ಹುಣಸಗಿ ಲಾಕ್ ಡೌನ ಕುರಿತು ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕಿನ ಟಾಸ್ಕ್ ಫೋರ್ಸ್ ಅಧಿಕಾರಿಗಳೊಂದಿಗೆ ಶಾಸಕ ರಾಜೂಗೌಡ ಸಭೆ

ವರದಿ: ಆನಂದ ಹೊಸಗೌಡರ್ ಹುಣಸಗಿ

ಜೀಲ್ಲಾ ಸುದ್ದಿಗಳು


ಸುರಪುರ ಹಾಗೂ ನೂತನ ತಾಲೂಕು ಹುಣಸಗಿ ಲಾಕಡೌನ ಕುರಿತು ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕಿನ ಟಾಸ್ಕ್ ಫೋರ್ಸ್ ಅಧಿಕಾರಿಗಳೊಂದಿಗೆ ಸುರಪುರ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ನರಸಿಂಹ ನಾಯಕ ( ರಾಜುಗೌಡ್ರು ) ಸಭೆ ನಡೆಸಿದರು.

ದಿನಬಳಕೆ ಮತ್ತು ಅಗತ್ಯ ವಸ್ತುಗಳನ್ನು ಜನರ ಮನೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು
ಬೇರೆ ರಾಜ್ಯಗಳಲ್ಲಿರುವ ನಮ್ಮ ತಾಲೂಕಿನ ಜನರಿಗೆ ಊಟ ಮತ್ತು ಇನ್ನಿತರ ವಸ್ತುಗಳನ್ನು ಅವರು ಇದ್ದಲ್ಲೀಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಜನರು ಆತಂಕ ಪಡುವುದು ಬೇಡ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ವಿಜಯಕುಮಾರ್ ಪಾಟೀಲ, ಉಪ ತಹಶೀಲ್ದಾರ್ ಸುರೇಶ್ ಚವಲ್ಕರ್, ತಾಲ್ಲೂಕು ವೈದ್ಯಾಧಿಕಾರಿ ರಾಜಾ ವೆಂಕಟಪ್ಪ ನಾಯಕ, ಗುತ್ತಿಗೆದಾರರಾದ
ಬಿ.ಎಮ್.ಅಳ್ಳಿಕೋಟಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ವಾಮಿ ಸ್ಥಾವರಮಠ ಪೋಲಿಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು..

Be the first to comment

Leave a Reply

Your email address will not be published.


*