ಜೀಲ್ಲಾ ಸುದ್ದಿಗಳು
ಹರಿಹರ:-ಇಡೀ ದೇಶವೇ ಲಾಕ್ ಡೌನ್ನಿಂದ ತತ್ತರಿಸಿದ್ದು ,ಹರಿಹರ ನಗರವು ಇದರಿಂದ ಹೊರತಾಗಿಲ್.ಲ ಹರಿಹರ ನಗರದ ಸ್ವಚ್ಛತೆಯ ಹಾಗೂ ಕರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಕಳೆದ ಐದು ದಿನಗಳಿಂದ ನಗರದ ಪೌರ ಕಾರ್ಮಿಕರು ದಿನದ ಇಪ್ಪತ್ತನಾಲ್ಕು ಗಂಟೆ ತಮ್ಮ ಮನೆ ‘ಮಠವನ್ನು ಬಿಟ್ಟು ನಗರದ ಶುಚಿತ್ವದ ಕಡೆ ಹೆಚ್ಚು ಗಮನವನ್ನು ನೀಡಿ ನಗರವನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರಿಗೆ ಇಂದು ಹರಿಹರದ ಶಾಸಕ ಎಸ್ ರಾಮಪ್ಪನವರು ಊಟದ ವ್ಯವಸ್ಥೆಯನ್ನು ಮಾಡಿ ತಾವೇ ಸ್ವತಃ ಅವರಿಗೇ ಉಣಬಡಿಸುವ ಮೂಲಕ ಅವರಿಗೆ ನೈತಿಕ ಧೈರ್ಯವನ್ನು ತುಂಬಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅವರಿಗೆ ಧೈರ್ಯ ತುಂಬಿದರು.
ಶಾಸಕರ ಈ ಔದಾರ್ಯವನ್ನು ನೋಡಿ ನಗರದ ಜನತೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಸದಾ ಬಡವರ ,ಮಧ್ಯಮ ವರ್ಗದವರ , ಕೂಲಿ ಕಾರ್ಮಿಕರ ‘ಶ್ರಮಿಕರ ಪರವಾಗಿ ಧ್ವನಿ ಎತ್ತಿ ಅವರೊಂದಿಗೆ ಬೆರೆತು ಸಹಬಾಳ್ವೆಯೊಂದಿಗೆ ಧೈರ್ಯ ತುಂಬುವ ಇಂಥ ಶಾಸಕರು ನಡೆ ಇತರ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗಿದೆ.
ಮಾನವೀಯ ಮೌಲ್ಯಗಳೊಂದಿಗೆ ಅಂತಃಕರಣದ ಗುಣಗಳನ್ನು ಹೊಂದಿರುವ ಹರಿಹರದ ಶಾಸಕರ ಈ ಮಾನವೀಯ ಮೌಲ್ಯಗಳ ದೃಷ್ಟಿಕೋನದಲ್ಲಿ ಮೇಲ್ಪಂಕ್ತಿಯಲ್ಲಿ ಅವರನ್ನು ಕಾಣಬಹುದು.
Be the first to comment