ರಾಜ್ಯ ಸುದ್ದಿಗಳು
ಸುರಪುರ:ಕೊವೀಡ್-19 ಎನ್ನುವ ಮಾರಕವಾದ ಮಹಾಮಾರಿ ಕರೋನಾ ವೈರಸ್ ಮರಣಮೃದಂಗವನ್ನು ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುರಪುರ ಶಾಸಕ ರಾಜೂಗೌಡರು 2 ಲಕ್ಷ ರೂಗಳ ಚೆಕ್ ನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೋರೋನಾ ವೈರಸ್ ಇಡೀ ವಿಶ್ವದೆಲ್ಲೆಡೆ ತಾಂಡವವಾಡುತ್ತಿದ್ದು ದೆಶದ ಜನರ ಜೀವನ ಅಸ್ತವ್ಯಸ್ತವಾಗಿದೆ ಬೆಂಗಳೂರಿನಂತ ನಗರದಲ್ಲಿ ಕೂಲಿ ಕೆಲಸಕ್ಕೆಂದು ಹೋಗಿರುವ ತಾಲ್ಲೂಕಿನ ಜನತೆ ಒಂದು ತುತ್ತಿನ ಊಟಕ್ಕೂ ಸಹ ರಾಜ್ಯದ ಜನತೆ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಪರಿತಪಿಸುವಂತಾಗಿದೆ.
ಈ ಮಹಾಮಾರಿ ಕರೋನಾದಿಂದ ಪಾರಾಗುವ ನಿಟ್ಟಿನಲ್ಲಿ ಜನತೆ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಯಾರೊಬ್ಬರೂ ಹೊರಗಡೆ ಬಾರದೆ 14 ದಿನಗಳ ಕಾಲ ಮನೆಯಲ್ಲಿರುವಂತೆ ಮನವಿ ಮಾಡಿದರು.
Be the first to comment