ಪಿಂಕ್ ‘ ಕಾರ್ಯಕರ್ತರ ಮೇಲೆ ‘ಗ್ರೀನ್’ ಜಿಹಾದಿಗಳ ಅಟ್ಯಾಕ್. ಪ್ರಕಾಶ ಮಂದಾರ ವಿಶೇಷ ಅಂಕಣ

ವರದಿ:ಪ್ರಕಾಶ ಮಂದಾರ

ಅಂಕಣ

 

ಹರಿಹರ:-ಕರೋನಾ ವೈರಸ್ ಇಡೀ ವಿಶ್ವಾದ್ಯಂತ ಗತಿಯಲ್ಲಿ ಹರಡುತ್ತಿದ್ದು, ವಿಶ್ವದ ನಾನಾ ದೇಶಗಳನ್ನು ಕಂಗೆಡುವಂತೆ ಮಾಡಿದೆ.

ಭಾರತದಲ್ಲೂ ಸಹ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ದೇಶದ ಜನರು ಕಂಗಾಲಾಗಿ ಹೋಗಿದ್ದಾರೆ .

ಕರೋನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕಾಗಿ ಜನರು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರುವ ‘ಪಿಂಕ್’ ಕಾರ್ಯಕರ್ತರ ಮೇಲೆ ‘ಗ್ರೀನ್ ‘ಜಿಹಾದಿಗಳು ಹಲ್ಲೆ ನಡೆಸಿರುವುದು ಎಷ್ಟರ ಮಟ್ಟಿಗೆ ಸರಿ.

ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಜನರ ಸೇವೆ ಮಾಡುತ್ತಿರುವವರಲ್ಲಿ ಆಶಾ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಲ್ಲುತ್ತಾರೆ .ಇವರಿಗೆ ಹೇಳಿಕೊಳ್ಳುವಂಥ ಅಂತಹ ಸುರಕ್ಷತಾ ಪರಿಕರಣಗಳು ಇರುವುದಿಲ್ಲ .ಆದರೂ ಸಹ ಇವರು ತಮ್ಮ ಜೀವದ ಭಯವನ್ನೂ ದೂರವಿಟ್ಟು ತಮ್ಮ ವ್ಯಾಪ್ತಿಯ ಏರಿಯಾ, ವಾರ್ಡ್ ,ಗ್ರಾಮಗಳ ಮನೆ,ಮನೆಗೆ ತೆರಳಿ ಕರೋನಾ ಜಾಗೃತಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ .ಇಂತಹ ಮಹಾನ್ ಉದ್ದೇಶದ ಕಾರ್ಯವನ್ನು ಮಾಡುತ್ತಿರುವ ಅವರ ಮೇಲೆ ಕೆಲವು ಮತಾಂಧ ಮಂದಮತಿಗಳು .ಹಲ್ಲೆಗೆ ಮುಂದಾಗಿರುವುದು ಅತ್ಯಂತ ವಿಷಾದನೀಯ ಸಂಗತಿ .

ಟಿಂಗ್ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸುತ್ತಿರುವ ಸೇವೆ ಮಾಡುತ್ತಿರುವುದು ನಮ್ಮಗಳ ರಕ್ಷಣೆಗಾಗಿ ಎಂಬ ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು ಅವರಿಗೂ ಬದುಕಬೇಕೆಂಬ ಆಸೆ ಇರುತ್ತದೆ ಆದರೆ ಕರ್ತವ್ಯ ನಿಷ್ಠೆ ಮೆರೆಯಬೇಕು ಅಲ್ಲವೇ ?ಅವರಿಗೂ ಮನೆ ,ಮಠ ,ಕುಟುಂಬ, ಮಕ್ಕಳು ಇದ್ದಾರೆ ಎಂಬ ಅರಿವು ನಮ್ಮಲ್ಲಿ ಇರಬೇಕು. ಅವರು ಯಾರಿಗಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆ .

ಇಂತಹ ಕಿಡಿಗೇಡಿಗಳನ್ನು ಮಟ್ಟ ಹಾಕಲು ರಾಜಕೀಯ ನಾಯಕರು ಪಕ್ಷ ಭೇದವನ್ನು ಮರೆತು ಕಾನೂನಿನಲ್ಲಿ ತಿದ್ದುಪಡಿ ತರಬೇಕು .ಇಂದು ಅವರ ಮೇಲೆ ಹಲ್ಲೆ ಆಗಿದೆ ನಾಳೆ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಎಂಬ ಅರಿವು ಇರಬೇಕು .

