ಕೊರೋನಾ ಗೆ ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಲಿ ಶಂಕೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ರಾಜ್ಯದ ಸುದ್ದಿಗಳು

Breaking news ಅಂಬಿಗ ನ್ಯೂಸ್  ಯಾದಗಿರಿ

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಿರಿನಾಡು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಂಗಂಡಿ ಗ್ರಾಮದ ಕೋರೋನಾ ಗೆ ಮೊದಲ ಬಲಿಯಾಗಿದೆ ಎಂದು ಶಂಕಿಲಾಗಿದೆ

ಮೃತ ಬಾಲಕಿ ಹಂಸವೇಣಿ ತಂದೆ ಭೀಮರಾಯ ಹೊಸ್ಮನಿ ಜಾ॥ ಮಾದಿಗ ವಯ:4 ವರ್ಷ ಇವಳ ತಂದೆ ತಾಯಿಯವರು ಬೆಂಗಳೂರಿಗೆ ದುಡಿಯಲು ಹೋಗಿದ್ದರು ಈಡೀ ದೇಶದಾದ್ಯಂತ ಲಾಕ್ ಡೌನ ಆದ ಹಿನ್ನೆಲೆ ದಿನಾಂಕ 01-04-2 ರಂದು ಬೆಂಗಳೂರಿನಿಂದ 45 ಜನರು ಒಂದು ಲಾರಿಯಲ್ಲಿ ಕುಟುಂಬ ಸಮೇತ ವಾಪಸ್ ಗ್ರಾಮಕ್ಕೆ ಬಂದಿದ್ದರು.

ಭೀಮರಾಯನಗುಡಿ ಜ್ವರ ತಪಾಸಣಾ ಕೇಂದ್ರದಲ್ಲಿ ಎಲ್ಲರೂ ಜ್ವರ ಚೆಕ್ ಮಾಡಿಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದರು ಎನ್ನಲಾಗಿದೆ .

ಮಗುವಿನ ಮೈಯಲ್ಲಿ ಎರಡು ಮೂರು ದಿನದಿಂದ ಜ್ವರ ನೆಗಡಿ ಬಂದಿದ್ದು ಹತ್ತಿಗುಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ತಪಾಸಣೆ ಮಾಡಿಸಿದ್ದು ಇರುತ್ತದೆ.

ಇಂದು ದಿನಾಂಕ 07-04-2020 ರಂದು ಬಾಲಕಿ ಇವಳು ಜ್ವರ, ನೆಗಡಿ, ಕೆಮ್ಮು, ಹಾಗೂ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯನ್ನು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದಿದ್ದು ವೈದ್ಯಾಧಿಕಾರಿವರಾದ ಡಾ॥ ಮಲ್ಲಪ್ಪ ಹಾಗೂ ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಯವರು ಸದರಿಯವಳ ಮರಣದ ನಿಜಾಂಶ ತಿಳಿಯಲು ರಕ್ತ ಮತ್ತು ಕಫ ಮಾದರಿಯನ್ನು ಸಂಗ್ರಹಿಸಿ ತಪಾಸಣೆ ಕುರಿತು ಕಲಬುರಗಿ ಗೆ ಕಳುಹಿಸಲಾಗಿದೆ.ವರದಿ ಬಂದ ನಂತರ  ನಿಜಾಂಶ ಗೊತ್ತಾಗಬೇಕಿದೆ.

Be the first to comment

Leave a Reply

Your email address will not be published.


*