ವಿದೇಶಗಳಿಂದ ಸುರಪುರ ನಗರಕ್ಕೆ ಆಗಮಿಸಿದ 14 ಜನರಿಗೆ ಯಾವುದೇ ವೈರಸ್ ನ ಲಕ್ಷಣಗಳಿಲ್ಲ ಡಾ: ಆರ್.ವ್ಹಿ.ನಾಯಕ್ ಸ್ಪಷ್ಟನೆ

ವರದಿ: ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು


ಜಾಹೀರಾತು

 

ಸುರಪುರ: ವಿವಿಧ ದೇಶಗಳಿಂದ ಸಧ್ಯ ಸುರಪುರಕ್ಕೆ8 ಜನ,ರಂಗಂಪೇಟೆಗೆ (ಇಬ್ಬರು) 2,ಯಾಳಗಿಗೆ 3 ಜನ, ಕೆಂಭಾವಿಯಲ್ಲಿ (1)ಒಬ್ಬ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 14 ಜನರು ವಿದೇಶದಿಂದ ಆಗಮಿಸಿದ್ದಾರೆ. ಅದರಲ್ಲಿ ಇಬ್ಬರೂ ವ್ಯಕ್ತಿಗಳು ಬೆಂಗಳೂರಿನಲ್ಲಿದ್ದು ಉಳಿದ 12 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಸಧ್ಯ ಇವರ್ಯಾರಲ್ಲೂ ಯಾವುದೇ ವೈರಸ್ ನ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ಜನ ಭಯಪಡುವ ಅಗತ್ಯವಿಲ್ಲ ಎಂದು ತಾಲೂಕಾ ವೈದ್ಯಾಧಿಕಾರಿ ಡಾ: ರಾಜಾ ವೆಂಕಪ್ಪ ನಾಯಕ ಅವರು ತಿಳಿಸಿದರು.

ಬುಧವಾರ ನಗರಸಭೆಯ ಸಭಾಂಗಣದಲ್ಲಿ
ಕೊರಾನಾ ವೈರಸ್ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ದೇಶಗಳಿಂದ ತಮ್ಮ ಊರುಗಳಿಗೆ ಮತ್ತು ವಾರ್ಡ್ಗಳಿಗೆ ಯಾರಾದರೂ ಬಂದರೆ ಕೂಡಲೇ ನಮ್ಮ ವೈದ್ಯರಿಗೆ ತಿಳಿಸಬೇಕೆಂದರು.

ಸರ್ಕಾರಿ ಆಸ್ಪತ್ರೆಯಲ್ಲಿ
ಈಗಾಗಲೇ ಎರಡು ಪ್ರತ್ಯೇಕ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ವಿದೇಶದಿಂದ ಬಂದ 12 ಜನರಿಗೆ ಅವರವರ ಮನೆಗಳಲ್ಲಿ ಪ್ರತ್ಯೇಕವಾಗಿ 14 ದಿನ ಇರಲು ಸೂಚಿಸಲಾಗಿದೆ ಹಾಗೂ ಯಾಳಗಿ,ರಂಗಂಪೇಟ,ಸುರಪುರ,ಕೆಂಭಾವಿಯಲ್ಲಿ ಪ್ರತಿ ನಿತ್ಯ ವೈದ್ಯರ ತಂಡ ಗ್ರಾಮಕ್ಕೆ ತೆರಳಿ ತಪಾಸಣೆ ಮಾಡುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಏರಿಯಾದದಲ್ಲಿ ಮಾಸ್ಕ್ ಹಾಕಿಕೊಳ್ಳಬೇಕೇ ಹೊರತು ಯಾವುದೇ ವೈರಸ್ ಲಕ್ಷಣಗಳು ಇರದಿದ್ದಲ್ಲಿ ಮಾಸ್ಕ್ ಹಾಕಿಕೊಳ್ಳುವ ಅವಶ್ಯಕತೆಯಿಲ್ಲ, ಈಗಾಗಲೇ ನಮ್ಮಆರೋಗ್ಯ ಇಲಾಖೆಯಿಂದ ಕೊರಾನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಲಾಗಿದೆ, ಹಾಗೂ ಅಲ್ಲಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ, ಹಾಗೂ ನಗರಸಭೆಯವರು ಆಟೋಗಳಲ್ಲಿ ಧ್ವನಿಮುದ್ರಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಕೊರಾನಾ ವೈರಸ್ ಗೆ ಚಿಕಿತ್ಸೆ ಲಭ್ಯವಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಇಂಗ್ಲೆಂಡಿನಲ್ಲಿ ವೈರಸ್ ಬಂದ 16 ಜನರನ್ನು ಡಾ:ಪತಂಜಲಿಯವರು ಗುಣಪಡಿಸಿದ್ದಾರೆ ಎಂದರು.

ಉಪನ್ಯಾಸಕರಾದ ವೇಣುಗೋಪಾಲ್ ಜೇವರ್ಗಿ,ಸದಸ್ಯರಾದ ವೇಣುಮಾಧವನಾಯಕ, ರಾಜಾಪಿಡ್ಡನಾಯಕ( ತಾತಾ )ಹಾಗೂ ಕೆಲ ಸದಸ್ಯರು ಮಾತನಾಡಿ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಕೂಡಲೇ ತೆರವು ಗೊಳಿಸಬೇಕೆಂದು ಆಗ್ರಹಿಸಿದರು ಹಾಗೂ ಚರಂಡಿಗಳು ಸ್ವಚ್ಛತೆ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪೌರಾಯುಕ್ತರಿಗೆ ತಿಳಿಸಿದರು.

ಪೌರಾಯುಕ್ತರು ಮಾತನಾಡಿ,ಈಗಾಗಲೇ ನಗರದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆ ಮಾಡಿ ಬ್ಲಿಚಿಂಗ್ ಪೌಡರ್ ಹಾಕಲು ಖಡಕ್ಕಾಗಿ ಸೂಚಿಸಿದ್ದೇನೆ ಹಾಗೂ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮದುವೆ,ನಿಶ್ಚಿರ್ಥಾ,ಸಭೆ,
ಸಮಾರಂಭಗಳನ್ನು ಮಾಡುವಂತಿಲ್ಲ ಒಂದು ವೇಳೆ ಮದುವೆ ಮೊದಲೇ ಮಾಡಲು ನಿರ್ಧರಿಸಿದ್ದಲ್ಲಿ ಕೇವಲ ಕುಟುಂಬದವರನ್ನು ಹೊರತು ಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರುವಂತಿಲ್ಲ ಎಂದರು. ಎಇಇ ಶಾಂತಪ್ಪ ಹೊಸೂರು, ಜೆ,ಶಿವರಸ್ ಸುನ್ನಾದಾಳ,ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಸುನೀಲ್ ನಾಯಕ,ಲಕ್ಷ್ಮಣ ಕಟ್ಟೀಮನಿ,ರವೀಕುಮಾರ ಸದಸ್ಯರಾದ ಶಿವು ಕಟ್ಟೀಮನಿ ಮಹ್ಮದಗೌಸ್ ಕಿಣ್ಣಿ,ಖಮುರಲ್ ನಾರಾಯಣಪೇಟ, ಮಾನಪ್ಪ ಚಳ್ಳಿಗಿಡ,ಮಲ್ಕಪ್ಪಗೌಡ ಹಸನಾಪುರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*