ಪಕ್ಕದವರು ಮಾಹಿತಿ ನೀಡಿ ಹಾಗೂ ಯಾರು ಹೊರಗಡೆ ಬಾರದೆ ಮನೆಯಲ್ಲಿರಲು ತಿಳಿಸಬೇಕೆಂದು ಸೂಚಿಸಿದರು.ಇದೇ ಸಂದರ್ಭದಲ್ಲಿ ಡಾ:ಓಂಪ್ರಕಾಶ ಅಂಬುರೆ,ಸಿಡಿಪಿಒ ಲಾಲಾಸಾಬ್ ಪೀರಾಪುರ,ಮೇಲ್ವಿಚಾರಕಿ ಚಂದ್ರಲೀಲಾ ನಿಂಬೂರ ಹಾಗೂ ಶುಷ್ರೂಕಿಯರು,

ಸಿಬ್ಬಂದಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*