ಜೀಲ್ಲಾ ಸುದ್ದಿಗಳು
ಜಾಹೀರಾತು
ಅಂಬಿಗ ನ್ಯೂಸ್ ಟಿವಿ ಡೆಸ್ಕ್
ಸುರಪುರ:ವಿಶ್ವದಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ಮಹಾಮಾರಿ ಕರೋನಾ ವೈರಸ್ ಮರಣಮೃದಂಗವನ್ನು ಬಾರಿಸುತ್ತಿದ್ದು ಈ ಸೊಂಕು ಒಬ್ಬರಿಂದ ಇನ್ನೊಬ್ಬರಿಗೆ ಹೊರಡುವುದನ್ನು ತಡೆಗಟ್ಟುವ ಸಲುವಾಗಿ ರಂಗಂಪೇಟೆಯಲ್ಲಿ ಬರುವ ಶುಕ್ರವಾರ ವಾರದ ಸಂತೆ ಹಾಗೂ ಭಾನುವಾರ ದನಗಳ ಸಂತೆ ಮತ್ತು ಸುರಪುರದಲ್ಲಿ ನಡೆಯುವ ಸೋಮವಾರ ಸಂತೆಯನ್ನು ಬಂದ್ ಮಾಡಲಾಗಿದೆ ಎಂದು ಪೌರಾಯುಕ್ತ ಜೀವನ್ ಕುಮಾರ್ ಕಟ್ಟಿಮನಿ ತಿಳಿಸಿದರು.
ಅವರು ಬುಧವಾರ ನಗರಸಭೆಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ಆದೇಶದಂತೆ ನಗರದ ವ್ಯಾಪ್ತಿಯಲ್ಲಿ ಇದೇ ಮಾರ್ಚ್ 18 ರಿಂದ 31 ನೇ ತಾರೀಖಿನವರೆಗೆ ಬಾರ್ ಮತ್ತು ರೆಸ್ಟೋರೆಂಟ್ ಗಳು ಹೋಟೆಲ್ ಬೇಕರಿ ಮೆಸ್ ಗಳು ಬೀದಿ ಬದಿಯ ತೆರೆದ ಹಣ್ಣಿನ ಬಂಡಿಗಳ ಹಾಗೂ ಆಹಾರ ಮಾರಾಟಗಾರರು ಕೋಳಿ ಕುರಿ ಮಾಂಸ ಮಾರಾಟಗಾರರು ಮಾಲ್ ಗಳು ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಾದ ಸಂತೆ ಜಾತ್ರೆ ಉದ್ಯಾನವನಗಳು ಸಭೆ ಸಮಾರಂಭಗಳು ವಸ್ತು ಪ್ರದರ್ಶನ ಮುಂತಾದವುಗಳನ್ನು ಬಂದ್ ಮಾಡಲಾಗಿದೆ.
ಕೋಳಿ ಮಾಂಸದ ಮಾರಾಟ ತೆರೆದ ಹಣ್ಣುಗಳು ಆಹಾರ ಪದಾರ್ಥಗಳನ್ನು ಒಂದು ವಾರದ ವರೆಗೆ ನಿಷೇಧಿಸಲಾಗಿದೆ ನಗರಸಭೆಯ ವ್ಯಾಪ್ತಿಯ ಸಾರ್ವಜನಿಕರು ವ್ಯಾಪಾರಸ್ಥರು ಕೋವಿಡ್ 19 ತಡಟ್ಟುವ ನಿಟ್ಟಿನಲ್ಲಿ ಚಾಚೂ ತಪ್ಪದೇ ಪಾಲಿಸಬೇಕು
ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
Be the first to comment