ನಗರದ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ತೆಗೆದುಕೊಂಡಿದ್ದೇವೆ. ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆಬಿ ಹೇಳಿಕೆ

ವರದಿ: ಪ್ರಕಾಶ ಮಂದಾರ

ಹರಿಹರ:-ಹರಿಹರದ ನಗರದ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾಗದಂತೆ ತಾಲ್ಲೂಕು ಆಡಳಿತ ಹಾಗೂ ನಗರಸಭೆಯು ಮುಂಜಾಗೃತವಾಗಿ ಎಲ್ಲಾ ಕ್ರಮವನ್ನು ತೆಗೆದುಕೊಂಡಿದ್ದೇವೆ.ಪ್ರತಿ ವಾರ್ಡಿನಲ್ಲೂ ಜನರಿಗೆ ಅಗತ್ಯವಾಗಿ ಬೇಕಾದ ಹಾಲು, ಹಣ್ಣು, ತರಕಾರಿ, ದಿನಸಿ ಸಾಮಗ್ರಿಗಳನ್ನು ,ಕೆಲವು ಸಂಘ ಸಂಸ್ಥೆಗಳ ಮೂಲಕ ಪ್ರತಿ ಮನೆ ಮನೆ ಬಾಗಿಲಿಗೂ ಪೂರೈಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಇಂದು ಹರಿಹರ ನಗರಸಭೆಯ ಸಭಾಂಗಣದಲ್ಲಿ ನಡೆದ ಕರೋನಾ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಗರದ ಪ್ರತಿ ವಾರ್ಡನ್ ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ವಾರ್ಡಿನ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ತಮ್ಮ ವಾರ್ಡಿಗೆ ತಾಲ್ಲೂಕು ಆಡಳಿತ ಹಾಗೂ ನಗರಸಭೆಯಿಂದ ಸಿಗುವ ಎಲ್ಲ ಸೌಲಭ್ಯವನ್ನು ತಮ್ಮ ವಾರ್ಡಿನ ಜನರಿಗೆ ತಲುಪಿಸುವ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ .ಹಾಗೂ ನಗರಸಭೆ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಲಹೆ, ಸೂಚನೆಗಳನ್ನು ನೀಡಿ ಎಂದು ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರು .

ನಂತರ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರ ಮೋಹನ್ ತಾಲ್ಲೂಕಿನ ಜನತೆ ಶುಚಿತ್ವದ ಕಡೆ ಹೆಚ್ಚಿನ ಗಮನ ನೀಡಿ ಕರೋನಾ ವೈರಸ್ ತಡೆಗಟ್ಟುವಲ್ಲಿ ತಾಲೂಕು ಆಡಳಿತದೊಂದಿಗೆ ಕೈ ಜೋಡಿಸಬೇಕಾಗಿದೆ .ಸಾಮಾಜಿಕ ಅಂತರದಲ್ಲಿ ಇದ್ದು ಜನರು ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಿ ಮಾಸ್ಕ್ ಹಾಕಿದ ಕೂಡಲೇ ಕರೋನಾ ವೈರಸ್ ಬರೋದಿಲ್ಲ ಎಂಬ ಭಾವನೆಯಿಂದ ಜನರೊಂದಿಗೆ ಸಂಪರ್ಕದಲ್ಲಿ ಇರೋದು ಒಳ್ಳೆಯ ಬೆಳವಣಿಗೆಯಲ್ಲ ,ಸಾಧ್ಯವಾದಷ್ಟು ಜನರ, ಜನರ ನಡುವೆ ಅಂತರವಿರಲಿ .ತಾಲ್ಲೂಕಿನಲ್ಲಿ ಕರೋನಾ ವೈರಸ್ ಶಂಕಿತರ ಮಾಹಿತಿಯನ್ನು ಪಡೆದಿದ್ದು ಅವರ ಮನೆಯ ಮುಂದೆ ಈಗಾಗಲೇ ನಾಮಫಲಕವನ್ನು ಇಲಾಖೆಯಿಂದ ಹಾಕಲಾಗಿದೆ .ವಿದೇಶದಿಂದ ನಗರಕ್ಕೆ ಆಗಮಿಸಿದವರನ್ನು ಗುರುತಿಸಿ ಅವರಿಗೆ ಹದಿನಾಲ್ಕು ದಿನಗಳ ಗೃಹಬಂಧನದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ .ಅವರ ಕೈಗೆ ಈಗಾಗಲೆ ಶಾಯಿಯಲ್ಲಿ ಶಿಲ್ ಹಾಕಿದ್ದು ಅವರು ತಮ್ಮ ವಾರ್ಡಿನಲ್ಲಿ ಹೊರಗಡೆ ಓಡಾಡುವುದನ್ನು ಕಂಡು ಬಂದರೆ ನೇರವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿ ತಿಳಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಚುನಾಯಿತಿ ಪ್ರತಿನಿಧಿಗಳಿಗೆ ಕರೆ ನೀಡಿದರು.

ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಪ್ರಸಾದ್ ಮಾತನಾಡಿ ಎಲ್ಲ ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ವಾರ್ಡಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪೋಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿಯನ್ನು ಪಡೆದು ಕರೋನಾ ವೈರಸ್‌ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು .ನಗರದ ಪೊಲೀಸ್ ಇಲಾಖೆಯು ಎಲ್ಲ ರೀತಿಯಲ್ಲೂ ಸರ್ವ ಸನ್ನದ್ಧವಾಗಿದ್ದು ಅನಗತ್ಯವಾಗಿ ತಿರುಗಾಡುವುದನ್ನು ಕಂಡು ಬಂದರೆ ನಮ್ಮ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು .

ಈ ಸಂದರ್ಭದಲ್ಲಿ ನಗರಸಭಾ ಆಯುಕ್ತೆ ಎಸ್ ಲಕ್ಷ್ಮಿ ,ನಗರ ಪೊಲೀಸ್ ಇಲಾಖೆ ಅಧಿಕಾರಿ ಶ್ವೇತಾ ,ಹಾಗೂ ನಗರದ ಎಲ್ಲ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದು ತಮ್ಮ ವಾರ್ಡಿನ ಸಮಸ್ಯೆಗಳತ್ತ ಗಮನ ಹರಿಸುವಂತೆ ಸಲಹೆಗ, ಸೂಚನೆಗಳನ್ನು ನೀಡಿ ಅಧಿಕಾರಿಗಳ ಗಮನ ಸೆಳೆದರು.

Be the first to comment

Leave a Reply

Your email address will not be published.


*