ಚಿಕ್ಕಜೋಗಿಹಳ್ಳಿ:ಪಿಡಿಓ ಕಾಯ೯ದಶಿ೯ಗಳು ಹೊಣೆಗೇಡಿಗಳು-ಮಾಜಿ ಶಾಸಕ ರವೀಂದ್ರನಾಥ ಬಾಬು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕುಡಿಯೋ ನೀರಿಗಾಗಿ ಜನ ಪರಿತಪಿಸುವಂತಾಗಿದೆ.ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಹಾಗು ಕಾಯ೯ದಶಿ೯ ನಾರಾಯಣಪ್ಪರ ನಿಲ೯ಕ್ಷ್ಯತೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಸಂಬಂಧವಾಗಿ ಮಾಜಿ ಶಾಸಕ ರವೀಂದ್ರನಾಥ ಬಾಬು ದೂರವಾಣಿಯಲ್ಲಿ ಮಾತನಾಡಿ ಕಾಯ೯ದಶಿ೯ ಹಾಗು ಅಭಿವೃದ್ಧಿ ಅಧಿಕಾರಿ ತಮ್ಮ ಕಾಯ೯ವನ್ನು ಸಮಪ೯ಕವಾಗಿ ನಿವ೯ಣೆ ಮಾಡುವಲ್ಲಿ ವಿಫಲವಾಗಿದ್ದಾರೆ.ಅವರು ಬೇಜವಾಬ್ದಾರಿಗಳಾಗಿದ್ದು ಹೊಣೆಗೇಡಿಗಳಾಗಿದ್ದಾರೆ.ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಸಮಪ೯ಕವಾಗಿ ವಿದ್ಯುತ್ ದೀಪವ್ಯವಸ್ಥೆ ಇಲ್ಲ.ಗಲ್ಲಿಗಳಲ್ಲಿ ಸ್ವಚ್ಚತೆ ಇಲ್ಲ.ಕಾಲುವೆಗಳು ತುಂಬಿವೆ.ಕಸಹಿಲೇವಾರಿ ಮಾಡಿಲ್ಲ.ಬೋರ್ವೆಲ್ಲ ಕೊರೆಸಿ 15ದಿನಗಳಾದರೂ ಇದುವರೆಗೆ ಜನರಿಗೆ ನೀರು ಒದಗಿಸಿಲ್ಲ. ಗ್ರಾಪಂ ಅಧಿಕಾರಿಗಳು ಜನರಿಗೆ ಸ್ಪಂಧಿಸದಿದ್ದಲ್ಲಿ ಅವರನ್ನು ಬದಲಿಸುವಂತೆ ಇಲಾಖಾ ಉನ್ನತಾಧಿಕಾರಿಗಳಿಗೆ ಸೂಚಿಸುವುದಾಗಿ ಅವರು ತಿಳಿಸಿದರು.ಚೌಡೇಶ್ವರಿ ದೇವಸ್ಥಾನದ ಗಲ್ಲಿ.ಮಸೀದಿ ಗಲ್ಲಿಗಳಲ್ಲಿ ಜನರು ನೀರಿಗಾಗಿ ಪರಸ್ಪರ ಜಗಳಕಾಯೋ ದುಸ್ಥಿತಿ ನಿಮಾ೯ಣವಾಗಿದೆ ಎಂದು ಡಾ”ವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

