ಕೊರೋನಾ:ಪ್ರಕೃತಿಯ ನೀತಿಪಾಠ ಪ್ರಾಣಿಗಳಿಂದ ಜಾಗೃತಿ ಪಾಠ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಜಗತ್ತಿಗೇ ಮಾರಕವಾಗಿರೋ ಕೊರೋನಾ ಚೀನಾದ ಪಾಪಿಗಳು ಸೃಷ್ಟಿಸಿದ ಪಾಪದ ಕೂಸೆಂದು ದೈವಜ್ಞರ ಹಾಗೂ ಆಧ್ಯಾತ್ಮ ಚಿಂತಕರು ಹೇಳುತ್ತಿದ್ದಾರೆ.ಒಟ್ಟಾರೆ ಮನುಷ್ಯರು ತಾನೆ,ಪ್ರಕೃತಿಯ ವಿಕೃತ ಮನಸ್ಸಿನ ಅಸಹಜ ಚಟುವಟಿಕೆಗಳ ಫಲವೇ ಕೊರೋನಾ.ಅದಕ್ಕೆ ಪ್ರಕೃತಿ ತನ್ನ ಚಾಟಿಬೀಸಿ ವಿನಾಶದ ಸೂಚನೆ ನೀಡುತ್ತಿದೆ.ವಿಶ್ವಕುಟುಂಬ ಎಂಬ ವಿಶಾಲತೆಯನ್ನು ಜಗತ್ತಿನ ಮಾನವರೆಲ್ಲರೂ ಅರಿಯಬೇಕಿದೆ.ಪ್ರಕೃತಿಗೆ ಕುತ್ತು ತರುವಂತಹ ಎಲ್ಲಾ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಲೇಬೇಕು.ಪ್ರಕೃತಿ ವಿರೋಧಿಚಟುವಟಿಕೆಗಳನ್ನು ಯಾವಕಾಲಕ್ಕೂ ಮಾಡಲಾರೆವು ಎಂಬ ಸಾಮೂಹಿಕ ಸಂಕಲ್ಪ ಜಗತ್ತಿನಲ್ಲಿನ ಪ್ರತಿಯೊಬ್ಬರೂ ಮಾಡಬೇಕಿದೆ.

ಕೊರೋನಾ ಇಡೀ ಮನುಕುಲಕ್ಕೇ ಪ್ರಕೃತಿಯ ನೀತಿಪಾಠ ಎನ್ನುತ್ತಾರವರು. ಇಲ್ಲಿ ಶ್ವಾನ ಮಾಸ್ಕ್ ಧರಿಸಿ ಮಾಸ್ಕ್ ಮಹತ್ವ ತಿಳಿಸುತ್ತಿದೆ, ಆಕಳು ಸಾಮಾಜಿಕ ಅಂತರದ ಶಿಸ್ಥಿನ ಪಾಠ ಹೇಳುತ್ತಿದೆ,ನಾಯಿ ಮತ್ತು ಆಕಳು ಕೊರೋನಾ ಸೋಂಕು ಮುಕ್ತ ಜೀವನಕ್ಕಾಗಿ ಮನುಷ್ಯರೆಲ್ಲರೂ ಪಾಲಿಸಬೇಕಾದ ಮುಂಜಾಗೃತೆ ಕ್ರಮಗಳಾಗಿವೆ.

*ಮಾಸ್ ನಾಯಿಯ ಮಾಸ್ಕ್ ಕ್ಲಾಸ್-* ನಾಯಿಯೊಂದು ತನ್ನ ಕೊರಳಿಗೆ ಮಾಲೀಕನು ನೇತು ಹಾಕಿರುವ ಮಾಸ್ಕನ್ನು ಬಹು ಜೋಪಾನವಾಗಿಟ್ಟುಕೊಂಡಿದೆ.ಅದು ತನ್ನ ಹತ್ತಿರದಲ್ಲಿದ್ದ ಮನುಷ್ಯನೋವ೯ ಅಕ್ಷೀಃ ಎಂದು ಸೀನಿದಾಕ್ಷಣವೇ ನಾಯಿಯೇ ತನ್ನಕೊರಳಲ್ಲಿರುವ ಮಾಸ್ಕ್ ನ್ನು ತನ್ನ ಕಾಲುಗಳಿಂದ ಎಳೆದುಕೊಂಡು ತನ್ನ ಮುಖಕ್ಕೆ ಹಾಕಿಕೊಳ್ಳುತ್ತದೆ.ಇದು ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಅನುಸರಿಸಬೇಕಾದ ಮುಂಜಾಗೃತಿ ಕ್ರಮವಾಗಿದೆ. ಅದಕ್ಕಾಗಿ ಮಾಸ್ಕ್ ಧರಿಸುವಂತೆ ತಿಳಿಹೇಳುವ ಜಾಗೃತಿಯ ಪಾಠವಾಗಿದೆ.ಈ ವೀಡಿಯೋ ನೈಜ ದೃಶ್ಯಾವಳಿಯೋ ಅಥವಾ ತಾಂತ್ರಿಕವಾಗಿ ತಯಾರಿಯೋ.ತಿಳಿಯದಾಗಿದೆ.ಇದು ಟಿಕ್ಟಾಕ್ ಗ್ರೂಪ್ನಲ್ಲಿ ದೊರಕಿದ್ದು ಸಾಂದಾಭಿ೯ಕವಾಗಿ ಬಳಸಲಾಗಿದೆ.

*ಆಕಳಿಂದ ಅಂತರ ಪಾಠ*

ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಾಗಿ ಆಕಳೊಂದು ಅಂಗಡಿಯ ಮುಂಭಾಗದಲ್ಲಿ ಹಾಕಿರೋ ಕಾಲಂನಲ್ಲಿ ನಿಂತು ಸಾಮಾಜಿಕ ಅಂತರ ಪಾಲಿಸುತ್ತಿದೆ.ಇದು ಕೂಡ್ಲಿಗಿ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಇಂದು ಕಂಡುಬಂದ ನೈಜ್ಯ ಹಾಗೂ ಕಾಕತಾಳೀಯ ದೃಶ್ಯವಾಗಿದೆ.ಇದನ್ನು ಕೂಡ್ಲಿಗಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ನಾಗೇಶರವರು ಸೆರೆಹಿಡಿದಿರುವುದು.ಸದಾ ಜಂಜಾಟಗಳಿಂದ ತರಾತುರಿಯ ನಡವಳಿಗಳಿಂದ,ಸಾಮಾಜಿಕ ಅಂತರ ಪಾಲಿಸದೇ ಸರದಿಗಾಗಿ ಸಾಲಿನಲ್ಲಿ ಅಂತರ ಕಾಯ್ದುಕೊಳ್ಳದೆ ನುಕುನುಗ್ಗಲು ಸೃಷ್ಟಿಸುವ ಉಲುಮಾನವನಿಗೆ ಈ ಉಲ್ಲುತಿನ್ನೊ ಪ್ರಾಣಿ ಹಸು ಈ ಮೂಲಕ ಸಾಮಾಜಿಕ ಅಂತರ ಪಾಲನೆಯ ನೀತಿಪಾಠ ಹೇಳಿದೆ..!?.

Be the first to comment

Leave a Reply

Your email address will not be published.


*