ಸುರಪುರ ಕೊರೋನಾ ವೈರಸ್ ಜಗತ್ತಿನಾದ್ಯಂತ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು ಯಾವುದೇ ಜನತೆ ಅನಾವಶ್ಯಕವಾಗಿ ರೋಡ್ ಗಳಲ್ಲಿ ಲ್ಲಿ ಸುತ್ತಾಡದೇ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಇರುವಂತೆ ಆದೇಶವನ್ನು ಹೋರಡಿಸಲಾಗಿದೆ.
ಆದರೇ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಕೆಲವು ಯುವಕರು (ರೋಡ್ ರೋಮಿಯೋಗಳು) ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮುಖಾಂತರ ಸಂಚರಿಸುತ್ತಿರುವಾಗ ಪೊಲೀಸರು ಅವರನ್ನು ಅಡ್ಡಗಟ್ಟಿ ಮಠಮಠ ಮಧ್ಯಾಹ್ನವೇ ಸುರಪುರ ನಗರದ ಹೃದಯಭಾಗ ಗಾಂಧಿ ಚೌಕ್ ನಲ್ಲಿ
ಕೂರಿಸಿ ಭಸ್ಕಿ ಹೊಡಿಸಿ ಯುವಕರಿಗೆ ಶಿಕ್ಷೆ ನೀಡುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಯುವಕರು ಪೊಲೀಸ್ ಅಧಿಕಾರಿಗಳ ಹತ್ತಿರ ಗೋಗರೆದು ಇನ್ನುಮುಂದೆ ನಾವು ಯಾವುದೇ ಕಾರಣಕ್ಕೂ ರೋಡಿಗೆ ಇಳಿಯುವುದಿಲ್ಲ ಸರ್ಕಾರದ ಆದೇಶವನ್ನು ಚಾಚೂತಪ್ಪದೆ ಪಾಲಿಸುತ್ತೇವೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು..
ಇನ್ನೂ ಇದೇ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟೇಶ್ ಹೋಗಿಬಂಡಿ, ಪಿಎಸ್ಐ ಚೇತನ್ ಸೇರಿದಂತೆ ಪೋಲಿಸ್ ಸಿಬ್ಬಂದಿಯವರು ಸ್ಥಳದಲ್ಲೇ ಇದ್ದರು.
Be the first to comment