ಲಿಂಗಸೂಗೂರು ವರದಿ .ಸಪ್ಟಂಬರ 06
ಲಿಂಗಸೂಗೂರು: ತಾಲೂಕಿನಾದ್ಯಂತ ಖಾಸಗಿ ಶಾಲೆಗಳ ವಾಹನಗಳಲ್ಲಿ ತರಬೇತಿ ಇಲ್ಲದೇ ವಾಹನ ಚಾಲಕರು ಇದ್ದಾರೆ ಹಾಗೂ ಕುಡಿದ ಅಮಲಿನಲ್ಲಿ ಚಾಲಕರು ವಾಹನ ಚಲಾಯಿಸುತ್ತಿದ್ದಾರೆ. ಚಾಲನ ಪರವಾನಿಗೆ ಇಲ್ಲದೇ ಸಹ ಶಾಲಾ ವಾಹನ ನಡೆಸುತ್ತಿದ್ದು ಗುರುವಾರದಂದು ಮಾನ್ವಿ ತಾಲೂಕಿ ಕಪಗಲ್ ಗ್ರಾಮದ ಹತ್ತಿರ ಲೋಯಲಾ ಶಾಲೆಯ ವಾಹನವು ರಸ್ತೆ ಅಪಘಾತಕೀಡಾಗಿದ್ದು ಕೇಳಿ ದುಖಃವನ್ನು ವ್ಯಕ್ತಪಡಿಸುತ್ತೇವೆ ಅದರಲ್ಲಿ ನಮ್ಮ ದೇಶದ ಮುಂದಿನ ಅಮೂಲ್ಯ ರತ್ನಗಳು ಇದ್ದವು ಇದರಲ್ಲಿ ವಿದ್ಯಾರ್ಥಿಳು ಸಹ ಮೃತರಾಗಿರುತ್ತಾರೆ. ಹಾಗೂ ವಿದ್ಯಾರ್ಥಿಗಳಿಗೆ ಗಾಯಾಳುಗಳಾಗಿದ್ದು ಹೀಗಾಗಿ ಪೋಲಿಸರು ಹಲವಾರು ನಿಯಮ ಪಾಲನೆಗೆ ಸೂಕ್ತ ಕ್ರಮಗಳನ್ನು ಸಹ ಕೈಗೊಂಡಿರುತ್ತಾರೆ. ಆದರೂ ಸಹ ಖಾಸಗಿ ಆಡಳಿತವು ಶಿಪಾರಸ್ಸು ಮಾಡಿ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಸೂಕ್ತ ಭದ್ರತೆ ಇಲ್ಲದೇ ಡ್ಯಾಶ ಬೋರ್ಡ ಕ್ಯಾಮರಾ ಸಹ ಇಲ್ಲದೇ ಹಲವಾರು ವಾಹನಗಳು ತಾಲೂಕಿನ್ಯಾದಂತ್ಯ ನಡೆಸುತ್ತಿದ್ದಾರೆ ಪ್ರತಿ ವಾಹನದಲ್ಲಿ ಡ್ಯಾಶ ಬೋರ್ಡ ಕ್ಯಾಮರವನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಬೇಕು. ಶಾಲೆಯ ಮಕ್ಕಳು ಸೀಟ್ ಗಿಂತ ಹೆಚ್ಚು ಮಕ್ಕಳು ಕುಳಿಸಿಕೊಳ್ಳುತ್ತಾರೆ. ಸ್ವಾಲಿಡಾರಿಟ್ ಯುತ್ ಮೊಮೆಂಟ್ ಕರ್ನಾಟಕ ವತಿಯಿಂದ ಕ್ಷೇತ್ರಶಿಕ್ಷಣಾಧಿಕಾರಿಗಳ ಲಿಂಗಸೂಗೂರು ಮನವಿ ಸಲ್ಲಿಸಿದರು.
ಈಸಂದರ್ಭದಲ್ಲಿ ಸೈಯದ್ ಅಮ್ಮದ್ ಅಲಿ,ಡಾ ಮಹ್ಮಮದ್ ಜಾವೀದ್, ಮಹಮ್ಮ ಆಲಂ,ನವಾಬ್,ಅಹ್ಮದ್ ಅಲಿ,ಸೈಯದ್ ಯುನೀರ್ ,ರಾಜ ಮಹ್ಮದ್ ,ಬಾಬ ಕೆಬಿಎನ್, ಸೈಯದ್ ಯೂನೀಸ್ ,ಸೈಯದ್ ಅಬ್ದುಲ್ ರಜಾಕ್ ಸೇರಿದಂತೆ ಇನ್ನಿತರರು ಇದ್ದರು.
Be the first to comment