ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ ಅರಣ್ಯ ಪ್ರದೇಶದ ಬಳಿ ಚಲಿಸುತ್ತಿದ್ದ ಓಮಿನಿ ಕಾರೊಂದು ಬೆಂಕಿಗೆ ಭಸ್ಮವಾದ ಘಟನೆ ಜರುಗಿದೆ.ಘಟನೆಗೆ ಕಾರಿಗಳವಡಿಸಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆ ಕಾರಣವೆಂದು ತಿಳಿದುಬಂದಿದೆ. ಕಾನಾಹೊಸಹಳ್ಳಿಯಿಂದ ಚಿಕ್ಕಜೋಗಿಹಳ್ಳಿಗೆ ತೆರಳುತ್ತಿದ್ದಾಗ ಸಿದ್ದಾಪುರ ಅರಣ್ಯಪ್ರದೇಶದ ಬಳಿ ರಸ್ಥೆಯಲ್ಲಿ ಚಲಿಸುತ್ತಿದ್ದಾಗ ಕಾರಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಎಚ್ಚೆತ್ತುಕೊಂಡ ಚಾಲಕ ಕಾರಿನಲ್ಲಿದ್ದವರನ್ನು ಕೆಳಗಿಳಿಸಿದ್ದಾನೆ.ಕೆಲವೇ ನಿಮಿಷಗಳಲ್ಲಿಯೇ ಬೆಂಕಿ ಓಮಿನಿ ಕಾರಿಗೆ ಸಂಪೂಣ೯ ಹೊತ್ತಿಕೊಂಡಿದೆ.ನಂದಿಸುವ ಪ್ರಯತ್ನ ವಿಫಲವಾದ ಕಾರಣ ಕಾರು ಸಂಪೂಣ೯ ಭಸ್ನವಾಗಿದೆ ಎಂದು ತಿಳಿದುಬಂದಿದೆ.
Be the first to comment