ಮೂರು ತಿಂಗಳಿಂದ ಮೂರಾಬಟ್ಟೆ,ಅಂಚೆ ಕಚೇರಿ ದುಸ್ಥಿತಿ-ನ್ಯಾಯಾಲಯದ ಮೆಟ್ಟಲೇರುವ ಎಚ್ಚರಿಕೆ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಅಂಚೆ ಕಚೇರಿಯಲ್ಲಿರುವ ತಾಂತ್ರಿಕ ದೋಷದಿಂದಾಗಿ ಮೂರು ತಿಂಗಳಿಂದಲೂ ಮೂರಾಬಟ್ಟೆಯ ದುಸ್ಥಿತಿಗೆ ತಲುಪಿದೆ.ತಮ್ಮ ಕೆಲಸಕ್ಕಾಗಿ ಗ್ರಾಹಕರು ನಿತ್ಯವೂ ಅಂಚೆಕಚೇರಿಗೆ ಅಲೆದಾಡುವಂತಾಗಿದೆ.ಕೊರೋನಾ ಎಮಜೆ೯ನ್ಸಿ ಸಂದಭ೯ದಲ್ಲಿ ಅಂಚೆಯಲ್ಲಿ ಕೂಡಿಟ್ಟಿರುವ ಹಣಕ್ಕಾಗಿ ನಿತ್ಯವೂ ಅಲೆಯುವಂತಾಗಿದೆ.

ತಮಗೆ ಸಕಾ೯ರದಿಂದ ಬರುವ ಮಾಶಾಸನ ಹಣ ಪಡೆಯಲು ತೀವ್ರ ಪರದಾಡುವಂತಾಗಿದೆ.ವಿಚಾರಿಸಿದರೆ ಮೂರುತಿಂಗಳಾಯಿತು ಇಲಾಖೆಯ ತಂತ್ರಾಂಶದಲ್ಲಿರುವ ಲೋಪದೋಷದಿಂದಾಗಿ ಮೇಲಾಧಿಕಾರಿಗಳ ಕಚೇರಿಗಳಿಂದ ಸಂಪಕ೯ತಪ್ಪಿದೆ. ಈ ಕುರಿತು ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದೆಯಾದರೂ ಪ್ರಯೋಜನವಾಗಿಲ್ಲ.ತಾಂತ್ರಿಕ ತಜ್ಞರನ್ನು ಕಳುಹಿಸಿಕೊಡಿರೆಂದು ಕಳೆದೆರಡು ತಿಂಗಳುಗಳಿಂದ ಕೋರುತ್ತಿದ್ದೇವೆ.ಅವರಿಂದ ಆರಿಕೆಯ ಉತ್ತರ ಸಿಗುತ್ತಿದೆ ವಿನಃ ಏನೂ ಪ್ರಯೋಜನವಾಗಿಲ್ಲ.ಮಾಚ೯ 24ರಿಂದ ಇಲಾಖಾ ತಂತ್ರಾಂಶ ಸಂಪಕ೯ ಸಂಪೂಣ೯ಕಡಿತವಾಗಿದೆ.ನಿತ್ಯವೂ ನೂರಾರು ಗ್ರಾಹಕರು ವೃತಾಃ ಅಲೆದಾಡುತ್ತಿದ್ದಾರೆ.ವೃದ್ಧರು.ವಿಕಲಚೇತನರು.ಮಹಿಳೆಯರು.ರೈತರು.ಕಾಮಿ೯ಕರು ಅಧಿಕಾರಿಗಳು.ಸಾವ೯ಜನಿಕರು ಕಚೇರಿಗೆ ಅಲೆದಾಡುತ್ತಿದ್ದಾರೆ.

