ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಡೆಸ್ಕ್
ಬೆಂಗಳೂರು:- ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಕರೋನಾ ಎಂಬ ಮಹಾಮಾರಿ ರೋಗದ ನಿರ್ಮೂಲನೆಗಾಗಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವವಾಗಿ ಬೆಂಬಲವನ್ನು ಸುರಪುರ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ (ರಾಜುಗೌಡ್ರು) ತಮ್ಮ ಮಡದಿ ಮೈತ್ರಾ ಹಾಗೂ ಹಾಗೂ ಸುಪುತ್ರ ಮಣಿಕಂಠ ರ ಜೊತೆಗೂಡಿ ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಸೂಚಿಸಿದರು.
ಜಾಹೀರಾತು
ಜನತಾ ಕರ್ಫ್ಯೂನ ಯಶಸ್ಸನ್ನು ಎತ್ತಿ ತೋರಿಸಲು ಸಂಜೆ 5 ಗಂಟೆಗೆ ತಮ್ಮ ಬೆಂಗಳೂರಿನ ನಿವಾಸದಿಂದ ಹೊರ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ನಿರ್ಮೂಲನೆಗೆ ಶ್ರಮಿಸುತ್ತಿರುವ ವೈದ್ಯರು, ಸೈನಿಕರು ಹಾಗೂ ಪೌರ ಕಾರ್ಮಿಕರೂ ಸೇರಿ ಎಲ್ಲರಿಗೂ ಧನ್ಯವಾದ ಸಲ್ಲಿಸುವ ಮೂಲಕ ಕೊರೊನಾ ನಿರ್ಮೂಲನೆಯ ಸಂಕಲ್ಪ ಮಾಡೋಣ ಎಂದು ಮಾನ್ಯ ಶಾಸಕರು ಸರ್ವ ಜನರಲ್ಲಿ ಮನವಿ ಮಾಡಿದರು
Be the first to comment