ಜೀಲ್ಲಾ ಸುದ್ದಿಗಳು
ಹುಕ್ಕೇರಿ ವರದಿ:
ಕರೋನಾ ಪಿಡುಗು ಹಬ್ಬದಂತೆ ತಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ದೇಶ್ಯಾದ್ಯಂತ ಆಚರಿಸಲು ಕರೆ ನೀಡಿರುವ ಜನತಾ ಕಫ್ಯೂ೯ಗೆ ಹುಕ್ಕೇರಿ ತಾಲೂಕಿನ ದಡ್ಡಿ ಮನಗುತ್ತಿ ಹಾಗೂ ಸಂಕೇಶ್ವರ,ಯಮಕನಮರ್ಡಿ, ಪಾಶ್ಚಾಪೂರ ಮತ್ತು ಹುಕ್ಕೇರಿ ನಗರ ಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆ 7 ಘಂಟೆಯಿಂದಲೆ ಎಲ್ಲರೂ ಸ್ವ ಪ್ರೆರಣೆಯಿಂದ ಮನೆಯೋಳಗೆ ಇದ್ದು ಸೋಂಕು ಹರಡದಂತೆ ಎಚ್ಚರ ವಹಿಸಿದರು, ಜನತಾ ಕಫ್ಯೂ೯ ಅವಧಿಯಲ್ಲಿ ಹೋಟೆಲ್, ಸಿನಿಮಾ, ದಿನಸಿ ಅಂಗಡಿ, ಪಾನ ಬೀಡಾ ಅಂಗಡಿ ಹಾಗೂ ರಸ್ತೆ ಬದಿ ವ್ಯಾಪಾರ ಸೇರಿ ಯಾವುದೇ ವಾಣಿಜ್ಯ ಚಟುವಟಿಕೆಗಳ ನಡೆದಿಲ್ಲಾ, ಮುಖ್ಯವಾಗಿ ಸಂಕೇಶ್ವರ ಬಸ್ ಡಿಪೋ ದಿಂದ ಯಾವದೆ ಬಸ್ಸು ರಸ್ತೆಗೆ ಇಳಿಯಲಿಲ್ಲಾ ಇದರಿಂದ ಬಸ್ ನಿಲ್ದಾಣಗಳು ಬೀಕೋ ಅನ್ನುತಿದ್ದವು.
ನಗರಗಳಲ್ಲಿ ಅಟೋ ರಿಕ್ಷಾ ಮತ್ತು ಖಾಸಗಿ ವಾಹನಗಳು ಸಂಪೂರ್ಣ ಬಂದ್ ಆಗಿದ್ದವು, ಪಟ್ಟಣಗಳಲ್ಲಿಯ ಗುಡಿ ಗುಂಡಾರಗಳು ಮತ್ತು ಮಠಮಾನ್ಯಗಳು ಬಾಗಿಲು ಹಾಕಿ ದಿಗ್ಭಂದನ ಮಾಡಲಾಗಿತ್ತು.
ಒಟ್ಟಾರೆಯಾಗಿ ಜಾತಿ, ಮತ, ಬೇಧ ವಿಲ್ಲದೆ ಎಲ್ಲರೂ ಕರೋನ ವೈರಸ್ ವಿರುದ್ಧ ಹೋರಾಡಲು ಸಚ್ಚಾಗಿದ್ದಾರೆ, ಎನೆ ಆಗಲಿ ನಮ್ಮ ದೇಶದ ನೆಲ, ಜಲ, ಸಂಸ್ಕೃತ, ವೇದ, ಹೋಮ ,ಹವನ, ಧೂಪ್, ಯಾಗ ಗಳಿಂದ ರೋಗಗಳನ್ನು ತಡೆಗಟ್ಟಲು ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದ್ದರು ಆದರೆ ನಾವು ಪಾಶ್ಚಿಮಾತ್ಯ ದೇಶಗಳ ಫ್ಯಾಶನ್ ಗಳಿಗೆ ಮಾರು ಹೋಗಿ ಭಯಾನಿಕ ರೊಗಗಳಿಗೆ ದಾರಿ ಮಾಡುತ್ತಿದ್ದೆವೆ.
Be the first to comment