ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಬೆಳ್ಳಗಟ್ಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆ.ಗ್ರಾಮಪಂಚಾಯ್ತಿ ಸಿಬ್ಬಂದಿ.ಕಂದಾಯ ಇಲಾಖೆ ಸಹಯೋಗದಲ್ಲಿ ಗ್ರಾಮಸ್ಥರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.ಜಾಥದಲ್ಲಿ ಪತ್ರಕತ೯ರ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕತ೯ ಬೆಳ್ಳಗಟ್ಟೆ ಕೃಷ್ಣಪ್ಪ ಮಾತನಾಡಿದರು.ಪ್ರಕೃತಿ ಮುಂದೆ ಮಾನವ ಕುನ್ನಿಮಾತ್ರ. ಪ್ರಕೃತಿಯೊಂದಿಗೆ ಚಿನ್ನಾಟವಾಡಲು ಹೊರಟ ಚೀನಾದವರ ಪಾಪದ ಕೂಸು ಕೊರೋನಾ.ರೋಗದ ಕುರಿತು ಭಯ ಭೀತಿಗೆ ಒಳಗಾಗಬಾರದು.ಜಾಗೃತ ಕ್ರಮಗಳನ್ನು ವಹಿಸಬೇಕಿದೆ.ಆರೋಗ್ಯವೇ ಮಹಾಭಾಗ್ಯ ಪ್ರತಿಯೊಬ್ಬರು ಆರೋಗ್ಯದ ಕಡೆ ನಿಗಾ ವಹಿಸಬೇಕಿದೆ ಅದು ಬೆಲೆಕಟ್ಟಲಾಗದ ಸಂಪತ್ತಾಗಿದೆ ಎಂದರು.ಕೊರೋನಾ ಕುರಿತ ಮಾಹಿತಿ ಬಿತ್ತಿ ಪತ್ರಗಳನ್ನು ಗ್ರಾಮಸ್ಥರಿಗೆ ಹಂಚುವ ಮೂಲಕ ಮತ್ತು ಧ್ವನಿವಧ೯ಕದ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು.ಹೊರ ಜಿಲ್ಲೆಗಳಿಂದ ಬಂದಂತವರಿಗೆ ಸೂಕ್ತ ತಪಾಸಣೆಗಳನ್ನು ಮಾಡಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ನಿಂಗಯ್ಯ,ಸದಸ್ಯರಾದ ಸೀತಾರಾಮ,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ಬಸವರಾಜ,ಆರೋಗ್ಯ ಸಹಾಯಕರಾದ ಶಿವರಾಜ.ಎಂ. ಕು.ಅಕ್ತರ್ ಬಾನು.ಗ್ರಾಮ ಲೆಕ್ಕಾಧಿಕಾರಿಗಳಾದ ಯಜಮಾನಪ್ಪ.ಕುಮಾರಿ ನಾಗವೇಣಿ ಪಂಚಾಯಿತಿ ಸಿಬ್ಬಂದಿ ವರ್ಗದವರು.ಆಶಾ ಕಾರ್ಯಕರ್ತರು.ಗ್ರಾಮಸ್ಥರು.ವಿದ್ಯಾಥಿ೯ಗಳು ಭಾಗವಹಿಸಿದ್ದರು.✍️
Be the first to comment