ಮಾಕನಡಕು ಗ್ರಾಪಂ:ನಡೆದಿದೆ ಅವ್ಯವಹಾರ ಕಲ್ಪನೆಗೆ ನಿಲುಕದಷ್ಟು-ಉಪಾಧ್ಯಕ್ಷ್ಯೆ ಶ್ರೀಮತಿ ಕಲ್ಪನಾ ಹೇಮೇಶಗೌಡ ಗಂಭೀರ ಆರೋಪ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಾಕನಡಕು ಗ್ರಾಮ ಪಂಚಾಯ್ತಿಯಲ್ಲಿ.ಭಾರೀ ಮೊತ್ತದ ಅವ್ಯವಹಾರಗಳು ಜರುಗಿವೆ ಎಂದುಗ್ರಾಮ ಪಂಚಾಯ್ತಿ ಉಪಾಧ್ಯೆಕ್ಷೆ ಶ್ರೀ ಮತಿ ಕಲ್ಪನಾ ಹೇಮೇಶಗೌಡ ಮತ್ತು ಗ್ರಾಪಂ ಸದಸ್ಯ ಕುರಿಹಟ್ಟಿ ಓಬಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ. ಇನ್ನೋವ೯ ಗ್ರಾಪಂ ಸದಸ್ಯೆ ಶ್ರೀಮತಿ ಮಾರಕ್ಕಳ ಗಂಡ ಗ್ರಾಮದ ಮುಖಂಡ ಡಿ.ನರಸಿಂಹಪ್ಪ ಅವರಿಬ್ಬರೊಂದಿಗೆ ಸಾಥ್ ನೀಡಿ ಜಂಟಿ ಹೇಳಿಕೆ ನೀಡಿದ್ದಾರೆ. ಮಾಕನಡಕು ಗ್ರಾಪಂನಲ್ಲಿ ಇದುವರೆಗೆ ಭಾರೀ ಹಗರಣಗಳು ಜರುಗಿವೆ.ಅದಕ್ಕೆ ಇದು ಕೇವಲ ಉದಾಹರಣೆ ಮಾತ್ ಕಳೆದ ಐದುವಷ೯ದಲ್ಲಿ ಗ್ರಾಪಂ ಬ್ರಷ್ಠ ಜನಪ್ರತಿನಿಧಿಗಳೊಂದಿಗೆ ಕೆಲ ಬ್ರಷ್ಠ ಅಧಿಕಾರಿಗಳು ಭಾಗಿಯಾಗಿ ಬ್ರಷ್ಠಾಚಾರ ಎಸಗಿದ್ದಾರೆ.ಈ ಮೂಲಕ ಗ್ರಾಪಂ ಅಭಿವೃದ್ಧಿ ಹಣವನ್ನು ಬಗೆದು ತಮ್ಮ ಜೇಬುಗಳನ್ನು ತುಂಬಿಸಿಕೊಂಡಿದ್ದಾರೆ.ಮಾಹಿತಿ ಹಕ್ಕು ಅಸ್ತ್ರ ಬಳಸಿ ಸತ್ಯವನ್ನು ಹೊರಹಾಕಿ ಮಾಧ್ಯಮ ಪತ್ರಕತ೯ರ ಮೂಲಕ ಬಂಡವಾಳ ಬಯಲು ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

ಹಳೇಚೆಕ್ ಡ್ಯಾಂ ಹೆಸರಲ್ಲಿ ಭಾರೀ ಹಣ ಲೂಟಿ ಮಾಡೋ ಮೂಲಕ ಸಕಾ೯ರಕ್ಕೆ ವಂಚನೆ ಮಾಡಲಾಗುತ್ತಿದೆ. ಇದು ಸುಮಾರು 8ಲಕ್ಷ ರೂ ಕಾಮಗಾರಿಯಾಗಿದೆ.ಇದರಲ್ಲಿ ಬಹುಪಾಲು ಸಕಾ೯ರಕ್ಕೆ ತಪ್ಪು ಮಾಹಿತಿ ಕೊಟ್ಟಿರುವ ಬ್ರಷ್ಠ ಗ್ರಾಪಂ ಅಭಿವೃದ್ಧಿ ಅಧಿಕಾರಿ.ಅಧ್ಯಕ್ಷ ಸ್ಥಾನದ ಬ್ರಷ್ಠಾಚಾರಕ್ಕೆ ದುಭ೯ಳಕೆ ಮಾಡಿಕೊಂಡಿರುವ ಅಧ್ಯಕ್ಷ.ತನ್ನ ಹೆಂಡತಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವ ಸದಸ್ಯೆಯೋವ೯ರ ಪತಿ.ಮತ್ತು ಸದಸ್ಯರೋವ೯ಇವರ ಜೇಬುಗಳು ಬ್ರಷ್ಠಾಚಾರದಹಣದಿಂದ ತುಂಬಲಿವೆ.ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಗತಿ ಅದೋಗತಿಯಾಗಿದೆ

