ಮಾಧ್ಯಮಗಳ ಸೇವೆ ಅಪಾರವಾದದ್ದು :ಕಂಠಿ ಮಠದ ಶ್ರೀ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುರಪುರ

ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ದೇಶದೆಲ್ಲೆಡೆ ತಲ್ಲಣವನ್ನು ಮೂಡಿಸಿದ್ದು ವ್ಯಾಪಕವಾಗಿ ಹರಡುತ್ತಿದೆ ಇದನ್ನು ತಡೆಗಟ್ಟಲು ಈಗಾಗಲೇ ಭಾರತದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಆದರೂ ಕೂಡ ದಿನೇದಿನೇ ದೇಶದಾದ್ಯಂತ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ ವಿನಹ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಕೋರೋನಾ ವೈರಸ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಶ್ರೀ ಕೋರಿಸಿದ್ದೇಶ್ವರ ಶಾಖಾ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ
ಶ್ರೀ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಜೊತೆಗೆ ಪತ್ರಿಕಾ ಅಂಗ ಕೂಡ ಮುಖ್ಯವಾದದ್ದಾಗಿದೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಮಾಧ್ಯಮಗಳ ಸೇವೆ ಅಪಾರವಾದದ್ದು ಮಾಧ್ಯಮದವರ ಮುನ್ನೆಚ್ಚರಿಕೆಯ ಕ್ರಮದಿಂದ ಬಹುಸಂಖ್ಯಾತ ರಾಷ್ಟ್ರವಾದ ಭಾರತದಲ್ಲಿ ಕೊರೊನಾ ವನ್ನು ತಡೆಗಟ್ಟಲು ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ ಮಾಧ್ಯಮ ಮಿತ್ರರು ಕೂಡ ತಮ್ಮ ಜೀವದ ಹಂಗು ತೊರೆದು ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಹಗಲಿರುಳು ನಮಗಾಗಿ ಶ್ರಮಿಸುತ್ತಿದ್ದಾರೆ ಆದ್ದರಿಂದ ನಾವೆಲ್ಲರೂ ಮಾಧ್ಯಮಗಳ ಕಾರ್ಯವನ್ನು ಶ್ಲಾಘಿಸೋಣ ಎಂದರು.

ಮತ್ತು ಈಗಾಗಲೇ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಪೋಲಿಸ್ ಸಿಬ್ಬಂದಿಗಳು ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಅವರೊಂದಿಗೆ ಅನುಚಿತ ವರ್ತನೆ ಮಾಡುವುದು ಸಲ್ಲದು ಎಂದು ಹೇಳಿದರು.

Be the first to comment

Leave a Reply

Your email address will not be published.


*