ಜೀಲ್ಲಾ ಸುದ್ದಿಗಳು
ಹೌದು ಜಗತ್ತಿಗೆ ಮಹಾಮಾರಿಯಂತೆ ಕಂಟಕವಾಗಿ ಕಾಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನಿಡಿದ್ದರು ಇದಕ್ಕೆ ದೇಶಾದ್ಯಂತ ಉತ್ತಮವಾದ ವ್ಯಾಪಕ ಪ್ರಕ್ರಿಯೆ ವ್ಯಕ್ತವಾಗಿದೆ.
ಹರಿಹರ ತಾಲ್ಲೂಕಿನಾಯಾದ್ಯಂತ ಸಾರ್ವಜನಿಕರು ಜನತಾ ಕರ್ಫ್ಯೂ ಗೆ ಕೈ ಜೊಡಿಸಿದ್ದು , ನಗರಗಳು ಸೇರಿದಂತೆ ಪ್ರತಿ ಹಳ್ಳಿಗಳು ಸಂಪೂರ್ಣ ಸ್ಥಬ್ದವಾಗಿವೆ.
ಹರಿಹರ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಾಗಿದೆ. ಇನ್ನು ಅಲ್ಲಲ್ಲಿ ತಗೆದಿದ್ದ ಅಂಗಡಿ ಮಾಲಿಕರಿಗೆ ನಗರಸಭೆ ಅಧಿಕಾರಿಗಳು ಬೇಟಿ ನೀಡಿ ಖಡಕ್ ಆದೇಶ ನೀಡಿ ಬಂದ್ ಮಾಡಿಸಿದ್ದಾರೆ.
ಸದಾ ಜನದಟ್ಟಣೆಯಿಂದ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಹರಿಹರದ ಬಸ್ ನಿಲ್ದಾಣ ವಾಹನಗಳಿಲ್ಲದೆ ಬಿಕೋ ಎನ್ನುತ್ತಿತ್ತು .ಇನ್ನು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ರೈಲ್ವೆ ನಿಲ್ದಾಣ ನಿಶ್ಶಬ್ದವಾಗಿತ್ತು .
ಒಟ್ಟಿನಲ್ಲಿ ಹರಿಹರದ ಜನತೆ ಕರೋನಾ ವೈರಸ್ ಅನ್ನು ತಡೆಗಟ್ಟಲು ದಿಟ್ಟ ನಿರ್ಧಾರ ಮಾಡಿ ಪ್ರಧಾನಿಯವರ ಜನತಾ ಕರ್ಫ್ಯೂ ಬೆಂಬಲ ನೀಡಿದ್ದಾರೆ .
ಪ್ರಿಯರಾದ ಶಾಸಕರಾದ ಎಸ್ ರಾಮಪ್ಪನವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಪ್ರಧಾನಿಯವರ ಇಂದಿನ ಬಂದ್ಗೆ ನಾವು ಪಕ್ಷಾತೀತವಾಗಿ ತಾಲ್ಲೂಕಿನ ಜನತೆಯ ಪರವಾಗಿ ಬೆಂಬಲವನ್ನು ನೀಡುತ್ತೇವೆ ಕರೊನ ವೈರಸ್ಸನ್ನು ಹರಡದಂತೆ ಮುಂಜಾಗೃತ ಅಗತ್ಯ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು .ತಾಲ್ಲೂಕಿನ ಜನತೆ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ .ಸ್ವಿಟ್ಜರ್ಲೆಂಡ್ನಿಂದ ಬಂದಂಥ ಒಬ್ಬ ವ್ಯಕ್ತಿಗೆ ಶಂಕಿತ ಕರೊನ ವೈರಸ್ ಇರಬಹುದು ಎಂಬ ಅನುಮಾನದಿಂದ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ .
ತಾಲ್ಲೂಕಿನಲ್ಲಿ ಹಕ್ಕಿ ಗರದ ಲಕ್ಷಣ ಕಂಡು ಬಂದಿರುವುದರಿಂದ ಸಾಧ್ಯವಾದಷ್ಟು ಜನರು ಮಾಂಸಾಹಾರದಿಂದ ದೂರ ಇರುವಂತೆ ಕರೆ ನೀಡಿದರು ಅಲ್ಲದೆ ಈಗಾಗಲೇ ಕೋಳಿ ಫಾರಂಗಳನ್ನು ಮುಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ತಾಲ್ಲೂಕಿನ ಜನತೆ ಆದಷ್ಟು ಶುಚಿತ್ವದ ಕಡೆ ಗಮನ ನೀಡಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಈ ವಾಚನ್ನು ತಡೆಗಟ್ಟಲು ಸಾಧ್ಯವಿದೆ .ಎಲ್ಲರೂ ಈ ವೈರಸ್ ಹರಡದಂತೆ ಪಕ್ಷಾತೀತವಾಗಿ ಕೈಜೋಡಿಸಬೇಕು.ಹಾಗೂ ನನ್ನ ಕ್ಷೇತ್ರದ ಜನತೆ ಯಾವುದೇ ರೀತಿಯ ಭಯಭೀತರಾಗುವ ಅವಶ್ಯಕತೆ ಇಲ್ಲ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಜನತೆಗೆ ಭರವಸೆ ನೀಡಿದರು .
Be the first to comment