ಎಂದು ಅವರು ದೂರಿದ್ದಾರೆ. ಸಂಬಂಧಿಸಿದ ಮೇಲಾಧಿಕಾರಿಗೆ ತಪ್ಪು ಮಾಹಿತಿ ಕೊಟ್ಟು ಹಳೇ ಮಲ್ಟಿ ಚೆಕ್ ಡ್ಯಾಂಗೆ ಹೊಸದಾಗಿ ವಕ್೯ಅಫೂ೯ಲ್ ಮಾಡಿಸಲಾಗಿದೆ.ಈ ಮೂಲಕ ಭಾರೀ ಮೊತ್ತದ ಹಣ ಲೂಟಿಮಾಡಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಪ್ರಶಾಂತ್.ಗ್ರಾಪಂ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ.ಸದಸ್ಯರಾದ ಶ್ರೀಮತಿ ಪುಷ್ಪಾವತಿ ಗಂಡ ಎ.ನಾಗರಾಜ ಮತ್ತು ಸದಸ್ಯ ಎಂ.ಟಿ.ತಿಪ್ಪೇಸ್ವಾಮಿರವರು ಭಾಗಿಯಾಗಿ ಇದರಲ್ಲಿ ಭಾರೀ ಹಣವನ್ನು ಲೂಟಿ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.

**ಜಾಬ್ ಕಾಡಿ೯ನವರಿಗೇ ಜಾಬಿಲ್ಲ-**

ತರಾತುರಿಯಲ್ಲಿ ಎನ್.ಎಮ್.ಆರ್.ತೆಗೆದು ರಾತ್ರೋ ರಾತ್ರಿ ಜೆಸಿಬಿ ಯಂತ್ರದಿಂದ ಕಾಮಗಾರಿಯನ್ನು ಅವರು ನಡೆಸಿದ್ದಾರೆ.ತೋಪ೯ಡಿಕೆಗೆ ಮಾತ್ರ ಮರುದಿನ ಕಾಮಗಾರಿಯಲ್ಲಿ ಅಲ್ಪ ಸ್ವಲ್ಪ ಕೆಲಸವನ್ನು ನೆರೆ ಗ್ರಾಮದ ಕೂಲಿಗಾರರನ್ನು ಕರೆಸಿ ಕೆಲಸ ಮಾಡಿಸಲಾಗಿದೆ.ಬಹುತೇಕ ಸ್ಥಳೀಯ ಕೂಲಿಗಾರರಿಗೆ ಕೆಲಸ ಕೊಟ್ಟಿಲ್ಲ.ಕೊರೋನಾ ಮಹಾಮಾರಿಯ ರುದ್ರನತ೯ನ ಸಂದಭ೯ದಲ್ಲಿ ಕಾಮಗಾರಿ ನಡೆಸಿದರೆ ಸಾಮಾಜಿಕ ಅಂತರ ಪಾಲಿಸಲಾಗದು.ಕೂಲಿಗಾರರಿಗೇ ಮೀಸಲಾಗಿರಿಸೋ ಕಾರಣ ಯಾವುದೇ ಕಾಮಗಾರಿಗಳನ್ನು ನಡೆಸದಂತೆ ಸ್ಥಗಿತಗೊಳಿಸಿ ಸಕಾ೯ರ ಆದೇಶಿಸಿದೆ.ಆದರೂ ಈ ಬ್ರಷ್ಠರು ರಾತ್ರೋರಾತ್ರಿ ಜೆಸಿಬಿ ಮೂಲಕ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದಾರೆ.ಇದು ಗ್ರಾಮದ ಕೂಲಿಗಾರರಿಗೆ ಮಾಡಿದ ಮಹಾಮೋಸವಾಗಿದೆ. ಗ್ರಾಪಂ ಅಧ್ಯಕ್ಷರ ಸಹೋದರ ದುಡಿಮೆಸ್ಥ ಅಂತಹವರಿಗೆ ಜಾಬ್ ಕಾಡ್೯ ಕೊಡಲಾಗಿದೆ.ಕೂಲಿ ಕೆಲಸ ಮಾಡಲು ಅಶಕ್ತ ವಿಕಲಾಂಗೂ ಕಾಬ್ ಕಾಡ್೯ಕಡಲಾಗಿದೆ.ಜಾಬ್ ಕಾಡ೯ವಿತರಣೆಯಲ್ಲಿ ಭಾರೀ ಕೊಟ್ಟಿ ದಾಖಲೆ ಸೃಷ್ಟಿಸಲಾಗಿದೆ.ಇದರಿಂದಾಗಿ ಬಡವರ ಹೊಟ್ಟೆಯ ಮೇಲೆ ಬಂಡೆ ಎಳೆದು ತಮ್ಮ ಜೇಬು ತುಂಬಿಸಿಕೊಳ್ಳೋದರಲ್ಲಿ ಮುಂದಾಗಿದ್ದಾರೆಂದು ಉಪಾಧ್ಯಕ್ಷೆ ಶ್ರೀಮತಿ ಕಲ್ಪನಾ ಹೇಮೇಶಗೌಡ ಮತ್ತು ಸದಸ್ಯ ಹಾಗೂ ಹೋರಾಟಗಾರ ಕುರಿಹಟ್ಟಿ ಓಬಣ್ಣ.ಗ್ರಾಮದ ಮುಖಂಡ ಡಿ.ನರಸಿಂಹಪ್ಪ ಆಕ್ರೋಶ ವ್ಯೆಕ್ತಪಡಿಸೊದ್ದಾರೆ. ಮಾಡಿದ್ದಾರೆ.ಸಂಬಂಧ ಪಟ್ಟ ಇಲಾಖಾ ಉನ್ನತಾಧಿಕಾರಿಗಳು.ಜಿಲ್ಲಾಧಿಕಾರಿಗಳು.ಜಿಲ್ಲಾಪಂಚಾಯ್ತಿ ಮೂಖ್ಯ ಕಾಯ೯ನಿವ೯ಹಣಾಧಿಕಾರಿಗಳು ಶೀಘ೯ವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ.ಲೆಕ್ಕಪತ್ರಗಳನ್ನು ಪರಿಶೀಲಿಸಬೆಕು.ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡವರ ವಿರುದ್ಧ ಮತ್ತು ಬ್ರಷ್ಠಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿ ಜನಪ್ರತಿನಿಧಿಗಳನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ನಡೆಸಬೇಕು.ಗ್ರಾಪಂ ಹಣ ಲೂಟಿ ಹೊಡೆದವರಿಗೆ ಕಾನೂನು ರೀತಿ ಸೂಕ್ತ ಶಿಕ್ಷೆಯಾಗುವಲ್ಲಿ ಉನ್ನತಾಧಿಕಾರಿಗಳು ಶಿಸ್ಥು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.

