ಮಹಾರಾಷ್ಟ್ರ ಮುಂಬೈನಿಂದ ಮರಳಿ ಗ್ರಾಮಕ್ಕೆ ಬರಲಾಗದೆ ಪರದಾಡುತ್ತಿರುವ ಜಿಲ್ಲೆಯ ಕೂಲಿ ಕಾರ್ಮಿಕರು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಮಹಾರಾಷ್ಟ್ರಕ್ಕೆ ದಿನಗೂಲಿ ಕೆಲಸಕ್ಕೆಂದು ತೆರಳಿದ್ದ 180 ಜನ ಕೂಲಿ ಕಾರ್ಮಿಕರು ಮರಳಿ ತಮ್ಮ ಗ್ರಾಮಕ್ಕೆ ಬರಲಾಗದೆ ಪರದಾಡುತ್ತಿರುವ ಕಾರ್ಮಿಕರು

ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ರತ್ನಗಿರಿ ಸೇರಿದಂತೆ ಹಲವು ಭಾಗಗಳಲ್ಲಿ ಸಿಲಿಕಿಕೊಂಡಿದ್ದು ವಾಪಸ್ಸು ಗ್ರಾಮಕ್ಕೆ ಮರಳಲಾಗದೆ ಕೈಯಲ್ಲಿ ಕೆಲಸಾನೂ ಇಲ್ಲದೆ ಒಂದು ತುತ್ತಿನ ಊಟಕ್ಕೂ ಗತಿ ಇಲ್ಲದೆ ಪರದಾಡುತ್ತಿದ್ದಾರೆ .

ವೀಡಿಯೋವೊಂದನ್ನು ಮಾಡಿ ಹರಿಬಿಡುವ ಮೂಲಕ ಸುರಪುರ ಶಾಸಕ ನರಸಿಂಹನಾಯಕ ರಾಜುಗೌಡರಿಗೆ ಮನವಿ ಮಾಡಿಕೊಂಡಿದ್ದು ತಮ್ಮನ್ನು ಮರಳಿ ಗ್ರಾಮಕ್ಕೆ ಕರಸಿಕೊಳ್ಳುವ ಕುರಿತು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ಅಲ್ಲಿ ಮಕ್ಕಳು ವಯಸ್ಸಾದವರು, ಗರ್ಭಿಣಿ ಮಹಿಳೆಯರು ಕೂಡಾ ಅಲ್ಲಿದ್ದಾರೆ ಅವರಿಗೆ ಊಟ, ವಸತಿ ಆರೋಗ್ಯದ ವ್ಯವಸ್ಥೆ ಮಾಡಲು ಕೂಡಾ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋರಗಡೆ ಹೋದರೆ ಪೋಲಿಸ್ ರು ನಮ್ಮನ್ನು ಹೊಡೆಯುತ್ತಿದ್ದಾರೆ ಇಲ್ಲಿ ಎಷ್ಟು ಗೋಗರೆದರೂ ಯಾರೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ಎಲ್ಲಾ ಜನತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುರಪುರ ಶಾಸಕ ನರಸಿಂಹನಾಯಕ ರಾಜುಗೌಡ ಕಾರ್ಮಿಕರು ಸಿಲಿಕಿಕೊಂಡಿರುವ ಪ್ರದೇಶ ಗುರುತಿಸಿ ಅವರಿಗೆ ಅಲ್ಲಿನ ಸರಕಾರದ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆ.

ಸಮಸ್ಯೆಗಳನ್ನು ಎದುರಿಸುತ್ತಿರುವ ನೀವಿರುವ ಸ್ಥಳ ವಿಳಾಸ ಮತ್ತು ತಮ್ಮ ದೂರವಾಣಿ ಸಂಖ್ಯೆ ಯನ್ನು ತಿಳಿಸುವಂತೆ ಮನವಿ ಮಾಡಿದ್ದಾರೆ

ಸಧ್ಯ ದೇಶದ ಪರೀಸ್ಥಿತಿ ಅಧೋಗತಿಯಲ್ಲಿರುವುದರಿಂದ ಲಾಕ್ ಡೌನ ಪ್ರಕ್ರಿಯೆ ಮುಗಿದ ನಂತರ ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ನಮ್ಮ ತಾಲೂಕಿನ ಎಲ್ಲಾ ಜನರನ್ನು ಮರಳಿ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು

Be the first to comment

Leave a Reply

Your email address will not be published.


*