ಜೀಲ್ಲಾ ಸುದ್ದಿಗಳು
ಬೀದರ್, ಮಹಾಮಾರಿ ಕೊರೋನಾ ಸೊಂಕು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಡೀ ರಾಜ್ಯ ಮಾತ್ರವಲ್ಲದೇ ದೇಶವೇ ಲಾಕ್ ಡೌನ್ ಆಗಿ ದೇಶದ ಜನ ತತ್ತರಿಸಿ ಹೋದ ಕಾರಣ ಸಂತ್ರಸ್ಥರ ನೆರವಿಗಾಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಕ.ರಾ.ಶಿ ಸಂಸ್ಥೆಯು ನೆರವಿಗೆ ಮುಂದಾಗಿದೆ.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವ್ಯಾಪಾರೀಕರಣಕ್ಕೆ ನಿಲ್ಲದೆ ಮಾನವೀಕರಣದ ನೆಲೆಯಲ್ಲಿ ಸಾಮಾಜಿಕ ಜನಪರ ಕಾಳಜಿಯುಳ್ಳ ಸಂಸ್ಥೆಯಾಗಿದ್ದು ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಆಪತ್ತು ಬಂದಾಗ ಸದಾಕಾಲ ನೆರವಿಗೆ ನಿಂತು, ರಾಷ್ಟ್ರಹಿತಕ್ಕಾಗಿ ಮತ್ತು ಜನರ ಹಿತಕ್ಕಾಗಿ ಸಂಸ್ಥೆ ಮುಂದೆ ಬಂದಿದ್ದು ಈ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ ಕೊರೊನಾ ಮಹಾಮಾರಿಯನ್ನು ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕಲು ಸಾಧ್ಯವಿದೆ ಎಂದರಿತು,
5.00 ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿಗಳಾದ ಎಚ್.ಅರ್.ಮಹಾದೇವ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದರು.
- ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಬಸವರಾಜ ಜಿ. ಪಾಟೀಲ್ ಅಷ್ಟೂರ, ಸಿದ್ಧರಾಮ ಪಾರಾ, ಬಸವರಾಜ ಜಾಬಶೆಟ್ಟಿ , ಡಾ. ಚನ್ನಬಸಪ್ಪ ಹಾಲಹಳ್ಳಿ, ಪ್ರಭುಶೆಟ್ಟಿ ಮುದ್ದಣ್ಣ, ಡಿ.ವಿ. ಸಿಂದೋಲ, ಡಾ. ಎಂ.ಎ. ಶೇರಿಕಾರ, ಶೆಟಕಾರ ಚಂದ್ರಕಾಂತ, ಮಲ್ಲಿಕಾರ್ಜುನ ಹತ್ತಿ, ಸತೀಶ ಪಾಟೀಲ, ಗಾದಗಿ ಶಿವಾನಂದ, ಮಡಿವಾಳಪ್ಪ ಗಂಗಶೆಟ್ಟಿ, ಶಿವಶಂಕರ ಬಿ. ಶೆಟಕಾರ, ಸಚೀನ್ ವಿಶ್ವಕರ್ಮ ಇತರರು ಇದ್ದರು.
Be the first to comment