**ದೂರು ತನಿಖೆಗೆ ಆಗ್ರಹ-**

ಸಂಬಂಧಿಸಿದಂತೆ ರಾಜ್ಯದ ರಾಜ್ಯಪಾಲರಿಗೆ.ಮುಖ್ಯಮಂತ್ರಿಗಳಿಗೆ.ಇಲಾಖೆಯ ಸಚಿವರಿಗೆ. ಇಲಾಖೆಯ ನಿಧೇ೯ಶಕರಿಗೆ. ಜಿಲ್ಲಾಪಂಚಾಯ್ತಿ ಮುಖ್ಯಕಾಯ೯ನಿವ೯ಹಣಾಧಿಕಾರಿಗಳಿಗೆ.ಜಿಲ್ಲಾಧಿಕಾರಿಗಳಿಗೆ.ಲೋಕಾಯುಕ್ತ ಅಧಿಕಾರಿಗಳಿಗೆ.ಬ್ರಷ್ಠಾಚಾರ ನಿಗ್ರಹದಳದ ಮುಖ್ಯಾಧಿಕಾರಿಗಳಿಗೆ.ರಾಜ್ಯದಲ್ಲಿರುವ ಎಲ್ಲಾ ಪತ್ರಿಕೆಗಳ ಹಾಗೂ ಪ್ರಮುಖ ಮಾಧ್ಯಮಗಳ ಕಚೇರಿಗಳಿಗೆ.ಕೆಲ ಪ್ರಾಮಾಣಿಕ ಪತ್ರಕತ೯ರಿಗೆ ಸೂಕ್ತ ದಾಖಲುಗಳ ಸಮೇತ ಅಗತ್ಯ ಸಾಕ್ಷಿ ಆಧಾರಗಳ ಸಮೇತ ದೂರು ನೀಡಲಾಗಿದೆ.ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತಾರೆಂದು ️ಇವರೆಲ್ಲರ ಮೇಲೆ ತಮಗೆ ವಿಶ್ವಾಸವಿದೆ ಎಂದು ಅವರು ನುಡಿದಿದ್ದಾರೆ.

Be the first to comment

Leave a Reply

Your email address will not be published.


*