ರಾಜ್ಯ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ
ಬೇಲಿಯೇ ಎದ್ಧು ಹೊಲ ಮೆಯಿದಂಥಾಯಿತು ಸಾರ್ವಜನಿಕರಿಗೆ ತಲುಪಬೇಕಾದ ಪಡಿತರ ವಿತರಣೆಯಲ್ಲಿ ಬಾರೀ ಅವ್ಯವಹಾರ
ಕೊರೊನಾ ಭೀತಿ ಹಿನ್ನಲೆಯಲ್ಲಿ ದೇಶಾದಾದ್ಯಂತ ಲಾಕ್ ಡೌನ್ ಮಾಡಿ ಸರಕಾರ ಆದೇಶ ಹೊರಡಿಸಿದೆ,
ಇದರಿಂದ ಅನೇಕ ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಯಾರು ಕೂಡಾ ಹಸಿವಿನಿಂದ ಸಾಯಬಾರದೆನ್ನುವ ಉದ್ದೇಶದಿಂದ
ರಾಜ್ಯ ಸರ್ಕಾರವೇ ಪ್ರತಿಯೊಂದು ಕುಟುಂಬದವರಿಗೂ ಎರಡು ತಿಂಗಳ ಪಡಿತರ ಹಂಚಿಕೆ ಮಾಡಲು ಸರ್ಕಾರವೇ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
ಆದರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದಲ್ಲಿರುವ ಪಡಿತರ ಕೇಂದ್ರದವರಿಗೆ ಮಾತ್ರ ಸರ್ಕಾರದ ಈ ಆದೇಶ ಅನ್ವಯವಾಗುವಂತೆ ಕಾಣುತ್ತಿಲ್ಲ,
ಹೌದು ಈಗಾಗಲೇ ಸುರಪುರ ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಗುಳೆಯಿಂದ ಗ್ರಾಮಗಳಿಗೆ ಮರಳಿ ಬಂದಿರುವ ಕುಟುಂಬದವರಿಗೆ ಉಚಿತ ಪಡಿತರ ನೀಡಬೇಕೆಂದು ಆದೇಶವಿದೆ ಒಂದು ವೇಳೆ ತಂಭ್ ( ಹೆಬ್ಬೆರಳು ಗುರುತು) ಅಥವಾ OTP ಇಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಮಾಡಲು ಸರಕಾರ ವಿತರಕರಿಗೆ ತಿಳಿಸಿದೆ ಆದರೂ ಕೂಡಾ ಇವೆಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಇಲ್ಲಿಯ ಪಡಿತರ ವಿತರಕರು ಪ್ರತಿಯೊಂದು ಕಾರ್ಡ್ ಗಳಿಗೂ 20 ರೂಪಾಯಿಗಳಂತೆ ಹಣವನ್ನು ಪಡೆಯುತ್ತಿದ್ದಾರೆ.
