ಜೀಲ್ಲಾ ಸುದ್ದಿಗಳು
ಕೊರೋನಾ ಲಾಕ್ ಡೌನ್ ಎಫೆಕ್ಟ್ ತರಕಾರಿ ಬೆಳೆದ ರೈತನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಿದ್ದಾಪುರದ ರೈತ ವೆಂಕಟೇಶ ತನ್ನ ಅಳಲು ತೋಡಿಕೊಂಡಿದ್ದಾನೆ.ತಾನು ಐದು ಎಕರೆ ಜಮೀನಿನಲ್ಲಿ ಬೆಳೆದ ಟಮೋಟಾ ಫಲವನ್ನು ಮಾರಲು ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ.ಲಾಕ್ ಡೋನ್ ನಿಂದಾಗಿ ಮಾರುಕಟ್ಟೆಯಲ್ಲಿ ಕರೀದಿದಾರರಿಲ್ಲದೇ ವಾಹನ ಬಾಡಿಗೆ ಹಣ ಕೂಲಿಗಾರರಿಗೆ ಕೊಡಲು ಹಣಕ್ಕೂ ಸಾಲದಾಗಿದೆ.
ಇದರಿಂದಾಗಿ ತಮಗೆ ಸುಮಾರು 3ಲಕ್ಷರೂಗಳಷ್ಟು ನಷ್ಟವಾಗಿದೆ. ಸಕಾ೯ರ ಹಾಗೂ ತೋಟಗಾರಿಕೆ ಇಲಾಖೆ ನಮ್ಮಂತಹ ನಷ್ಟವನ್ನ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ನೊಂದ ರೈತ ವೆಂಟೇಶ ಸಕಾ೯ರಕ್ಕೆ ಮನವಿ ಮಾಡಿದ್ದಾರೆ.ಇದು ಕೇವಲ ವೆಂಕಟೇಶನ ಗೋಳುಮಾತ್ರವಲ್ಲ ರಾಜ್ಯದ ಎಲ್ಲಾ ರೈತರ ಗೋಳಾಗಿದೆ.ಏಕೆಂದರೆ ಕೊರೋನಾ ಲಾಕ್ ಡೌನ್ ರಾಷ್ಟ್ರಧ್ಯಾಂತ ಪರಿಣಾಮಕಾರಿಯಾಗಿ ಸಕಾ೯ರಗಳು ಜಾರಿ ಮಾಡಿದ್ದು.ಟಮೋಟಾ ಕೊಳ್ಳುವವರಿಲ್ಲದೇ ಬಳ್ಳಿಯಲ್ಲಿಯೇ ಉಳಿದು ಮಣ್ಣಿನಲ್ಲಿ ಕೊಳೆಯುತ್ತಿವೆ.ಬಂಡವಾಳ ಹಾಕಿ ಕಷ್ಟಪಟ್ಟು ಫಲ ಬೆಳೆದು ನಷ್ಟ ಅನುಭವಿಸುವ ಸನ್ನಿವೇಶ ನಿಮಾ೯ಣವಾಗಿದೆ.ಲಾಕ್ ಡೌನ್ ನಿಂದಾಗಿ ಜೀವಕ್ಕೆ ಸುರಕ್ಷವಾದರೂ ಜೀವನಕ್ಕೆ ಛಡಿ ಏಟು ಕೊಟ್ಟಿದೆ.ದುಡಿಮೆ ಇಲ್ಲದ ಸಂದಭ೯ದಲ್ಲಿ ಇದು ತರಕಾರಿ ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಕಾರಣ ರಾಜ್ಯದ ಎಲ್ಲಾ ತೋಟಗಾರಿಕಾ ಬೆಳೆಗಾರರಿಗೆ ಶೀಘ್ರವೇ ಸಕಾ೯ರ ಪರಿಹಾರ ನೀಡಬೇಕೆಂದು ವೆಂಕಟೇಶ ಸಕಾ೯ರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.ದಲಿತ ಮುಖಂಡ ಈಶ್ವರಪ್ಪ ಜೊತೆಗಿದ್ದರು.
Be the first to comment