ಕೊರೋನಾ 3ನೇ ಹಂತಕ್ಕೆ ಭೀತಿಯಿಂದ ಪೆಟ್ರೋಲ್ ಬಂಕ ಬಂದ್ : ಡಿ ಸಿ ಶರತ್ ಬಿ

ವರದಿ: ರಾಜೇಂದ್ರ ಕಲಬುರಗಿ

ಜೀಲ್ಲಾ ಸುದ್ದಿಗಳು


ಕಲಬುರಗಿ : ಕಲಬುರಗಿಜಿಲ್ಲೆಯಲ್ಲಿ ಕೊರೋನಾ ವೈರಸ್‌ಗೆ ವಯೋವೃದ್ದ ಮೃತಪಟ್ಟಿದ್ದು ಇದರಿಂದ 3 ನೇ ಹಂತಕ್ಕೆ ಹೋಗಬಾರದು ಎಂದು ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಪೆಟ್ರೋಲ್ ಬಂಕ್ ನಾಳೆಯಿಂದ ಬಂದ್ ಮಾಡಲು ಸೂಚಿಸಿದ್ದಾರೆ.

ಮುಂಜಾಗುತ ಕ್ರಮವಾಗಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಬಂಕ ಬಂದಮಾವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಾಯ್ದೆ 1973 ರ ಕಲಂ 133 ರನ್ವಯ ಅಧಿಕಾರ ಚಲಾಯಿಸುವ ಮೂಲಕ ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್ ಮುಚ್ಚುವಂತೆ ಷರತ್ತು ಬದ್ದ ಆದೇಶ ಹೊರಡಿಸಿದ್ದಾರೆ.

ಆದರೆ ಈ ಆದೇಶವು ಸರಕಾರಿ ವಾಹನಗಳಿಗೆ,ವೈದ್ಯರಿಗೆ,ವೈದ್ಯಕೀಯ ಸಿಬ್ಬಂದಿಗಳಿಗೆ ಎಲ್ಲಾ ತರಹದ ಅಂಬುಲೆ‌ನ್ಸಗಳಿಗೆ, ಜೌಷಧ ವ್ಯಾಪರಿಗಳಿಗೆ , ಪತ್ರಕರ್ತರಿಗೆ, ಕೇವಲ ಅವಶ್ಯಕ ಸೇವಾವ್ಯಾಪ್ತಿಯೊಳಪಡುವ ಇಲಾಖೆಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಸತಕ್ಕದ್ದಲ್ಲ ಮೇಲಿನವರು ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಪಡೆಯಬಹುದೆಂದು ಸೂಚಿಸಿದ್ದಾರೆ.
ಈ ಸುದ್ದಿ ತಿಳಿಯುತಿದಂತೆ ಜನರು ಪೆಟ್ರೋಲ್ ತುಂಬಿಕೊಳಲ್ಲು ನಾಮುಂದು -ನೀಮುಂದು ಎಂದು ಪೆಟ್ರೋಲ್ ಬಂಕ್ ಕಡೆ ದೌವಡಾಯಿಸುತ್ತಿದ್ದಾರೆ.

Be the first to comment

Leave a Reply

Your email address will not be published.


*