ದೀನರಿಗೆ ಪಡಿತರ ನೀಡಿ ಮಗನ ಬಥ್೯ಡೇ ಆಚರಿಸಿದ ಕೂಡ್ಲಿಗಿ ಪೇದೆ ಸ್ವರೂಪನಂದ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆ ಪೇದೆ ಹಾಗೂ ಯುವಬರಹಗಾರ ಎಂ.ಸ್ವರೂಪನಂದರವರು ತಮ್ಮ ಮಗು ಸ್ವಣಾ೯ಕ್ಷನ ಎರಡನೇ ವಷ೯ದ ಹುಟ್ಟು ಹಬ್ಬವನ್ನು ದೀನರಿಗೆ ಬಡವರಿಗೆ ಪಡಿತರವನ್ನು ದಾನಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.ಡಿ.ವೈ.ಎಸ್ಪಿ ಶಿವಕುಮಾರ ಮಾತನಾಡಿ ದಾನಮಾಡುವದರಲ್ಲಿ ಸಾಥ೯ಕತೆ ಅಡಗಿದೆ.ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಲಾಕ್ ಡೋನ್.144ಸೆಕ್ಷನ್ ಜಾರಿ ಇರೋದರಿಂದಾಗಿ ಕಡುಬಡವರಿಗೆ ಕೂಲಿಕಾಮಿ೯ಕರ ಬದುಕು ತುಂಬಾ ಗಂಭೀರವಿದ್ದು.ಈ ಸಂದಭ೯ದಲ್ಲಿ ಮಗನ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ನೆರವು ನೀಡಿರುವುದು ಶ್ಲಾಘನೀಯ.

ಮಾನವೀಯ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ.ಸಕಾ೯ರದ ಸಹಕಾರದ ಹೊರತಾಗಿ ಶಕ್ತಾನುಸಾರ ದಾನ ಧಮ೯ ಮಾಡುವ ಪರೋಪಕಾರ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು.ಪಿ.ಎಸ್.ಐ.ತಿಮ್ಮಣ್ಣ ಚಾಮನೂರು ಮಾತನಾಡಿ ಆಡಂಬರದ ಆಚರಣೆಗಳಿಗಿಂತ ಇಂತಹ ಅಥ೯ಪೂಣ೯ ಕಾಯ೯ಕ್ರಮದೊಂದಿ ಆಚರಿಸುವುದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ ಎಂದರು.ಪೇದೆ ಸ್ವರೂಪನಂದೆ ಮಡದಿ ಮತ್ತು ಮಕ್ಕಳಾದ ಸ್ವಸ್ಥಿಶ್ರೀ.ಸ್ವಣಾ೯ಕ್ಷ.ಇದ್ದರು. ಕೊತ್ಲಪ್ಪ.ಮುನ್ನಾ.ರಘು.ಪ್ರಶಾಂತ್.ನಾಗರಾಜ.ಬಾಸುನಾಯ್ಕ್.ಪರಶುರಾಮ್.ಷಣ್ಮುಖ ಮುಂತಾದವರು ಉಪಸ್ಥಿತರಿದ್ದರು.

 

ಪೇದೆ ನಾಗೇಶರಿಂದ ಆಹಾರ ಪದಾಥ೯ಗಳ ವಿತರಣೆ

ಕೂಡ್ಲಿಗಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ನಾಗೇಶ ರವರು ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಬಳಿ ಚೋರನೂರು ರಸ್ತೆಯಲ್ಲಿರುವ ಹಗಲು ವೇಷಗಾರರ ಕುಟುಂಬಗಳಿಗೆ ಅಗತ್ಯ ಆಹಾರ ಪದಾಥ೯ಗಳನ್ನು ನೆರವಾಗಿ ನೀಡಿದರು.ಅವರು ಮಾತನಾಡಿ ಕೊರೋನಾ ರೋಗದ ಪ್ರಭಾವಕ್ಕೆ ಬಡಕುಟುಂಬಗಳ ಜೀವನ ತುಂಬಾ ದುಸ್ಥಿತಿಯಲ್ಲಿವೆ.ಸಕಾ೯ರದ ಸೇವೆಯಲ್ಲಿರುವ ತಾವು ತಮಗೆ ಬರುವ ಸಂಬಳದಲ್ಲಿ ಶಕ್ತಾನುಸಾರ ಬಡವರಿಗೆ ನೆರವು ನೀಡುವ ಬಹುದಿನದ ಇಂಗಿತವಾಗಿತ್ತು.ಇದಕ್ಕೆ ತಮ್ಮ ಮಡದಿ ಶೋಭಾರವರು ಸಹ ತಮಗೆ ಪ್ರೇರೇಪಿಸಿದ್ದಾರೆ ಎಂದು ಪೊಲೀಸ್ ಪೇದೆ ನಾಗೇಶ ತಿಳಿಸಿದ್ದಾರೆ.ಅವರ ಪುತ್ರಿ ರೋಹಿಣಿಯೂ ಈ ಸಂದಭ೯ದಲ್ಲಿ ಜೊತೆಗಿದ್ದಳು.✍️

Be the first to comment

Leave a Reply

Your email address will not be published.


*