ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ನಡೆದ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ ಜಾಗೃತಿ ಪರಿಶೀಲನೆ ಸಭೆ

ವರದಿ:- ಬಸವರಾಜ ಬೆಳಗಾವಿ

ಜೀಲ್ಲಾ ಸುದ್ದಿಗಳು

ಹೌದು ಜಾಗತಿಕ ಮಾರಕ ಕಾಯಿಲೆ ಕರೋನಾ ವೈರಸ್ ತಡೆಗಟ್ಟಲು ಇಂದು ಕಿತ್ತೂರಿನ ಎಂಕೆ ಹುಬ್ಬಳ್ಳಿಯಲ್ಲಿ ಶಾಸಕರಾದ ಮಹಾಂತೇಶ್ ದೊಡ್ಡ ಗೌಡರ ನೇತೃತ್ವದಲ್ಲಿ ಜಾಗೃತಿ ಪರಿಶೀಲನೆ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಮಹಾಂತೇಶ್ ದೊಡ್ಡಗೌಡರು . ಈ ಕರೋನಾ ವೈರಸ್ ತಡೆಗಟ್ಟುವುದಕ್ಕೆ ಕಿತ್ತೂರು ತಾಲ್ಲೂಕು ಆಡಳಿತ ಸರ್ವಸನ್ನದವಾಗಿ ಮುನ್ನಡೆಯುತ್ತಿದ್ದು, ಇದಕ್ಕೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಹಾಗೂ ವಿಶೇಷವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚು ಶ್ರಮವಹಿಸುತ್ತಿದ್ದು ಇವರಿಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಮಾಧ್ಯಮ ಮಿತ್ರರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಿತ್ತೂರು ವೃತ್ತದ cpi ರವರಾದ ಶ್ರೀಕಾಂತ್ ತೋಟಗಿ ಯವರು ಮಾತನಾಡಿ ನಮ್ಮ ಪೊಲೀಸ್ ಇಲಾಖೆಯು ಸಹ ಸಾಕಷ್ಟು ಸುರಕ್ಷಿತ ಕ್ರಮ ಕೈಗೊಂಡಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್ ಕ್ರಮ ಕೈ ಗೊಂಡಿದ್ದೇವೆ ಎಂದು ಹೇಳಿದರು, ಆರೋಗ್ಯ ಇಲಾಖೆಯು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಎಲ್ಲಾ ಗ್ರಾಮಗಳಲ್ಲೂ ಅರಿವು ಮೂಡಿಸುವ ಕೆಲಸ ನಮ್ಮ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯ ಕೇಂದ್ರ ಅಧಿಕಾರಿಗಳು ಆದ ಸಿದ್ದಣನವರ್ ಹೇಳಿದರು, ಕಿತ್ತೂರು ವೈದ್ಯಾಧಿಕಾರಿಗಳು ಆದ ಮಾಸ್ತಿ ಹೋಳಿ ಯವರು ಎಲ್ಲಾ ಇಲಾಖೆಗಳ ಸಿಬ್ಬಂದಿಗಳಿಗೆ ಆರೋಗ್ಯದ ಬಗ್ಗೆ ಕೈ ಗೊಳ್ಳಬೇಕಾದ ಸಲಹೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಆದ ಸುಭಾಷ್ ಸಂಪಗಾವಿ, cdpo, ಕಿತ್ತೂರು ಉಪ ತಹಶೀಲ್ದಾರ್ ರವರಾದ ಸಾಲುಂಕೆ, ದಂದೂರ್ ಹಾಗೂ ಎಂಕೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಆದ 

ಐ. ಸಿ ಸಿದನಾಳ್ ಹಾಗೂ ಕಿತ್ತೂರು psi ರವರಾದ ಕುಮಾರ್ ಹಿತ್ತಲಮನಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಎಲ್ಲಾ ಆಶಾಕಾರ್ಯಕರ್ತೆಯರು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*