*ದೇವರು ವರಕೊಟ್ಟರೂ ಪೂಜಾರಿ ವರಕೊಡ-* ಬೊರ್ವೆಲ್ ಕೊರೆಸಿದ್ದು ಸಾಕಷ್ಟು ನೀರು ದೊರಕುತ್ತಿದೆ.ಆದರೆ ಅದನ್ನು ಸಾವ೯ಜನಿಕರಿಗೆ ವ್ಯವಸ್ಥಿತವಾಗಿ ಪೂರೈಸುವ ಕಾಯ೯ ಗ್ರಾಪಂ ಅಧಿಕಾರಿಗಳು ಸಿಬ್ಬಂದಿ ಮಾಡುತ್ತಿಲ್ಲ. ವಿನಾಕಾರಣ ವಿಳಂಬಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ದೇವರು ಬೋರ್ವೆಲ್ ಮೂಲಕ ನೀರು ಕೊಟ್ಟಿದ್ದಾನೆ. ಆದರೆ ನೀರನ್ನು ಅಗತ್ಯವಿರುವ ಕಡೆಗಳಲ್ಲಿ ವ್ಯವಸ್ಥಿತವಾಗಿ ಒದಗಿಸಿಕೊಡಬೇಕಾಗಿರುವ ಪೂಜಾರಿಗಳು ಅಂದರೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸಾಮಾನ್ಯ ಜನರ ಕೂಗು ಅವರಿಗೆ ಕೇಳುತ್ತಿಲ್ಲ ಎಂದು ಗ್ರಾಮಸ್ಥರಾದ ಜೆಬಿನಾಬೀ.ಶಾಬಾನಾ.ಮಾರಣ್ಣ.ದಿಲ್ಶಾದ್.ಸಿದ್ದಪ್ಪ.ಲಕ್ಷ್ಮಿಮ್ಮ.ಮೈಮುನ್ನಾಬೀ.ಖಾಜಾಸಾಬ್.ಹಸೇನ್ ಸಾಬ್. ಹನುಮಕ್ಕ.ಸುಮಂಗಳ.ಜೆಬಿಲಮ್ಮ.ಮಂಜಮ್ಮ.ಮುನಿಯಮ್ಮ.ಮಾಂತಮ್ಮ.ಮಲ್ಲಜ್ಜಿ.ಚೌಡಕ್ಕ.ಮುಂತಾದವರು ದೂರಿದ್ದಾರೆ.ಶನಿವಾರದಂದು ಗ್ರಾಪಂ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟಗೆ ತೆಗೆದುಕೊಂಡಿದ್ದರೆಂದು ತಿಳಿದುಬಂದಿದೆ.

*ಉನ್ನತಾಧಿಕಾರಿಗಳಿಗೆ ದೂರು-* ಕುಡಿಯೋ ನೀರು ಒದಗಿಸುವಂತೆ ಹಲವು ತಿಂಗಳುಗಳಿಂದ ಹೋರಾಟ ನಡೆಸಿದರೂ ಸ್ಥಳೀಯ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ.ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದು.ಸಂಬಂಧಿಸಿದ ತಾಲೂಕು ಇಲಾಖಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ತಮ್ಮ ವಿರುದ್ಧ ಅವರಲ್ಲಿ ದೂರಲಾಗಿದೆ. ಸಾವ೯ಕನಿಕರ ಹಿತಕ್ಕಾಗಿ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನೀರು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆಯ ವಿಧಾನಸೌಧದಲ್ಲಿರುವ ಉನ್ನತಾಧಿಕಾರಿಗಳಲ್ಲಿ ಎಲ್ಲಾ ಮಾಹಿತಿಯೊಂದಿಗೆ ದೂರು ನೀಡಲಾಗುವುದು.ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ಕೆಲ ಭಾರೀ ಹಗರಣಗಳು ಜರುಗಿರುವುದಾಗಿ ಗುಮಾನಿ ಇದೆ.ಈ ಕುರಿತು ಸೂಕ್ತ ಮಾಹಿತಿಗಳೊಂದಿಗೆ ಲಿಖಿತ ದೂರು ನೀಡಲಾಗುವುದು ಮತ್ತು ನ್ಯಾಯಕ್ಕಾಗಿ ಹೋರಾಟಗಳನ್ನು ಹಮ್ಮಿಕೊಳ್ಳಾಲಾಗುವುದು.ಹೋರಾಟಗಳಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ವಿಷ್ಣು ಸೇನಾ ಸಮಿತಿ ಉಪಾಧ್ಯಕ್ಷ ಸಾಧಿಕ್ ನುಡಿದ್ದಾರೆ.

Be the first to comment

Leave a Reply

Your email address will not be published.


*