ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುರಪುರ
ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ದೇಶದೆಲ್ಲೆಡೆ ತಲ್ಲಣವನ್ನು ಮೂಡಿಸಿದ್ದು ವ್ಯಾಪಕವಾಗಿ ಹರಡುತ್ತಿದೆ ಇದನ್ನು ತಡೆಗಟ್ಟಲು ಈಗಾಗಲೇ ಭಾರತದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಆದರೂ ಕೂಡ ದಿನೇದಿನೇ ದೇಶದಾದ್ಯಂತ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತವೆ ಹೊರತು ಕಡಿಮೆಯಾಗುತ್ತಿಲ್ಲ.
ದಿನದಿಂದ ದಿನಕ್ಕೆ ಜನತೆ ಕರೋನ ಆತಂಕಕ್ಕೆ ಭಯಭೀತರಾಗಿದ್ದು ಈಗಾಗಲೇ ಪ್ರಧಾನಮಂತ್ರಿಯವರು ನೀಡಿದ್ದ ಕರೆಗೆ ದೀಪ ಬೆಳಗಿಸುವ ಮೂಲಕ ಸಾರ್ವಜನಿಕರೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಲು ಇಂದು ರಾತ್ರಿ 9ಗಂಟೆಗೆ ದೀಪ ಹಚ್ಚುಲು ಕರೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಕೋರಿಸಿದ್ದೇಶ್ವರ ಶಾಖಾ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ
ಶ್ರೀ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದೀಪ ಹಚ್ಚುವುದು ಕೇವಲ ಅಂದಕಾರವಲ್ಲ ಮನುಷ್ಯನನ್ನು ಜ್ಞಾನದೆಡೆಗೆ ಕರೆದೊಯ್ಯುವ ವಿಶೇಷವಾದ ಶಕ್ತಿ ದೀಪಕ್ಕೆ ಇದೆ, ಆದ್ದರಿಂದ ನಾವೆಲ್ಲರೂ ಕರೋನಾ ಹೊಡೆದೋಡಿಸಲು
ದೀಪವನ್ನು ಹಚ್ಚುವುದರ ಮೂಲಕ ಅಜ್ಞಾವೆಂಬ ದುಷ್ಟಶಕ್ತಿಯನ್ನು ಹೊಡೆದೋಡಿಸೋಣ,
ಆದ್ದರಿಂದ ಸಗರನಾಡಿನ ಜನತೆ ಈ ಕೊರೊನಾ ಮಹಾಮಾರಿಗೆ ಆತಂಕ ಪಡುವ ಅವಶ್ಯಕತೆ ಇಲ್ಲ.
ನಮ್ಮ ಸಗರ ನಾಡಿನಲ್ಲಿ ಸಂತರು, ಶರಣರು, ದಾರ್ಶನಿಕರು, ಹಾಗೂ ಮಹಾತ್ಮರು ಜನಿಸಿದ ಪುಣ್ಯ ಸ್ಥಳವಾಗಿರುವುದರಿಂದ ಇಲ್ಲಿ ಪಾಪಿ ಕರೋನಾದ ಆಟ ನಡೆಯೋದಿಲ್ಲ ,
ಪಾಪಿ ಕೊರೊನಾವನ್ನು ಇಲ್ಲದಂತೆ ಮಾಡಲು
ದೇಶದ ಪ್ರಜೆಗಳಾದ ನಾವು ಸರಕಾರದ ಆದೇಶವನ್ನು ಪಾಲಿಸುವುದು ಬಹು ಮುಖ್ಯವಾಗಿದೆ.
ಈಗಾಗಲೇ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಪೋಲಿಸ್ ಸಿಬ್ಬಂದಿಗಳು ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಅವರೊಂದಿಗೆ ಅನುಚಿತ ವರ್ತನೆ ಮಾಡುವುದು ಸಲ್ಲದು.
ಮುಖ್ಯವಾಗಿ ಮಾಧ್ಯಮಗಳ ಸೇವೆ ಅಪಾರವಾದದ್ದು ಮಾಧ್ಯಮದವರ ಮುನ್ನೆಚ್ಚರಿಕೆಯ ಕ್ರಮದಿಂದ ಬಹುಸಂಖ್ಯಾತ ರಾಷ್ಟ್ರವಾದ ಭಾರತದಲ್ಲಿ ಕೊರೊನಾ ವನ್ನು ತಡೆಗಟ್ಟಲು ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ ಆದ್ದರಿಂದ ನಾವೆಲ್ಲರೂ ಮಾಧ್ಯಮಗಳ ಕಾರ್ಯವನ್ನು ಶ್ಲಾಘಿಸೋಣ ಎಂದರು.
Be the first to comment