ಜೀಲ್ಲಾ ಸುದ್ದಿಗಳು
Ambiga news Big imfact
ಅಂಬಿಗ ನ್ಯೂಸ್ ಸುದ್ದಿ:
ಅಂಬಿಗ ನ್ಯೂಸ್ ವರದಿಯ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಗ್ರಾಮದ ನ್ಯಾಯಬೆಲೆ ಅಂಗಡಿಯ ಅಕ್ರಮ ಮತ್ತು ಕರ್ಮಕಾಂಡಗಳ ಕುರಿತು 2 ದಿನಗಳ ಹಿಂದೆ ಪಡಿತರ ಹಂಚಿಕೆಯಲ್ಲಿ ಭಾರಿ ಗೋಲ್ ಮಾಲ್….! ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲಾ…!
ಅಂಬಿಗ ನ್ಯೂಸ್ ಟಿವಿಯಲ್ಲಿ ಪ್ರಕಟವಾದ ವರದಿ
ಎನ್ನುವ ಸುದ್ದಿಯೊಂದನ್ನು ಪ್ರಕಟಿಸಿ ಜನತೆಗೆ ನ್ಯಾಯ ಒದಗಿಸುವಲ್ಲಿ ನೆರವಾಗಿತ್ತು.
ವರದಿಯ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಬೋನಾಳ ದ ನ್ಯಾಯಬೆಲೆ ಅಂಗಡಿಗೆ ಬೇಟಿ ನೀಡಿ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಪರಿಶೀಲನೆ ನಡೆಸಿದ್ದರು.
*ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ರದ್ದು :*
ಬೋನ್ಹಾಳ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ-46 ರವರು ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ಮಾಡಿರುವುದರಿಂದ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ, 2016ರ ಕ್ಲಾಜ್ 12 (2) ರಡಿಯಲ್ಲಿ ಸದರಿ ಅಂಗಡಿಯ ಪರವಾನಗಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
Be the first to comment