ಈ ಜಿಹಾದಿಗಳ ಮೂಲ ಉದ್ದೇಶ ಕಾರಣ ವೈರಸ್ಸನ್ನು ಸಮಸ್ತ ಭಾರತೀಯ ಪ್ರಜೆಗಳಲ್ಲಿ ಹರಡಬೇಕು ಎಂಬ ಉದ್ದೇಶ ಇಟ್ಟುಕೊಂಡಂತೆ ಕಾಣುತ್ತಿದೆ .ಯಾವುದೇ ಬಾಂಬ್ ದಾಳಿ ಇಲ್ಲದೆ ಅತಿ ಸುಲಭವಾಗಿ ದೇಶದ ಜನರ ಪ್ರಾಣವನ್ನು ಈ ಕರೋನಾ ವೈರಸ್ ನಿಂದ ತೆಗೆಯಬಹುದು ಎಂಬ ಮನೋಭಾವ ಹೊಂದಿದಂತೆ ಕಾಣುತ್ತಿದೆ .

ಆಳುವ ಸರ್ಕಾರಗಳಿಗೆ ಇದರ ಬಗ್ಗೆ ಅರಿವಿದೆ ಆದಷ್ಟು ಬೇಗ ಇದರಿಂದ ಎಚ್ಚೆತ್ತುಕೊಂಡು ಬಂಧಿತ ಆರೋಪಿಗಳನ್ನು ವಿಳಂಬ ಮಾಡದೆ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶೀಘ್ರವಾಗಿ ಉಗ್ರವಾದ ಶಿಕ್ಷೆಯನ್ನು ವಿಧಿಸಿದಾಗ ಮಾತ್ರ ಇಂತಹ ಜಿಹಾದಿಗಳನ್ನು ಹುಟ್ಟಡಗಿಸಲು ಸಾಧ್ಯವಾಗುತ್ತದೆ .

ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರು, ಸೈನಿಕರು, ಆರೋಗ್ಯ ಸಹಾಯಕಿಯರು ,ಆಶಾ ಕಾರ್ಯಕರ್ತೆಯರು,ಪೌರ ಕಾರ್ಮಿಕರು, ಮಾಧ್ಯಮ ಮಿತ್ರರು ನಮಗೆ ದೇವರಾಗಿದ್ದಾರೆ .

ಗುಡಿಯಲ್ಲಿ ಇರುವ ದೇವರಿಗೆ ಕೈ ಮುಗಿಯುವುದಲ್ಲ ,ನಮ್ಮಗಳ ಸೇವೆ ಮಾಡುತ್ತಿರುವ ಇವರಿಗೆ ಕೈಮುಗಿಯಬೇಕು. ಇವರ ರಕ್ಷಣೆಯ ಜವಾಬ್ದಾರಿ ಭಾರತದ ಪ್ರತಿ ನಾಗರಿಕನ ಕರ್ತವ್ಯವಾಗಿದೆ .

ಏನೇ ಹೇಳಿ ನಮ್ಮಗಳ ಸೇವೆ ಮಾಡುತ್ತಿರುವ ಸೇವಕರನ್ನು ಹಲ್ಲೆ ಮಾಡುವುದು ಅತ್ಯಂತ ಖಂಡನೀಯ ವಾದ ವಿಷಯವಾಗಿದೆ .ನಾನು ಒಬ್ಬ ಮಾಧ್ಯಮ ಬರಹಗಾರನಾಗಿ ಇದನ್ನು ತೀವ್ರವಾಗಿ ಖಂಡಿಸುತ್ತೇನೆ .ಸದ್ಯದ ನಮ್ಮ ಹೋರಾಟ, ಹಾರಾಟ ,ಕಿರುಚಾಟಗಳು, ಕರೋನಾ ವೈರಸ್ ಒದ್ದೋಡಿಸುವ ಕಡೆ ಇರಲಿ ಎಂಬುದು ನಮ್ಮ ಕಳಕಳಿಯಾಗಿದೆ .

ಪ್ರಕಾಶ ಮಂದಾರ
ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಬರಹಗಾರರು , ಮಾಧ್ಯಮ ಸಲಹೆಗಾರರು. ದಾವಣಗೆರೆ ,ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ,
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ)
8880499904

Be the first to comment

Leave a Reply

Your email address will not be published.


*