ಅಂಬಿಗ ನ್ಯೂಸ್ ಡೆಸ್ಕ್
ಕಿಲ್ಲರ ಕೊರೋನಾದಿಂದ ವಿಶ್ವವೆ ತತ್ತರಿಸಿ ಹೋಗುತ್ತಿದ್ದಂತೆ ಭಾರತವನ್ನು ಕಿಲ್ಲರ ಕೊರೋನಾದಿಂದ ತಪ್ಪಿಸುವ ಸಲವಾಗಿ ನರೇಂದ್ರ ಮೋದಿಯವರ ಜನತಾ ಕರ್ಪ್ಯೂಗೆ ಹುಣಸಗಿ ಜನತೆ ವ್ಯಾಪಕ ಬೆಂಬಲ ಸೂಚಿಸಿದ್ದಾರೆ .
ಹುಣಸಗಿ:-ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಪ್ಯೂಗೆ ಕರೆ ನೀಡಿದ್ದು ನರೇಂದ್ರ ಮೋದಿಯವರ ಕರೆಗೆ ಓಗೊಟ್ಟ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲೂಕಿನ ಜನ.
ಸಧ್ಯ ಹುಣಸಗಿ ನಗರದಲ್ಲೂ ಜನತಾ ಕರ್ಪ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ
ನಗರದ ಬಸ್ ನಿಲ್ದಾಣದಲ್ಲಿ ಸಂಪೂರ್ಣವಾಗಿ ಬಂದ ಮಾಡಲಾಗಿದ್ದು ಯಾವುದೇ ವ್ಯಾಪಾರ ವಹಿವಾಟು ಸಹ ಕಂಡು ಬರುತ್ತಿಲ್ಲ ಆದ್ದರಿಂದ ಬೀದಿ ಬೀದಿ ವ್ಯಾಪಾರಿಗಳು ಸಹ ಕೊರೋನಾ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಸಹ ಕಂಡ ಬರತ್ತಿದೆ. ಅಗತ್ಯ ಸೇವೆಗಳನ್ನು ಬಿಟ್ಟರೆ ಬೇರೆ ಯಾವುದೇ ಎಲ್ಲಾ ಸೇವೆಗಳು ಬಂದ್ ಆಗಿದ್ದು ಆಂಬುಲೆನ್ಸ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿರುವುದು ಮತ್ಯಾವುದೇ ವಾಹನಗಳು ಸಂಚರಿಸುತ್ತಿಲ್ಲ
ಹಾಗೆಯೇ ಪಟ್ಟಣದ ಎಲ್ಲಾ ಅಂಗಡಿ,ಮುಂಗಟ್ಟುಗಳು ಮಾಲಗಳು, ಮಧ್ಯದ ಅಂಗಡಿಗಳು ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇಂದು ಬೈಕ್ ಸವಾರರು ಕೂಡ ರೋಡಿಗಿಳಿಯದ ಕಾರಣ ಪಟ್ಟಣದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ.
ತುರ್ತು ಸೇವೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು ಸರಕಾರದ ಆದೇಶದ ಮೇರೆಗೆ ಎಲ್ಲರೂ ಜನತಾ ಕರ್ಪ್ಯೂಗೆ ಬೆಂಬಲ ಸೂಚಿಸಿ ಮನೆಯಿಂದ ಹೊರಗೆ ಬರದೇ ಕಿಲ್ಲರ್ ಕೊರೋನಾ ವಿರುದ್ಧ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಜನರು ಬೆಂಬಲ ವ್ಯಕ್ತಪಡಿಸಿದರು.
Be the first to comment