ಜೀಲ್ಲಾ ಸುದ್ದಿಗಳು
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪನವರು, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಎಲ್ಲಾ ಸಂಸದರೊಂದಿಗೆ ಜೂಮ್ ಮೂಲಕ ನಡೆಸಿದ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೈ.ದೇವೇಂದ್ರಪ್ಪ ಬಳ್ಳಾರಿ ಭಾಗದ ಜನತೆ ಬೆಳೆದ ಮೆಣಸಿನಕಾಯಿಯನ್ನು ಬ್ಯಾಡಗಿಗೆ ತಲುಪಿಸಲು ಕಿಸಾನ್ ರೈಲಿನ ವ್ಯವಸ್ಥೆಗೆ ವಿನಂತಿಸಿದರು.ವಿಡಿಯೋ ಕಾನ್ಫರೆನ್ಸ್ ನಲ್ಲಿದ್ದ ಮಾನ್ಯ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರು ಒಪ್ಪಿಗೆ ಸೂಚಿಸಿದ್ದಾರೆ.ಮುಂದಿನ ದಿನಗಳಲ್ಲಿ ರೈತರೊಂದಿಗೆ ಚರ್ಚೆ ನಡೆಸಿ ರೈಲಿನ ಒಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೇ ಸಚಿವರು ತಿಳಿಸಿದ್ದಾರೆ.ಈ ಕುರಿತು ಸಂಸದರ ಕೇಂದ್ರ ಕಚೇರಿ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
Be the first to comment