ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಯುಗಾದಿಯ ನಂತರದ ವಾರದೊಳಗಾಗಿ ಉಚ್ಚಂಗಿ ಶ್ರೀಎಲ್ಲಮ್ಮದೇವಿ ಜಾತ್ರೆ ಪ್ರತಿ ವರ್ಷ ನಡೆಯುತ್ತಿತ್ತು.ಆದರೆ ಕೊರೋನಾ ಎಮಜೆ೯ನ್ಸಿ ಕಾರಣದಿಂದಾಗಿ ಜಾತ್ರೆ ರದ್ಧಾಗಿದೆ.ಮಾತ್ರವಲ್ಲ ಶ್ರೀ ಎಲ್ಲಮ್ಮ ತಾಯಿ ದರುಶನ ಭಾಗ್ಯವೂ ಇಲ್ಲವಾಗಿದೆ.ಇದ್ಯಾವುದರ ಪರಿವಿಲ್ಲದ ಕೊಪ್ಪಳದಿಂದ ಜಾತ್ರೆಗೆಂದು ಸುಮಾರು 30ಕ್ಕಿಂತ ಹೆಚ್ಚು ಜನರು ಎಪ್ರೆಲ್3ರಂದು ಶುಕ್ರವಾರ ಉಚ್ಚಂಗಿ ದುಗ೯ಕ್ಕೆ ಬಂದಿದ್ದಾರೆ.
ಅವರು ಊಟ ವಸತಿ ಇಲ್ಲದೆ ಉಚ್ಚಂಗಿದುರ್ಗದಲ್ಲಿ ಬೀಡಾರ ಹೂಡಿದ್ದಾರೆ.ಸ್ಥಳೀಯರಿಂದ ಸಂದರಿಗೆ ಈ ಸುದ್ದಿ ತಿಳಿದಿದ್ದು. ಅವರು ಶನಿವಾರ ಬೆಳಗ್ಗೆ ಸ್ಥಳಕ್ಕೆ ಬಳ್ಳಾರಿ ಸಂಸದರಾದ ವೈ.ದೇವೇಂದ್ರಪ್ಪ ಬೇಟೆ ನೀಡಿದ್ದಾರೆ.ಅವರೊಂದಿಗೆ ಆಗಮಿಸಿದ್ದ ಕರೋನ ಜಾಗೃತಿ ಸಮಿತಿ ಹಾಗೂ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಭೀಮಾನಾಯಕರಿಗೆ ಭಕ್ತರಿಗೆ ತಾತ್ಕಾಲಿಕ ವಾತಿ ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಂಸದರು ಸೂಚಿಸಿದ್ದಾರೆ.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಉಚ್ಚoಗಿದುರ್ಗ ಗ್ರಾಮಸ್ಥರ ನೇತೃತ್ವದಲ್ಲಿ ಬಡ ವ್ಯಾಪಾರಿಗಳಿಗೆ ದಿನಬಳಕೆ ವಸ್ತುಗಳನ್ನು ಸಂಸದರು ನೀಡಿದರು.
ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ಉಚ್ಚಂಗಿದುರ್ಗದಲ್ಲಿ ತಂಗಿದ್ದ ಭಕ್ತರಲ್ಲರಿಗೆ ಅಗತ್ಯವಾದಷ್ಟು ಅಕ್ಕಿಯನ್ನು ನೀಡಿ ಮಾನವೀಯತೆ ಮೆರೆದರು.
*ವೀಡಿಯೋ ವೈರಲ್-* ಕೊಪ್ಪಳದಿಂದ ಬಂದ ಭಕ್ತರು ಉಚ್ಚಂಗಿ ಎಲ್ಲಮ್ಮಳ ಕ್ಷೇತ್ರದಲ್ಲಿ ತಂಗಿದ್ದ ವಿಡಿಯೋವನ್ನು ಉಚ್ಚಂಗಿದುರ್ಗದ ಆರೆಸ್ಸೆಸ್ ಕಾರ್ಯಕರ್ತ ಪರಶುರಾಮ್ ತಮ್ಮ ಮೊಬೈಲ್ ನಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳು ನಂತರ ಬೆಳೆಗ್ಗೆ ಸಂಸದರು ಬೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂದರು ಉಚ್ಚಂಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚ್ಚಂಗಿದುರ್ಗಕ್ಕೆ ಲಕ್ಷಾಂತರ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ 40 ಗ್ರಾಮಗಳಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮ ಸೌಲಭ್ಯವನ್ನು ಒದಗಿಸಬೇಕು ಹಾಗೂ ಸಂತಾನ ಹರಣ ಚಿಕಿತ್ಸೆಯನ್ನು ಪ್ರಾರಂಭ ಮಾಡಬೇಕು ಎಂದು ತಾಲೂಕು ವೈದ್ಯಾಧಿಕಾರಿ ಇನಾಯತ್ ರವರಿಗೆ ಸಂಸದರಾದ ವೈ.ದೇವೇಂದ್ರಪ್ಪ ಸೂಚಿಸಿದರು.
ಉಚ್ಚಂಗಿ ದುಗ೯ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶ್ವಿನಿ ಚಂದ್ರಪ್ಪ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್. ಸದಸ್ಯರಾದ ಕುಮಾರ್. ಸಿದ್ದಪ್ಪ,ಸಿದ್ದಲಿಂಗಪ್ಪ,ತಳವಾರ ಮಂಜಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Be the first to comment