ಜೀಲ್ಲಾ ಸುದ್ದಿಗಳು
ಜಾಹೀರಾತು
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ನ್ಯಾಯಾಲದಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದಲ್ಲಿ ತುತು೯ಪ್ರಕರಣಗಳನ್ನು ಹೊರತು ಪಡಿಸಿ.ಯಾವುದೇ ಪ್ರಕರಣಗಳ ಕಲಾಪಗಳು ನಡೆಯುದಿಲ್ಲ ಕಾರಣ ವಕೀಲರನ್ನು ಹೊರತು ಪಡಿಸಿ ಕಕ್ಷಿದಾರರಿಗೆ ಹಾಗೂ ಸಾವ೯ಜನಿಕರಿಗೆ ಅನಿಧಿ೯ಷ್ಟಾವಧಿ ಕಾಲ ಪ್ರವೇಶ ನಿಷೇಧಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ತಿಳಿಸಿದ್ದಾರೆ. ಕನಾ೯ಟಕ ಉಶ್ಚನ್ಯಾಯಾಲಯ ಈ ಸಂಬಂಧ ಆದೇಶ ಹೊರಡಿಸಿದ್ದು ಈ ಹಿನ್ನಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದರು.ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳ ಕಲಾಪಗಳು ನಡೆಯುವುದಿಲ್ಲ.
ತುತು೯ ಪ್ರಕರಣಗಳಿಗೆ ಮಾತ್ರ ಅವಕಾಶವಿದ್ದು.ವಕೀಲರೊಂದಿಗೆ ಅನಿವಾಯ೯ತೆ ಇರುವವರಿಗೆ ಮಾತ್ರ ಪ್ರವೇಶವಿರುತ್ತದೆ. ಉಳಿದ ಎಲ್ಲಾ ಪ್ರಕರಣಗಳಲ್ಲಿ ಕಕ್ಷಿದಾರರ ಪರವಾಗಿ ಅವರ ಪರ ವಕೀಲರು ಮಾನ್ಯ ನ್ಯಾಯಾಧೀಶರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯಿದೆಯ ಮುಂದಿನ ದಿನಾಂಕವನ್ನು ಪಡೆದು ಕಕ್ಷಿದಾರರಿಗೆ ನೀಡಲಿದ್ದಾರೆ.ಕಾರಣ ಕಕ್ಷಿದಾರರು ಸಾವ೯ಜನಿಕರು ನ್ಯಾಯಾಲಯದ ಆದೇಶದನ್ವಯ ಹಾಗೂ ಸಾವ೯ಜನಿಕ ಹಿತಾಸಕ್ತಿಗಾಗಿ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲ ಪ್ರವೇಶ ನಿಷೀಧಿಸಿದಲಾಗಿದೆ.ಕಾರಣ ಸವ೯ರೂ ಸಹಕರಿಸಬೇಕೆಂದು ಜಿ.ಹೊನ್ನೂರಪ್ಪ ಕೋರಿದ್ದಾರೆ. ವಕೀಲರ ಸಂಘದ ಉಪಾಧ್ಯಕ್ಷ ಟಿ.ಎ.ಸಲೀಂ.ಜಂಟಿಕಾಯ೯ದಶಿ೯ ಟಿ.ಮಲ್ಲಿಕಾಜು೯ನ. ವಕೀಲರಾದ ಸೀತಾರಾಮಗೌಡ. ಭಾಷಾಸಾಬ್.ಕೆ.ಕೆ.ಹಟ್ಟಿ ಯು.ಚಂದ್ರು.ಮುಂತಾದವರು ಉಪಸ್ಥಿತರಿದ್ದರು
Be the first to comment