ಅವರಿಗೆ ನಾವು ನಿತ್ಯ ಹೇಳಿದ್ದನ್ನೇ ಹೇಳುವುದಕ್ಕೆ ತಮಗೂ ಮನಸ್ಸಿಲ್ಲವಾಗಿದೆ.ಇದನ್ನು ಬಳ್ಳಾರಿಯ ಜಿಲ್ಲಾ ಕಚೇರಿಯ ಅಧಿಕಾರಿಗಳಿಗೆ ತಿಳಿಸಿ ತಾಂತ್ರಿಕ ತಜ್ಞರನ್ನು ಕಳುಹಿಸಿಕೊಡಿರೆಂದು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ.ಆದರೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ತೀರಾ ಅನಾಗರೀಕರಂತೆ. ನಿಲ೯ಕ್ಷ್ಯ ತೋರುತ್ತಿದ್ದಾರೆಂದು ಹೆಸರು ಹೇಳದ ಸಿಬ್ಬಂದಿ ತಿಳಿಸಿದ್ದಾರೆ.ಕೊರೋನಾ ಲಾಕ್ ಡೌನ್ ಮತ್ತು144ಸೆಕ್ಷನ್ ಪಾಲನೆ ಕೂಲಿಕಾಮಿ೯ಕರನ್ನು ಕಟ್ಟಿ ಹಾಕಿದೆ.ದುಡಿಮೆ ಇಲ್ಲದೆ ಬಿಡಿಗಾಸಿಗೂ ಪರಿತಪಿಸುವಂತಹ ಸಂದಭ೯ವಾಗಿದೆ.ಗ್ರಾಹಕರಿಗೆಈ ಸನ್ನಿವೇಶದಲ್ಲಿ ಅಂಚೆ ಇಲಾಖೆಯ ಸೇವೆ ಆಪತ್ ಬಾಂಧವ ರೀತಿಯಲ್ಲಿ ಸೇವೆಕೊಡಬೇಕಿದೆ.ಆದರೆ ಅಂಚೆ ಕಚೇರಿಯ ತಾಂತ್ರಿಕ ಕೊರತೆಯು ಗ್ರಾಹಕರನ್ನು ಮತ್ತು ಸಿಬ್ಬಂಧಿಯನ್ನು ಅತಂತ್ರ ಸ್ಥಿತಿಗೆ ನೂಕಿದೆ.ಮೂರು ತಿಂಗಳಿಂದಲೂ ನಿರಂತರವಾಗಿ ದೋಷಪೂರಿತ ತಂತ್ರಾಂಶವನ್ನು ಸರಿಪಡಿಸದ ಅಧಿಕಾರಿ ವಿರುದ್ಧ ರಾಜ್ಯ ಅಂಚೆ ಇಲಾಖೆಯ ಮಹಾಪ್ರಬಂಧಕರಲ್ಲಿ ದೂರು ನೀಡಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ. ವೇದಿಕೆ ಪದಾಧಿಕಾರಿಗಳು ಬಳ್ಳಾರಿ ಜಿಲ್ಲಾ ಅಂಚೆ ಅಧಿಕಾರಿಗಳೊಡನೆ ಚಚಿ೯ಸಲು ದೂರವಾಣಿ ಮೂಲಕ ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸ್ವೀಕರಿಸಿಲ್ಲ.ಇದು ಅವರ ಉಡಾಫೆತನಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಅವರು ಹೇಳಿಕೆ ನೀಡಿದ್ದು ಏಪ್ರೇಲ್ 15ರೊಳಗಾಗಿ ಕೂಡ್ಲಿಗಿ ಅಂಚೆ ಇಲಾಖೆಯಲ್ಲಿರುವ ಎಲ್ಲಾ ಲೋಪ ದೋಶಗಳು. ತೊಂದರೆಗಳು ಸಮಸ್ಯೆಗಳು ನಿವಾರಣೆಯಾಗಬೇಕಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಉನ್ಮತಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಿಲ೯ಕ್ಷಿಸಿದ್ದಲ್ಲಿ ಅವರ ವಿರುದ್ಧ ಕಾನೂನು ರೀತ್ಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಸಾವ೯ಜನಿಕ ಹಿತಾಸಕ್ತಿ ಮೇರೆಗೆ ನ್ಯಾಯಾಲಯದಲ್ಲಿ ಅಂಚೆ ಇಲಾಖೆಯ ಜಿಲ್ಲಾ ಉನ್ನತಾಧಿಕಾರಿ ವಿರುದ್ಧ ದಾವೆ ಹೂಡಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು ಈ ಮೂಲಕ ಎಚ್ಚರಿಸಿದ್ದಾರೆ.

Be the first to comment

Leave a Reply

Your email address will not be published.


*