ಜೀಲ್ಲಾ ಸುದ್ದಿಗಳು
ಬೀದರ್, ಜನರನ್ನು ಕಾಡುತ್ತಿರುವ ಕರೋನಾ ಸಾಂಕ್ರಾಮಿಕ ತಡೆ ಹಿನ್ನೆಲೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯಂತೆಯೇ ಆಶಾ ಕಾರ್ಯಕರ್ತೆಯರು ಕೂಡ ಅತ್ಯುತ್ತಮ ಕೆಲಸ ಮಾಡುತ್ತಿದ್ದು ಅವರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.
ಏ.10ರಂದು ಔರಾದ್ ತಾಲ್ಲೂಕಿನ ಗಣೇಶಪುರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಆಶಾ ಕಾರ್ಯಕರ್ತೆಯರ ಕಾರ್ಯವೈಖರಿ ಗಮನಿಸಿ, ಸಚಿವರು ಮಾತನಾಡಿದ್ದಾರೆ.
ಮನೆ ಬಿಟ್ಟು ಹೊರಗಡೆ ಬಂದು ಕೆಲಸ ಮಾಡಲು ಭಯಪಡುವ ಈ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಅವರ ಮಕ್ಕಳು ಮತ್ತು ಕುಟುಂಬದ ಹಿತ ಮರೆತು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದಿಸುವೆ ಎಂದು ಸಚಿವರು ತಿಳಿಸಿದ್ದಾರೆ.
*ಆಶಾ ಕಾರ್ಯಕರ್ತೆಯರಿಗೆ ಸಹಾಯ:*
ನಿಮಗೆ ಏನೇ ಸಮಸ್ಯೆ ಆದರೂ ಅದನ್ನು ತಮ್ಮ ಗಮನಕ್ಕೆ ತರಬೇಕು. ನಾನು ಸರಿಪಡಿಸುತ್ತೇನೆ. ಜನಮುಖಿ ಸೇವೆ ಮಾಡುತ್ತಿರುವ
ನಿಮ್ಮ ಹಾಗು ನಿಮ್ಮ ಮಕ್ಕಳ ಮತ್ತು ನಿಮ್ಮ ಕುಟುಂಬದ ಹಿತ ಕಾಯಲು
ನಾನು ಇರುತ್ತೇನೆ ಎಂದು ಸಚಿವರು ಇದೆ ವೇಳೆ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಧೈರ್ಯ ಹೇಳಿದ್ದಾರೆ.
*ಸುರಕ್ಷತೆಗೆ ಒತ್ತು ಕೊಡಿ*:
ಸಮೀಕ್ಷೆ ಮತ್ತು ಇನ್ನೀತರ ಕೆಲಸಕ್ಕೆ ತಾವು ಬೇರೆ ಬೇರೆ ಮನೆಗಳಿಗೆ ಹೋದಾಗ ಅಲ್ಲಿ ಮರೆಯದೇ ಸಾಮಾಜಿಕ ಅಂತರ್ ಕಾಪಾಡಿಕೊಳ್ಳಬೇಕು. ಮಾಸ್ಕ ಕಡ್ಡಾಯ ಧರಿಸಬೇಕು. ಆಗಾಗ ಕೈಗಳಿಗೆ ಸ್ಯಾನಿಟೈಜರ್ ಬಳಸಬೇಕು. ಜನಸೇವೆಯ ಜೊತೆಗೆ ತಮ್ಮ ಸುರಕ್ಷತೆಗೂ ಸಾಕಷ್ಟು ಒತ್ತು ಕೊಡಬೇಕು ಎಂದು ಸಚಿವರು ಗಣೇಶಪುರಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಲಹೆ ಮಾಡಿದರು.
Be the first to comment