ಜೀಲ್ಲಾ ಸುದ್ದಿಗಳು
ಸಿರುಗುಪ್ಪ:->ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾವಿಹಾಳ್ ಪಿ.ಹೆಚ್.ಸಿ.ಅಗಸನೂರು ಉಪಕೇಂದ್ರದ ಸಿಬ್ಬಂದಿಯವರು ತಮ್ಮ ವ್ಯಾಪ್ತಿಗೆ ಬರುವ ನಾಡಂಗ. ವೆಂಕಟಾಪುರ ಅಗಸನೂರು ಗ್ರಾಮಗಳಲ್ಲಿ ಉಪಆರೋಗ್ಯ ಕೇಂದ್ರದ ಸಿಬ್ಬಂದಿಯವರು ಆಶಾಕಾಯ೯ಕತೆ೯ಯರು ಹಾಗು ಅಂಗನವಾಡಿ ಸಿಬ್ಬಂದಿ ಸಹಯೋಗದೊಂದಿಗೆ ಮೂರು ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಪ್ರತಿಯೊಬ್ಬರಿಗೂ ಕೊರೋನಾ ರೋಗದ ಗಂಭೀರತೆ ಮತ್ತು ಸಕಾ೯ರ ಮತ್ತು ಆರೋಗ್ಯ ಇಲಾಖೆ ವಿಧಿಸಿರುವ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಿದರು.ಕೊರೋನಾ ಜಾಗೃತಿ ಕರಪತ್ರಗಳನ್ನು ನೀಡಿ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳನ್ನು ಗ್ರಾಮಸ್ಥರಿಗೆ ವಿವರಿಸಿದರು. ಪ್ರತಿಮನೆಗಳ ಮನೆಯ ಸದಸ್ಯರ ವಿವರ ಮತ್ತು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆಯುವುದು.ಕೊರೋನಾ ರೋಗದ ಸೂಚನೆಗಳನ್ನು ಹೊಂದಿರುವವರನ್ನು ಪತ್ತೆಹಚ್ಚುವ ಉದ್ದೇಶದಿಂದ ಪ್ರಾಮಾಣಿಕ ಯತ್ನವನ್ನು ಆರೋಗ್ಯ ಸಹಾಯಕರು ಮಾಡಿದ್ದಾರೆ.ಕಿರಿಯ ಆರೋಗ್ಯ ಸಹಾಕಿ ಉಷಾರವರು ಮಾತನಾಡಿ ಜನತೆ ತಮಗೆ ಸಹಕಾರ ನೀಡಿ ಅಗತ್ಯ ಮಾಹಿತಿಕೊಡಬೇಕಾಗಿದೆ. ಸಕಾ೯ರ ವಿಧಿಸಿರುವ “ಲಾಕ್ ಡೌನ್” ಮತ್ತು”144ಸೆಕ್ಷನ್” ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಕೊರೋನಾ ರೋಗದ ಸೂಚನೆ ಉಳ್ಳವರಿದ್ದರೆ.ಅಕ್ಕಪಕ್ಕ ಅಪರಿಚಿತರು ವಾಸಕ್ಕೆ ಬಂದಿದ್ದರೆ.ಗುಳೇಹೋಗಿ ಬಂದಿದ್ದರೆ.ಅವರ ಮಾಹಿತಿಯನ್ನು ತಮಗೆ ತಿಳಿಸಬೇಕಿದೆ.ಅಂದಾಗ ಮಾತ್ರ ಎಲ್ಲರೂ ಕೊರೋನಾ ಭಯ ದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಉಷಾ ಹೇಳಿದರು.ಸಹೋಧ್ಯೋಗಿ ಹಾಗು ಆರೋಗ್ಯ ಸಹಾಯಕಿ ಆಶಾ.ಅಂಗನವಾಡಿ ಸಿಬ್ಬಂದಿಯವರಾದ ಈರಮ್ಮ.ಗುರುಪಾದಮ್ಮ.ಭೀಮಕ್ಕ.ಆಶಾಕಾಯ೯ಕತೆ೯ಯರಾದ ಉರುಕುಂದಮ್ಮ.ಶಹರೆಬಾನು.ಬಸಮ್ಮ.ಶೋಭಾ.ಸುಮಂಗಳಮ್ಮ.ಮತ್ತಿತರರ ಸಹಯೋಗದೊಂದಿಗೆ ತಾವು ಕಾಯ೯ನಿವ೯ಹಿಸಿರುವುದಾಗಿ ಅವರು ತಿಳಿಸಿದರು.✍️
Be the first to comment