ಆ ಗ್ರಾಮಗಳಿಗೆ ಯಾರೂ ಬರುವಂತಿಲ್ಲ:- ಸ್ವಯಂ ಊರಿನ ಮುಖ್ಯ ರಸ್ತೆ ಬಂದ ಮಾಡುತ್ತಿರು ಯುವಕರು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಕೊರೊನಾ ವೈರಸ್ ತಡೆಗಟ್ಟಲು ರಸ್ತೆಗಳನ್ನೆ ಬ್ಲಾಕ್ ಮಾಡಿದ ಜಿಲ್ಲೆಯ ಗ್ರಾಮಸ್ಥರು

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಸಂಪೂರ್ಣ ಬಂದ್ ಬಂದ್ ಬಂದ್..

ಕಾರು ಬೈಕ್ಗಳಲ್ಲಿ ಬಂದ ಪ್ರಯಾಣಿಕರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ಸು .

ಗಿರಿನಾಡು ಯಾದಗಿರಿ ಜಿಲ್ಲೆಯ ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗ್ರಾಮಸ್ಥರು ಸಂಪೂರ್ಣ ಬಂದ ಮಾಡಿದ್ದಾರೆ.

ಹೌದು ಕೊರೊನಾ ವೈರಸ್ನ ಹರಡುವಿಕೆ ತಪ್ಪಿಸಲು ಕೇಂದ್ರ ಸರಕಾರ ದಿಂದ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.

ಇದರಿಂದ ಸಂಪೂರ್ಣ ಕರ್ನಾಟಕ ಬಂದಾಗಿದೆ
ಅದೇ ರೀತಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬೈಲಾಪುರ ಹಾಗೂ ಸುರಪುರ ತಾಲೂಕಿನ ಗೌಡಗೇರ ಗ್ರಾಮಗಳು ಪುಲ್ ಲಾಕ್ ಡೌನ್ ಆಗಿವೆ,

ತಾಲ್ಲೂಕಿನ ಇವೆರಡು ಗ್ರಾಮದ ಗ್ರಾಮಸ್ಥರು ತಮ್ಮ ಗ್ರಾಮದ ಜನರ ಆರೋಗ್ಯ ಕಾಪಾಡಿಕೊಳ್ಳಲು ಸ್ವತಃ ತಾವೇ ಮುಂದಾಗಿದ್ದು ಗ್ರಾಮಕ್ಕೆ ಬೇರೆ ಗ್ರಾಮದ ಜನರು ಬರುವುದನ್ನು ತಪ್ಪಿಸಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಜೆಸಿಬಿ ಯಂತ್ರದ ಮೂಲಕ ಕಲ್ಲು, ಮುಳ್ಳು ಮತ್ತು ಕೆಲ ನೀರಿನ ಪೂಲ್ ಗಳನ್ನು ಅಡ್ಡಗಟ್ಟಿ ರಸ್ತೆಗಳನ್ನು ಬಂದ್ ಮಾಡಲಾಗಿದ್ದಾರೆ,

ಇದರಿಂದಾಗಿ ಬೇರೆ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಬರಲಾಗುವುದಿಲ್ಲ ಆದ್ದರಿಂದ ಕೊರೊನಾ ವೈರಸ್‌ ತಡೆಗಟ್ಟಲು ಅನುಕೂಲವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಆದರೆ ಇದು ಎಷ್ಟು ಸರಿ ? :- ಬೈಲಾಪೂರದಿಂದ ಸಿದ್ದಾಪುರ , ಕಕ್ಕೆರಾ , ಇನ್ನು ಕೆಲ ದೊಡ್ಡಿಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಸುರಪುರದಿಂದ ಗೌಡಗೇರ, ನಗನೂರ ಮಾರ್ಗವಾಗಿ ಕೆಂಭಾವಿ ಮತ್ತು ಮಲ್ಲಾ ಗೆ ಕೂಡುವ ರಸ್ತೆಗಳು ಬಂದ್ ಮಾಡಿರುವುದು ತಿಳಿಯದೇ ಆ ರಸ್ತೆಯಲ್ಲಿ ಬಂದ ಜನತೆ ವಾಪಾಸ್ಸಾಗುತ್ತಿದ್ದಾರೆ, ಇದರಿಂದ ಯಾರಿಗಾದರು ಹುಷಾರಿಲ್ಲದಿದ್ದಾಗ ಅಥವಾ ಗರ್ಭಿಣಿಯರಿದ್ದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೊಗುವಂತಹ ತುರ್ತು ಸಂದರ್ಭದಲ್ಲಿ ತೊಂದರೆಯಾಗುತ್ತದೆ.

ಇದರಿಂದ ಬೇರೆ ಗ್ರಾಮದ ಜನತೆ ಬರುವುದನ್ನೆನೋ ತಪ್ಪಿಸಬಹುದು ಆದರೆ ಇದರಿಂದ ಸಾರ್ವಜನಿಕರಿಗಂತು ತೊಂದರೆ..

ವರದಿ
ರಾಘವೇಂದ್ರ ಮಾಸ್ತರ
ಯಾದಗಿರಿ

 

Be the first to comment

Leave a Reply

Your email address will not be published.


*