ನಾವು ದುಡಿದು ಬದಕುವ ಜನ ಇವಾಗ ಏಲ್ಲಾ ಬಂದಾಗೇದರಿ ಮಾಡಾಕ ಕೆಲಸಾನು ಇಲ್ಲ ಊಟಕ್ಕುನೂ ಗತಿ ಇಲ್ಲಾರಿ ಸರಕಾದವರ ಅಕ್ಕಿ ಕೊಡ್ತಾರ ಆದರ ಅದು ನಮಗ ಕೈ ಸೇರೊವಲ್ಲದು ನಾವು ರೇಶನ ತರಾಕ ಹೊದರ ಪ್ರತಿ ಕಾರ್ಡುದಾರರಿಗೆ ಎರಡು ಕೆಜಿಯಂತೆ ಪಡಿತರ ಅಕ್ಕಿಯನ್ನು ಕಡಿತಗೊಳಿಸುತ್ತಿದ್ದಾರೆ ಅಲ್ಲದೆ ಅವೈಜ್ಞಾನಿಕ ಹಳೆಯ ತೂಕದ ಮಾಪನದಿಂದ ತೂಕ ಮಾಡುತ್ತಾರೆ ಇದರಿಂದಾಗಿ ಅಕ್ಕಿ, ಗೋಧಿಯ ತೂಕ ಎಷ್ಟಿದೆ ಎನ್ನುವುದು ಗೊತ್ತಾಗೋದೇ ಇಲ್ಲಾ
ಪ್ರತಿಯೊಬ್ರ ಬಳಿ ೨೦ ರೂಗಳನ್ನ ಪಡೆಯುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಪಡಿತರ ಕೇಂದ್ರದ ವ್ಯಾಪ್ತಿಗೆ ಬರುವ ತಾಲ್ಲೂಕಿನ ಬೋನ್ಹಾಳ, ಮಂಗಿಹಾಳ, ಹಾಗೂ ಬಂಡೇರದೊಡ್ಡಿ
ಗ್ರಾಮಗಳು ಸೇರಿದಂತೆ ಒಟ್ಟು ಸುಮಾರು 1300 ರಿಂದ 1500 ಕಾರ್ಡುಗಳು ಸದ್ಯ ಇವರ ವ್ಯಾಪ್ತಿಗೆ ಸೇರುತ್ತವೆ.
ಆದರೆ ಪಡಿತರ ವಿತರಕರು ಪ್ರತಿಯೊಂದು ಕಾರ್ಡಿಗೂ ₹20 ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಇದರ ಬಗ್ಗೆ ವಿಚಾರಿಸಿದಾಗ ಸ್ವತಃ ಪಡಿತರ ವಿತರಕರೆ ನಾವು ಯಾವುದೇ ರೀತಿಯ ಹಣವನ್ನು ಪಡೆದಿಲ್ಲ ಒತ್ತಾಯಪೂರ್ವಕವಾಗಿ ಜನರೇ ನಮಗೆ ಹಣವನ್ನು ನೀಡುತ್ತಿದ್ದಾರೆ ಎಂದು ಹಾರಿಕೇಯ ಉತ್ತರ ನೀಡುತ್ತಿದ್ದಾರೆ.
ಈ ಬಗ್ಗೆ ಜನರ ಹೇಳುವ ಪ್ರಕಾರ ರೇಷನ್ ಅಂಗಡಿಯ ಮಾಲೀಕರು ತಮ್ಮ ಕಾರ್ಡುಗಳಲ್ಲಿ ಎಂಟ್ರಿ ಮಾಡುವುದೇ ಒಂದು
ವಿತರಿಸುವುದೇ ಒಂದು,
ಉದಾಹರಣೆಗೆ ಪಡಿತರ ಚೀಟಿಯಲ್ಲಿ ನಮೂದಿಸುವ ಸಂಖ್ಯೆಯೇ ಬೇರೆ ಹಂಚುವ ಸಂಖ್ಯೆಯೇ ಬೇರೆಯಾಗಿದೆ ಸುಮಾರು ಒಂದು ಕಾರ್ಡಿನಲ್ಲಿ 20 ಕೆಜಿ ನಮೂದಿಸಿದ್ದರೆ ಕೇವಲ 15 ಕೆಜಿ ಅಕ್ಕಿಯನ್ನು ಮಾತ್ರ ಹಂಚಿಕೆ ಮಾಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.
ಅದೇನೇ ಇರಲಿ ಇಂತಹ ಪರಸ್ಥಿತಿಯಲ್ಲಿ ಜನತೆಗೆ ಆಧಾರವಾಗಬೇಕಾಗಿರುವ ಇಂಥಹ ವಿತರಕರು ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಜಿಲ್ಲೆಯಾದ್ಯಂತ ಇತಂಹ ನೂರಾರು ಪ್ರಕರಣಗಳಿವೆ ಸರಕಾರ ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸುವ ಮೂಲಕ ಪರಿಶೀಲಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಲಿ ಎನ್ನುವುದೇ ನಮ್ಮ ಆಶಯ.
Be the first to comment