ಜೀಲ್ಲಾ ಸುದ್ದಿಗಳು
ಕಲಬುರಗಿ: ಕೋವಿಡ್-19 ಸೋಂಕಿನ ಹಿನ್ನಲೆ ಲಾಕ್ ಡೌನ್ ಆದ ಪರಿಣಾಮ ಬೆಳೆದ ಕಲ್ಲಂಗಡಿಯನ್ನು ಮಾರಾಟಕ್ಕೆ ಸಾಗಾಣಿಕೆ ಮಾಡಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಾಣದ ರೈತ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಅವರ ಕುಟುಂಬಕ್ಕೆ ಮಂಗಳವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ವಿತರಿಸಿದರು.
ಸಚಿವರು ಜಿಲ್ಲೆಯ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ಮೃತ ರೈತ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದಲ್ಲದೆ ಚೆಕ್ ವಿತರಿಸಿದರು.
ಸರ್ಕಾರದ ವತಿಯಿಂದ 5 ಲಕ್ಷ ರೂ, ಸಾಮಾಜಿಕ ಭದ್ರ ತೆ ಯೋಜನೆ ಅಡಿ 20 ಸಾವಿರ, ಶವ ಸಂಸ್ಕಾರ ದ ಖರ್ಚು 5 ಸಾವಿರ ಮತ್ತು ವಿಧವಾ ವೇತನದ 2 ಸಾವಿರ ಸೇರಿ 5. 27 ಲಕ್ಷ ರೂ ಮೊತ್ತದ ಚೆಕ್ ಮೃತ ರೈತನ ಪತ್ನಿಗೆ ವಿತರಿಸಿದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ತರಕಾರಿ ಹಾಗೂ ಹಣ್ಣು ಹಂಪಲುಗಳ ಸರಬರಾಜು ಮತ್ತು ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು. ಮೃತ ರೈತನಿಗೆ ಸೇರಿದ 8.13 ಎಕರೆ ಪ್ರದೇಶದ ಪೈಕಿ 1.31 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದ. ಪತ್ನಿ ಸೇರಿದಂತೆ ಇಬ್ಬರು ಗಂಡು ಮಕ್ಕಳನ್ನು ರೈತ ಅಗಲಿದ್ದಾನೆ.
Be the first to comment