ಜೀಲ್ಲಾ ಸುದ್ದಿಗಳು
ಬೀದರ್, ಕರೋನಾ ರೋಗಾನುದಿಂದ ದೇಶದ ಜನರು ತಲ್ಲಣಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕರೋನಾ ಸೋಂಕೀತರಿಗೆ ಚಿಕಿತ್ಸೆ ನೀಡುತ್ತ ಮತ್ತು ಇನ್ನೀತರ ಕಾರ್ಯಕ್ಕಾಗಿ ಒಗ್ಗೂಡಿ ಜನಸೇವೆ ಮಾಡುತ್ತಿರುವ ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ಕರೋನಾ ರೋಗಾಣು ಹಿಮ್ಮೆಟ್ಟಿಸಲು ಕಾರ್ಯನಿರತರಾದ ಎಲ್ಲರಿಗೂ ಮಾನ್ಯ ಪ್ರಧಾನಮಂತ್ರಿಗಳು ಹೇಳಿದಂತೆ ದೇಶದ ಜನರಿಂದ ಅಭಿನಂದನೆ ತಿಳಿಸಲಾಗುವುದು ಎಂದು ಸಂಸದರಾದ ಭಗವಂತ ಖೂಬಾ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.8ರಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರೋನಾ ವೈರಾಣು ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುತ್ತಿರುವ ಬೀದರ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಈ ವೇಳೆ ಜಿಲ್ಲೆಯಲ್ಲಿ ಕರೋನಾ ಹಿನ್ನೆಲೆಯಲ್ಲಿ ಜನಸೇವೆಯಲ್ಲಿ ತೊಡಗಿದ ಎಲ್ಲರಿಗೂ ತಾವು ಕೂಡ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಂಸದರಾದ ಖೂಬಾ ಅವರು ತಿಳಿಸಿದರು.
ಸಂಸದರ ಸಲಹೆ: ಜಿಲ್ಲೆಯಲ್ಲಿ ಈಗಾಗಲೇ 10 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯ ಎಲ್ಲರೂ ಆರೋಗ್ಯದಿಂದ ಇರುವ ನಿಟ್ಟಿನಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಬಾರದು. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ, ತಬ್ಲಿಗ್ ಜಮಾತ್ ಸಭೆಯಲ್ಲಿ ಭಾಗವಹಿಸಿ, ಬೀದರನಲ್ಲಿ ಎಲ್ಲಾದರು ಅಪ್ಪಿತಪ್ಪಿ ಅಡಗಿ ಕೂತಿದ್ದರೆ ಪೊಲೀಸ್ ಇಲಾಖೆಯವರು ಯಾವುದೇ ಮುಲಾಜಿಲ್ಲದೇ ಅವರನ್ನು ಹೊರಗೆ ತೆಗೆಯಬೇಕು. ಅಲ್ಲಿದ್ದ ಜನರು ಅದಕ್ಕೆ ಸಹಕರಿಸಬೇಕು ಎಂದು ಸಂಸದರು ಸಲಹೆ ಮಾಡಿದರು.
ವಿವಿಧ ತಾಲೂಕುಗಳಿಗೆ ಭೇಟಿ: ತಾವುಗಳು ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪಾ ಮತ್ತು ಮನ್ನಾಏಖೇಳಿಗೆ ಭೇಟಿ ಕೊಟ್ಟಿದ್ದು, ಅಲ್ಲಿ ಸಭೆ ನಡೆಸಿ ಬೇರೆ ಬೇರೆ ವಿಷಯಗಳನ್ನು ಚರ್ಚಿಸಲಾಗಿದೆ. ಜನರಿಗೆ ತೊಂದರೆಯಾಗದಂತೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕೂಡ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾಗಿ ಸಂಸದರು ಹೇಳಿದರು.
Be the first to comment