ಕೂಡ್ಲಿಗಿ ಪಪಂ:ಸಾಮಾಜಿಕ ಅಂತರ ನಿಯಮ ಉಲ್ಲಂಘನೆಗೆ ಕಾರಣವಾದ ಮುಖ್ಯಾಧಿಕಾರಿ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕಚೇರಿ ಅವರಣದಲ್ಲಿ. ಕಾಮಿ೯ಕರಿಗೆ ಮತ್ತು ಕೊಳಚೆ ನಿವಾಸಿಗಳಿಗೆ ಹಾಲು ವಿತರಿಸುವ ಸಂದಭ೯ದಲ್ಲಿ. ಅವರ ಸಮಕ್ಷಮದಲ್ಲಿಯೇ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗಿದೆ ಎಂಬ ದೂರು ಕೇಳಿಬಂದಿದೆ.

ನೂರಾರು ಪಲಾನುಭವಿಗಳು ಸರದಿ ಸಾಲಿನಲ್ಲಿದ್ದಾಗ ಪರಸ್ಪರ ಅಂತರ ಕಾಯ್ದುಕೊಂಡಿಲ್ಲ. ಮುಖ್ಯಾಧಿಕಾರಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದಿರುವುದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಕಚೇರಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಲಾಗಿದೆ.ಕನಾ೯ಟಕ ರೈತ ಸಂಘ (ಉ ಮಂ ಬಣ)ದ ಜಿಲ್ಲಾಧ್ಯಕ್ಷ ಕೆ.ಕೆ.ಹಟ್ಟಿ ಮಹೇಶ ಮಾತನಾಡಿ ಕೊರೋನಾ ವೈರಸ್ ಹರಡಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ನಿತ್ಯ ಬೊಬ್ಬೆಹೊಡೆಯುತ್ತಿದೆ. ಆದರೆ ಜವಾಬ್ದಾರಿಯುತ ಅಧಿಕಾರಿ ಉಲ್ಲಂಘನೆಗೆ ಕಾರಣವಾಗಿದ್ದಾರೆ.ಅಂಥಹ ಅಧಿಕಾರಿಗಳಿಗೇ ಕೆಲ ಜನಪ್ರತಿನಿಧಿಗಳು ಹಾಗು ಕೆಲ ರಾಜಕಾರಣಿಗಳು ಮಣೆಹಾಕುತ್ತಿರುವುದು ಖಂಡನೀಯ.ಇದನ್ನು ಸಂಘಟನೆ ವಿರೋಧಿಸುತ್ತದೆ. ಜಿಲ್ಲಾಧಿಕಾರಿಗಳು ತಹಶಿಲ್ದಾರರು ನಿಯಮ ಉಲ್ಲಂಘಿಸಿರುವ ಅಧಿಕಾರಿ ವಿರುದ್ಧ ಶಿಸ್ಥುಕ್ರಮ ಜರುಗಿಸಬೇಕೆಂದು ಎಂದು ಮಹೇಶ ಆಗ್ರಹಿಸಿದ್ದಾರೆ. ಡಾ ಬಿ.ಆರ್.ಅಂಬೇಡ್ಕರ ಯುವ ಸೇನೆ ಮುಖಂಡ ಸಂತೋಷ ಮಾತನಾಡಿ ಜನಸಾಮಾನ್ಯರು ನಿಯಮ ಮೀರಿದರೆ ಪೊಲೀಸರು ತಲೆ ಹೊಡೆಯೋ ಹಾಗೆ ಲಾಟಿ ಬೂಟಿನಿಂದ ಹಲ್ಲೆ ಮಾಡುತ್ತಾರೆ.ರೈತರನ್ನು ಬೀದಿಬದಿಯ ವ್ಯಾಪಾರಿಗಳನ್ನು ಪೊಲೀಸರು ಅಮಾನವೀಯವಾಗಿ ಥಳಿಸುತ್ತಾರೆ.ಪಪಂ ಮುಖ್ಯಾಧಿಕಾರಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗಲು ಪ್ರಮುಖ ಕಾರಣವಾಗಿದ್ದಾರೆ. ಅವರ ವಿರುದ್ಧ ಜಿಲ್ಲಾಧಿಕಾರಿಗಳು. ತಹಶಿಲ್ದಾರರು ಶಿಸ್ಥುಕ್ರಮ ಜರುಗಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

*ಪಪಂ ಆವರಣದಲ್ಲಿ ಘಟನೆ-*

ಕೊರೋನಾ ಅಟ್ಟಹಾಸದ ಪ್ರಭಾವಕ್ಕೆ ಒಳಗಾಗದಂತೆ ಆರೋಗ್ಯ ಸುಧಾರಿಸಲಿಕ್ಕಾಗಿ ಸಕಾ೯ರ. ಕೊಳಚೆ ನಿವಾಸಿಗಳಿಗೆ ಮತ್ತು ಕಟ್ಟಡ ಕಾಮಿ೯ಕರಿಗೆ ಉಚಿತ ಹಾಲು ವಿತರಿಸುವ ಯೋಜನೆ ಜಾರಿತಂದಿದೆ.ಅದನ್ನು ಸ್ಥಳೀಯ ಆಡಳಿತಾಧಿಕಾರಿಗಳು ನಿವ೯ಹಿಸಬೇಕಿದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತಮ್ಮ ಕಚೇರಿ ಆವರಣದಲ್ಲಿ ಅಹ೯ರಿಗೆ ಹಾಲು ವಿತರಿಸಿದರು.ಹಾಲು ಪಡೆಯಲು ಪಲಾನುಭವಿಗಳು ಪರಸ್ಪರ ತೀರ ಹತ್ತಿರದಲ್ಲಿ ಸರದಿ ಸಾಲುನಿಂತಿದ್ದರು.ಅವರು ಮುಗ್ದರು ಸಾಮನ್ಯ ಜ್ನಾನ ಇಲ್ಲದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಗಮನಕೊಡಲೇ ಇಲ್ಲ.ಹಾಲು ಪಡೆಯಲು ಪರಸ್ಪರ ಮುಗಿಬಿದ್ದಿದ್ದರು.ಈ ವೇಳೆ ಕೊರೋನಾ ಮಹಾಮಾರಿ ನಿಂತ್ರಣಕ್ಕೆ ತಾವು ಪಾಲಿಸಬೇಕಿದ್ದ ನಿಯಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.ಪ ಪಂ ಮುಖ್ಯಾಧಿಕಾರಿ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳದಿರುವುದು ಘಟನೆಗೆ ಕಾರಣ ಎನ್ನಲಾಗಿದೆ.

Be the first to comment

Leave a Reply

Your email address will not be published.


*