ಜೀಲ್ಲಾ ಸುದ್ದಿಗಳು
ಸುರಪುರ: 26..ಗುರುವಾರ ಬೆಳಗ್ಗೆ ದೇವರ ಗೋನಾಲದಲ್ಲಿ ಪ್ರಾಥಮಿಕ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಮತ್ತು ಪೋಲಿಸ್ ಇಲಾಖೆ ಹಾಗೂ ಆಶಾ ಕಾರ್ಯಕತೆಯರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಊರಿನ ಮುಖಂಡರಾದ ಶಿವುಮೂನಯ್ಯ L.D.ನಾಯಕ ಅಂಬಲಯ್ಯ ಬೇಟೆಗಾರ ದೇವೇಂದ್ರಪ್ಪ ಗೌಡ ಮಾಲೀಪಾಟೀಲ್ ಮತ್ತು ಊರಿನ ಮುಖಂಡರು ಸೇರಿ ಕೋರೋನಾ ವೈರಿಸ್ ರೋಗದ ಮುಂಜಾಗ್ರತೆಗಾಗಿ ಮತ್ತು ಪೂನಾ ಮಹಾರಾಷ್ಟ್ರ ಬಾಂಬೆ ಬೆಂಗಳೂರಿನಿಂದ ಬಂದ ಜನರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿದರು.
4 ರಿಂದ 5.ಜನ ಗುಂಪು ಗುಂಪಾಗಿ ಇರಕೂಡದು ಎಂದು ಪೋಲಿಸ್ ಇಲಾಖೆ ಅಧಿಕಾರಿ ASI.ಬಸು ಮುತ್ಯ್ ಜನರಿಗೆ ತಿಳಿಸಿದರು.
ಇದನ್ನು ಪಾಲನೆ ಮಾಡದಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ವೆಂಕಟೇಶ್ ಎಚ್ ಬೇಟೆಗಾರ ಮಾತನಾಡಿ ಕೊರೊನಾ ವೈರಿಸ್ ರೋಗದ ಮುಂಜಾಗ್ರತೆ ವಹಿಸಬೇಕು ಈಗಾಗಲೇ ಸರ್ಕಾರಗಳು ಭಾರತ ಬಂದ್ ಲಾಕ್ ಡೌನ್ ಮಾಡಲಾಗಿದೆ ಯಾರು ಮನೆ ಬಿಟ್ಟು ಹೂರಗಡೆ ತಿರುಗಬಾರದು ಇರಾನ್ ಇಟಲಿ ದೇಶ ತತ್ತರಿಸಿ ಮಾರಣ ಹೋಮ ನಡೆದಿದೆ.
ದಯವಿಟ್ಟು ಆ ಪರಿಸ್ಥಿತಿ ನಮ್ಮ ಗ್ರಾಮಕ್ಕೆ ತಾಲೂಕಿಗೆ ನಮ್ಮ ಜಿಲ್ಲೆಯಲ್ಲಿ ಬರದಂತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದರು.
ಶಿವು ನಾಯಕ ಮಾತಾನಾಡಿ ಈ ಮೂರು ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಯಿಂದ ಅಚ್ಚುಕಟ್ಟಾಗಿ ಕಾರ್ಯನಿರುವಹಿತಿದ್ದಾರೆ
ನಮ್ಮ ಗ್ರಾಮ ದಲ್ಲಿ ಯಾವುದೇ ಅಂತಾ ಲಕ್ಷಣ ಇಲ್ಲ ಹಾಗೇನಾದರು ಕಂಡು ಬಂದರೆ ತಕ್ಷಣ ಆಶಾ ಕಾರ್ಯಕರ್ತೆಯರಿಗೆ ಸುದ್ದಿ ತಲುಪಿಸಿ ಎಂದರು.
ಹಾಗೆ ಊರಲ್ಲಿ ಡಂಗೂರ ಬಾರಿಸಿ ಮತ್ತು ಹಲಗಿ ಬಾರಿಸಿ ಧ್ವನಿ ವರ್ದಕದ ಮೂಲಕ ಪ್ರತಿ ಓಣಿ ವಾರ್ಡ್ ಗಳಲ್ಲೂ ಕರೋನಾ ಬಗ್ಗೆ ಜಾಗೃತಿ ಮೂಡಿಸಲಾಯಿತು.
Be the first to comment