ಕಲಬುರಗಿ: ಕೂಲಿ ಅರಸಿ ಹಲವು ದಶಕಗಳಿಂದಲೂ ಬೆಂಗಳೂರು ನಗರದ ಹೊರ ರಾಜ್ಯಗಳಿಗೆ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದವರು ಇಂದು ಕೊರಾನಾ ಕಾರಣದಿಂದ ಲಾಕ್ ಡೌನ್ ಪರಣಾಮ ಕಾರ್ಮಿಕರು ಅತಂತ್ರರಾಗಿದ್ದಾರೆ. ಕೆಲಸವಿಲ್ಲದೆ, ನೆಲೆ ಇಲ್ಲದೆ ಎಲ್ಲಿರಬೇಕೆಂಬ ಆತಂಕದಿಂದ ಬೆಂಗಳೂರನ್ನು ತೊರೆಯುತ್ತಿದ್ದಾರೆ. ಇವರಿಗೆ ಕೆಲಸವಿಲ್ಲದೆ ಊಟವಿಲ್ಲ.ಒಂದು ಕಡೆ ವಾಸಿಸಲು ನೆಲೆಯಿಲ್ಲ,ಹೊಟ್ಟೆಗೂ ಇಲ್ಲ ಎಂದ ಮೇಲೆ ಉಪವಾಸವೇ ಗತಿ. ಇನ್ನೊಂದು ಕಡೆ ಕರೋನಾ ಭೀತಿ. ಏನಾದರೂ ನಮಗೆ ರೋಗ ಅಂಟಿಕೊಂಡರೆ? ಕೊನೆ ಪಕ್ಷ ಊರಿನಲ್ಲಿ ಇವರ ದುಡಿಮೆಯನ್ನೇ ಅವಲಂಭಿಸಿಕೊಂಡಿರುವ ವೃದ್ದ ಅಪ್ಪ ಅಮ್ಮಂದಿರು, ಹೆಂಡತಿ ಮಕ್ಕಳನ್ನಾದರೂ ನೋಡಬಹುದಲ್ಲ ಎಂದು ಯೋಚಿಸುತ್ತಾ ಊರ ಕಡೆ ಮುಖ ಮಾಡಿದ್ದಾರೆ. ಬಸ್ಸು, ಜೀಪು ಇಲ್ಲದ ಕಾರಣ ತಮ್ಮತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದಾರೆ.
ಈ ಕಾರ್ಮಿಕರಿಗೆ ಈಗಿರುವ ಬಡ ಜನರಿಗೆ ಲಾಕ್ ಡೌನ್ ವಿಷಯ ತಿಳಿದದ್ದೇ ತಡವಾಗಿ. ಸರ್ಕಾರ ಮೊದಲೇ ಎಚ್ಚರಿಕೆಯನ್ನು ನೀಡಿ ಊರುಗಳಿಗೆ ಹೋಗಲು ಅವಕಾಶ ನೀಡಿದ್ದರೆ ಯಾವುದೇ ಆತಂಕವಿಲ್ಲದೆ ಬಂಧುಬಳಗ ಸೇರಿಕೊಳ್ಳುತ್ತಿದ್ದರು. ಆದರೆ ಸಮಯಾವಕಾಶ ನೀಡದೇ ದೀಡರನೇ ತೀರ್ಮಾನ ಮಾಡುವಾಗ ಇಂಥಹ ಕಾರ್ಮಿಕರ ಬಗ್ಗೆಯೂ ಸರ್ಕಾರ ಯೋಚಿಸಬೇಕಿತ್ತು.
ಚುನಾವಣೆ ಸಂದರ್ಭದಲ್ಲಿ ಪಂಚಾಯ್ತಿ ,ಸದಸ್ಯರಿಂದ ಹಿಡಿದು ಎಮ್.ಎಲ್.ಎ ತನಕ ಕಾರ್ಮಿಕರಿದ್ದ ಜಾಗಗಳಿಗೇ ವಾಹದ ವ್ಯವಸ್ಥೆಯನ್ನು ಮಾಡಿ ಕಾರ್ಮಿಕರನ್ನು ಕರೆದೊಯ್ದು ಓಟನ್ನು ಹಾಕಿಸಿಕೊಳ್ಳುತ್ತಿದ್ದರು.
ಅದರೆ ಈಗ ತಮ್ಮ ಜೀವ ಉಳಿಸಿಕೊಳ್ಳಲು ನಡೆದುಕೊಂಡೇ ತಮ್ಮ ಊರುಗಳಿಗೆ ಹೋಗುತ್ತಿರುವ ಕಾರ್ಮಿಕರ ಬಗ್ಗೆ ಯಾವುದೇ ಚುನಾಯಿತ ಪ್ರತಿನಿಧಿಗಳಾಗಲೀ, ರಾಜಕೀಯ ಪಕ್ಷವಾಗಲಿ ಸಹಾಯ ಮಾಡಲು ಮುಂದಾಗುತ್ತಿಲ್ಲ.
ಊಟ, ನೀರು ಸಿಗದೆ ಬಿಸಿಲನ್ನು ಲೆಕ್ಕಿಸದೆ ನಡೆದೇ ಹೋಗುತ್ತಿರುವ ಈ ಕಾಯಕ ಜೀವಿಗಳು ತಮ್ಮ ತಮ್ಮ ಊರುಗಳನ್ನು ತಲುಪಲು ಈ ಕೂಡಲೇ ಸರ್ಕಾರ ವಾಹದ ವ್ಯವಸ್ಥೆ ಮಾಡಲಿ.
Be the first to comment